ತಾರತಮ್ಯ ಮಾಡದೆ ರಾಗಿ ಖರೀದಿಗೆ ಸರಕಾರಕ್ಕೆ ಮನವಿ: ಮಸಾಲೆ

295

Get real time updates directly on you device, subscribe now.

ತುರುವೇಕೆರೆ :ರಾಗಿ ಖರೀದಿ ಕೇಂದ್ರದಲ್ಲಿ ದೊಡ್ಡ ಹಿಡುವಳಿದಾರರು ಬೆಳೆದ ರಾಗಿಯನ್ನು ಖರೀದಿಸಲು ಅವಕಾಶ ಕಲ್ಪಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಮಸಾಲಜಯರಾಮ್‌ ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿಕ ಸಮಾಜದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸಣ್ಣ ಹಿಡುವಳಿದಾರರು ಬೆಳೆದ ರಾಗಿ ಖರೀದಿ ಕೇಂದ್ರದಲ್ಲಿ ಖರೀದಿಸಲಾಗುತ್ತಿದೆ, ದೊಡ್ಡ ಹಿಡುವಳಿದಾರರು ಬೆಳೆದ ರಾಗಿಯನ್ನೂ ಸಹ ರಾಗಿ ಖರೀದಿ ಕೇಂದ್ರದ ಮೂಲಕವೇ ಕೊಂಡುಕೊಳ್ಳಲಾಗುವುದು, ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದ್ದು ಸರಕಾರ ದೊಡ್ಡ ಹಿಡುವಳಿದಾರರಿಂದ ರಾಗಿ ಖರೀದಿಸುವ ಬಗ್ಗೆ ನಿರ್ಧಾರ ಪ್ರಕಟಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿಕ ಸಮಾಜದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿರುವುದು ಸಂತಸ ತಂದಿದೆ. ಕೃಷಿಕ ಸಮಾಜದ ಕಟ್ಟಡ ನಿರ್ಮಾಣದ ನಂತರ ರೈತ ಪರ ಕಾರ್ಯಕ್ರಮ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆಗಳು ಪೂರಕ ಕಾರ್ಯಕ್ರಮ ರೂಪಿಸುವಂತಾಗಬೇಕು, ಸರಕಾರ ರೂಪುಗೊಳಿಸಿರುವ ಯೋಜನೆಗಳು ಅರ್ಹರನ್ನು ತಲುಪುವಂತಾಗಲಿ ಎಂದು ಆಶಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ಕೆಂಪರಾಜು ಮಾತನಾಡಿ, ಮುಂಬರುವ ದಿನಗಳಲ್ಲಿ ಕೃಷಿಕ ಸಮಾಜದ ಕಟ್ಟಡದಲ್ಲಿ ರೈತರಿಗಾಗಿ ಮಾಹಿತಿ ಕೇಂದ್ರ ತೆರೆಯಲಾಗುವುದು. ಕೃಷಿ ಸಬಲೀಕರಣಕ್ಕಾಗಿ ರೂಪುಗೊಳಿಸುವ ಸರಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವುದು. ರೈತರಿಗೆ ತರಬೇತಿ ಸೇರಿದಂತೆ ರೈತ ಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ನರಸಿಂಹ, ಪಟ್ಟಣ ಪಂಚಾಯತ್‌ ಅಧ್ಯಕ್ಷ ಚಿದಾನಂದ್‌, ಕೃಷಿಕ ಸಮಾಜದ ಉಪಾಧ್ಯಕ್ಷ ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್‌, ಪಪಂ ಸದಸ್ಯ ಎನ್‌.ಆರ್‌.ಸುರೇಶ್‌, ಎಪಿಎಂಸಿ ಸದಸ್ಯರಾದ ವಿ.ಟಿ.ವೆಂಕಟರಾಮ್‌, ಹಿಂಡಮಾರನಹಳ್ಳಿ ನಾಗರಾಜ್, ಪ್ರಸನ್ನ, ವಿಜಯೇಂದ್ರ, ಚಂದ್ರಣ್ಣ, ಪ್ರಸಾದ್‌, ಎಡಿಎ ಪ್ರಜಾ, ಕೃಷಿ ಅಧಿಕಾರಿ ನರಸಿಂಹರಾಜು ಸೇರಿದಂತೆ ಅನೇಕರು ಇದ್ದರು.

Get real time updates directly on you device, subscribe now.

Comments are closed.

error: Content is protected !!