ಮಕ್ಕಳಿಗೆ ಶಿಕ್ಷಣದೊಂದಿಗೆ ಪೌಷ್ಠಿಕಾಂಶ ಆಹಾರ ಅಗತ್ಯ

211

Get real time updates directly on you device, subscribe now.

ಶಿರಾ: ಮಕ್ಕಳು ಕಲಿಕೆಯಲ್ಲಿ ಸಕ್ರಿಯವಾಗಿ ತೊಡಗಲು ಹಾಗೂ ಸದಾ ಲವಲವಿಕೆಯೊಂದಿಗೆ ಬೆಳವಣಿಗೆ ಹೊಂದಲು, ಶಿಕ್ಷಣದಷ್ಟೇ ಪ್ರಾಮುಖ್ಯತೆಯನ್ನು ಪೌಷ್ಠಿಕಾಂಶಯುಕ್ತ ಆಹಾರ ನೀಡುವಲ್ಲಿಯೂ ಗಮನಹರಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಗಂಗಾಧರ್‌ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಗಾಣದಹುಣಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳಿಗೆ ಸಾಯಿಶ್ಯೂರ್‌ ಹೆಲ್ತ್ ಮಿಕ್ಸ್ ಪೌಡರ್ ನ್ನು ತಾಲ್ಲೂಕಿನ ಎಲ್ಲಾ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಮಕ್ಕಳು ಅಪೌಷ್ಠಿಕತೆಯಿಂದ ಬಳಲಬಾರದೆಂದು ಶಿಕ್ಷಣ ಇಲಾಖೆಯು ಅಕ್ಷರ ದಾಸೋಹ ಹಾಗೂ ಕ್ಷೀರಭಾಗ್ಯ ಕಾರ್ಯಕ್ರಮ ಜಾರಿಗೆ ತರಲಾಯಿತು, ಈಗ ಹಾಲಿನೊಂದಿಗೆ ಬೆರೆಸಿ ಮಕ್ಕಳಿಗೆ ನೀಡುವ ಎಲ್ಲಾ ಪೋಷಕಾಂಶ ಒಳಗೊಂಡ ಸಾಯಿ ಶ್ಯೂರ್‌ ಪೌಡರ್‌ ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಶ್ರೀಸಾಯಿ ಅನ್ನಪೂರ್ಣ ಟ್ರಸ್ಟ ವತಿಯಿಂದ ಅನುಷ್ಠಾನ ಮಾಡಿರುವ ಈ ಕಾರ್ಯಕ್ರಮ ಅತಿ ಹೆಚ್ಚು ಪ್ರಯೋಜನವಾಗಲಿದೆ ಎಂದರು.
ಟ್ರಸ್ಟ್ ನ ಕರ್ನಾಟಕ ರಾಜ್ಯದ ರೀಜಿನಲ್‌ ಮ್ಯಾನೇಜರ್‌ ಕಿರಣ್‌ ಮಾತನಾಡಿ ರಾಜ್ಯದ 20 ಜಿಲ್ಲೆಗಳಲ್ಲಿ ಸುಮಾರು ಮೂರುವರೆ ಲಕ್ಷ ಮಕ್ಕಳಿಗೆ ಇದರ ಅನುಕೂಲ ಪಡೆಯುತ್ತಿದ್ದಾರೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕೊರಟಗೆರೆ, ಪಾವಗಡ ಹಾಗೂ ಮಧುಗಿರಿ ತಾಲ್ಲೂಕಿನ ಮಕ್ಕಳಿಗೆ ಕಳೆದ ವರ್ಷದಿಂದ ಈ ಪೌಡರ್‌ ನೀಡಲಾಗುತ್ತಿದೆ. ಶಿರಾ ತಾಲ್ಲೂಕಿನಲ್ಲಿಯೂ ಸಹ ಇಂದಿನಿಂದ ಪ್ರಾರಂಭ ಮಾಡಲಾಗಿದೆ ಎಂದರು.
ರಾಷ್ಟ್ರೀಯ ವ್ಯವಸ್ಥಾಪಕ ಸಂತೋಷ್‌ ಮಾತನಾಡಿ, ಶ್ರೀಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಬೆಳಗಿನ ಉಪಾಹಾರ ನೀಡುವ ವ್ಯವಸ್ಥೆ ಮಾಡಿದ್ದು, ದೇಶದ 20 ರಾಜ್ಯ ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತಂದಿದ್ದು, ವಿಶೇಷವಾಗಿ ಗ್ರಾಮೀಣ ಹಾಗೂ ಬಡಕುಟುಂಬಗಳಿಂದ ಬರುವ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಸಾಯಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಸತ್ಯನಾರಾಯಣ್‌ ಮಾತನಾಡಿ, ಶ್ರೀಸಾಯಿ ಟ್ರಸ್ಟ್ ಆರೋಗ್ಯ, ಶಿಕ್ಷಣ ಹಾಗೂ ಆಹಾರ ಸೇರಿದಂತೆ ದೇಶದ ಜನರಿಗೆ ಅವಶ್ಯಕವಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ರಾಷ್ಟ್ರದ ಏಳಿಗೆಗೆ ಶ್ರಮಿಸಲಾಗುತ್ತಿದೆ. ದೇಶದ ಎಲ್ಲಾ ಜನ ಯಾವಗಲೂ ಸೋದರತೆ, ಸಮಾನತೆ, ಭ್ರಾತೃತ್ವದಿಂದ ಜೀವಿಸಬೇಕೆಂಬ ಉದ್ದೇಶದೊಂದಿಗೆ ಇಂತಹ ಸಮಾಜೋಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಕಾಯ್ರಕ್ರಮದಲ್ಲಿ ಟ್ರಸ್ಟ್ ನ ಕರ್ನಾಟಕ ರೀಜನಲ್‌ ಮ್ಯಾನೇಜರ್‌ ರಾಜೀವ್‌, ಕಾರ್ಯನಿರ್ವಹಣಾಧಿಕಾರಿಗಳಾದ ರಮೇಶ್‌, ಕೃಷ್ಣಾರೆಡ್ಡಿ, ರಾಕೇಶ್‌, ನೇರಲಗುಡ್ಡ ಕ್ಲಸ್ಟರ್‌ ಸಿ.ಆರ್‌.ಪಿ. ಎಸ್‌.ಜಯಣ್ಣ, ಶಿಕ್ಷಕರಾದ ಮಹಮದ್‌ ಗೌಸ್‌, ಚಂದ್ರಪ್ಪ, ಎಸ್‌.ನಾಗೇಶ್‌, ವೆಂಕಟೇಶ್‌, ಶ್ರೀನಿವಾಸ್‌, ಉಮೇಶ್‌,ಸಿ.ಆರ್‌.ಲಕ್ಷ್ಮೀಪತಿ, ಜಿ.ಓ.ಸವಿತ, ಬಿ.ಪಿ.ನವೀನ್‌ ಕುಮಾರ್‌, ನಟರಾಜ್‌, ಯಶವಂತ್‌ ಸೇರಿದಂತೆ ಹಲವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!