ಗುಬ್ಬಿ: ಮಾಗಡಿ ಶಾಸಕ ಗೋಪಾಲಕೃಷ್ಣ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅವರಿಗೆ ಶುಭಾಶಯ ಕೋರಲು ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಡಿ.ಕೆ ಶಿವಕುಮಾರ್ ಸಿಕ್ಕಿ ಭೇಟಿ ಮಾಡಿ ಮಾತನಾಡಿದರು ಅಷ್ಟು ಬಿಟ್ಟರೆ ಬೇರೇನಿಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಓಬಳ್ಳಿ ಗ್ರಾಮದಲ್ಲಿ ಕಾವೇರಿ ಜಲಾನಯನ ಯೋಜನೆ ಅಡಿಯಲ್ಲಿ ಗುಬ್ಬಿ ತುಮಕೂರು ರಸ್ತೆಯಿಂದ ಹೋಬಳಿ ಬಿಕ್ಕೆಗುಡ್ಡ ಸಂಪರ್ಕಿಸುವ ಡಾಂಬರ್ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ರಾಜಕೀಯವಾಗಿ ಯಾವುದೇ ವಿಚಾರಗಳನ್ನು ಸಹ ಅಲ್ಲಿ ಮಾತನಾಡಿಲ್ಲ ಕೇವಲ ಕುಶಲೋಪರಿ ಮಾತನಾಡಿದ್ದೇವೆ ಅಷ್ಟೇ ಎಂದ ಅವರು ಸಂಸದರು ವಿಜ್ಞಾನಗುಡ್ಡ, ಕ್ರೀಡಾ ಗ್ರಾಮ ಮಾಡುತ್ತೇವೆ ಎಂದು ಮಾತನಾಡುತ್ತಾರೆ, ಮೊದಲು ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡಿ ಆಮೇಲೆ ಎಲ್ಲಿ ಬೇಕಾದರು ಜಾಗ ಸಿಗುತ್ತದೆ, ಜಾಗಕ್ಕೆ ಯಾವುದೇ ಕೊರತೆಯಿಲ್ಲ, ಇನ್ನೂ ಜಿಲ್ಲೆಯಲ್ಲಿ ತೆಂಗು ಪಾರ್ಕ್ ಮಾಡಬೇಕು ಎಂಬುದು ಬಹಳ ವರ್ಷಗಳಿಂದ ಚರ್ಚೆಯಲ್ಲಿದೆ, ಕಳೆದ ಬಜೆಟ್ನಲ್ಲಿಯೂ ಇದರ ಬಗ್ಗೆ ಘೋಷಣೆ ಮಾಡಲಾಗಿತ್ತು ಹಣವನ್ನೇ ಬಿಡುಗಡೆ ಮಾಡದೆ ಯಾವ ಟೆಕ್ ಪಾರ್ಕ್ ಮಾಡುತ್ತಾರೋ ಗೊತ್ತಿಲ್ಲ, ಗುಬ್ಬಿಯಲ್ಲಿಯೇ ಬೇಕಾದರೆ ಜಾಗವನ್ನು ಕೊಡುತ್ತೇವೆ, ಇಲ್ಲಿಯ ತೆಂಗು ಟೆಕ್ ಪಾರ್ಕ್ ಮಾಡಲಿ ಎಂದ ಅವರು ಜಿಲ್ಲೆಯನ್ನು ಎರಡು ಮಾಡಬೇಕು ಎಂದು ಹೊರಟಿದ್ದಾರೆ, ಯಾವ ಯೋಜನೆ ಇಟ್ಟು ಕೊಂಡು ಮಾತನಾಡುತ್ತಾರೆ, ಇದುವರೆಗೂ ಇವರದೇ ಸರಕಾರ ಇದ್ದರು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಸಾಧ್ಯವಾಗಿಲ್ಲ, ಯಾವುದೇ ಯೋಜನೆಗಳಿಲ್ಲದೆ ಬೇಕಾಬಿಟ್ಟಿಯಾಗಿ ಮಾತನಾಡುವುದನ್ನು ನಿಲ್ಲಿಸಿ ಜಿಲ್ಲೆಗೆ ಅನುಕೂಲವಾಗುವಂತಹ ಯೋಜನೆ ಜಾರಿಗೆ ತರಲು ಮನಸ್ಸು ಮಾಡಲಿ, ಬಜೆಟ್ನಲ್ಲಿ ಮೊದಲು ಹಣ ಬಿಡುಗಡೆ ಮಾಡಿ ಆಮೇಲೆ ಮಾತನಾಡಬೇಕು ಎಂದು ಸಂಸದರ ಬಗ್ಗೆ ಟೀಕಾಪ್ರಹಾರ ಮಾಡಿದರು.
ಇನ್ನೂ ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕು, ಈಗಾಗಲೇ ಒಬ್ಬ ವಿದ್ಯಾರ್ಥಿಯ ಜೀವ ಹೋಗಿದೆ, ಅಂತಹ ಘಟನೆಗಳು ನಡೆಯದಂತೆ ಕೇಂದ್ರ ಸರ್ಕಾರ ಮುಂಜಾಗ್ರತೆ ವಹಿಸಿ ವಿದ್ಯಾರ್ಥಿ ಗಳನ್ನು ಕರೆ ತರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರ್ಷ, ಸದಸ್ಯರಾದ ಭಾಗ್ಯಮ್ಮ ವೆಂಕಟೇಶ್, ಚಿಕ್ಕಮ್ಮ, ಗಂಗಾಮಣಿ, ಪ್ರಮೀಳಾ, ಮುಖಂಡರಾದ ಸೋಮು ಮುನಿಯಪ್ಪ, ವೆಂಕಟೇಶ್, ಲಕ್ಷ್ಮಣಗೌಡ, ಬಿಕ್ಕೆಗುಡ್ಡ ಕೃಷ್ಣಪ್ಪ, ಗುತ್ತಿಗೆದಾರ ಅಶೋಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಡಿಕೆಶಿ ಭೇಟಿಯಾಗಿದ್ದು ಆಕಸ್ಮಿಕ: ಶ್ರೀನಿವಾಸ್
Get real time updates directly on you device, subscribe now.
Next Post
Comments are closed.