ತುಮಕೂರಿನಲ್ಲಿ 21 ಜ್ಯೋರ್ತಿಲಿಂಗಗಳ ರಥಯಾತ್ರೆ

205

Get real time updates directly on you device, subscribe now.

ತುಮಕೂರು: ಮಹಾಶಿವರಾತ್ರಿ ಪ್ರಯುಕ್ತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ವತಿಯಿಂದ ವಿಶ್ವಶಾಂತಿ ಸದ್ಭಾವನೆಗಾಗಿ ಬಂಗಾರ ವರ್ಣದ 21 ಜ್ಯೋರ್ತಿಲಿಂಗಗಳ ರಥಯಾತ್ರೆ ಮತ್ತು ಶೋಭಾ ಯಾತ್ರೆಯನ್ನು ನಗರದಲ್ಲಿಂದು ನಡೆಸಲಾಯಿತು.

21 ಜ್ಯೋರ್ತಿಲಿಂಗಗಳನ್ನು ಹೊತ್ತ ವಾಹನಗಳ ರಥಯಾತ್ರೆ ಮತ್ತು ಶೋಭಾಯಾತ್ರೆಯು ರಿಂಗ್‌ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ಹೊರಟು ಮರಳೂರು, ಕುಣಿಗಲ್‌ ರಸ್ತೆ, ಕಾಲ್‌ಟೆಕ್ಸ್ ಸರ್ಕಲ್‌, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ ಚರ್ಚ್‌ ಸರ್ಕಲ್‌, ಟೌನ್ ಹಾಲ್‌ ಸರ್ಕಲ್‌, ಎಂ.ಜಿ. ರಸ್ತೆ, ಗುಂಚಿ ಸರ್ಕಲ್‌, ಹೊರಪೇಟೆ ಸರ್ಕಲ್‌, ಕೆ.ಆರ್‌. ಬಡಾವಣೆ, ಬಿ.ಹೆಚ್‌. ರಸ್ತೆ ಭದ್ರಮ್ಮ ವೃತ್ತದ ಮುಖೇನ ಸಾಗಿ ಎಸ್‌.ಎಸ್‌.ಪುರಂ ಮುಖ್ಯ ರಸ್ತೆ, ಎಸ್‌ಎಸ್‌ಐಟಿ ಮುಖ್ಯ ರಸ್ತೆ, ಗಂಗೋತ್ರಿ ರಸ್ತೆ ಮುಖಾಂತರ ಬಿ.ಹೆಚ್‌. ರಸ್ತೆಯ ಮಿರ್ಜಿ ಪೆಟ್ರೋಲ್‌ ಬಂಕ್‌, ಬಿ.ಹೆಚ್‌. ರಸ್ತೆ ಹಾಗೂ ರಿಂಗ್‌ ರಸ್ತೆ ಮುಖಾಂತರ ಮತ್ತೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ತಲುಪಿತು.
ನಗರದ ವಿವಿಧ ರಸ್ತೆಯಲ್ಲಿ ಸಂಚರಿಸಿದ ಜ್ಯೋರ್ತಿಲಿಂಗ ರಥಯಾತ್ರೆ ಮತ್ತು ಶೋಭಯಾತ್ರೆಯನ್ನು ಸಾರ್ವಜನಿಕರು ವೀಕ್ಷಿಸಿ ಶ್ರದ್ಧಾ ಭಕ್ತಿಯಿಂದ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸುಜಾತ, ಶಿವರಾತ್ರಿ ಪ್ರಯುಕ್ತ ಇಂದು ಮತ್ತು ನಾಳೆ ಭಾರತ ಅಂದು ಇಂದು ಮುಂದು ಅದ್ಭುತ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಅದ್ಭುತ ಪ್ರದರ್ಶನ ಇಂದು ಸಂಜೆ 6.30ಕ್ಕೆ ಉದ್ಘಾಟನೆಯಾಗಲಿದ್ದು, ರಾತ್ರಿ 9.30ರ ವರೆಗೆ ನಡೆಯಲಿದೆ. ಮಾ. 1 ರಂದು ಸಂಜೆ 6.30 ರಿದ ರಾತ್ರಿ 11 ಗಂಟೆಯವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಈ ಹಿಂದೆ ಭಾರತ ಹೇಗಿತ್ತು, ಮುಂದಿನ ಭಾರತ ಹೇಗಿರಲಿದೆ ಎಂಬ ಬಗ್ಗೆ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವೀಕ್ಷಿಸಬೇಕು ಎಂದು ಅವರು ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!