ವಿರಾಗಿಯ ತಟದಲ್ಲಿ ಓಂಕಾರ ನಾದ

ಜಗತ್ತಿನಾದ್ಯಂತ ಮಣ್ಣಿನ ಮಹತ್ವ ತಿಳಿಸಲು `ಮಹಾ' ಸಂಕಲ್ಪ

151

Get real time updates directly on you device, subscribe now.

ಕೊಯಮತ್ತೂರು: ಈಶಾ ಫೌಂಡೇಶನ್ ಆಯೋಜಿಸಿದ್ದ `ಮಹಾಶಿವರಾತ್ರಿ’ ಆಚರಣೆ ಸಂದರ್ಭದಲ್ಲಿ ಮಣ್ಣಿನ ಅಳಿವಿನ ಸಮಸ್ಯೆ ಪರಿಹರಿಸಲು `ಮಣ್ಣು ಉಳಿಸಿ’ ಆಂದೋಲನವನ್ನು ಸಂಸ್ಥೆ ಮುಖ್ಯಸ್ಥ, ಆಧ್ಯಾತ್ಮಿಕ ಸಂತ ಸದ್ಗುರು ಘೋಷಿಸಿದರು, ರಾತ್ರಿ ಇಡೀ ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಸಂಭ್ರಮವು ಸದ್ಗುರುಗಳ ಸಮ್ಮುಖದಲ್ಲಿ ನಡೆಯಿತು, ಇದಕ್ಕೆ ಲಕ್ಷಾಂತರ ಜನ ಸಮೂಹ ಸಾಕ್ಷಿಯಾದರು.

27 ರಾಷ್ಟ್ರಾದ್ಯಂತ 30 ಸಾವಿರ ಕಿ.ಮೀ ವ್ಯಾಪ್ತಿಯಲ್ಲಿ 100 ದಿನಗಳ ಬೈಕ್ ಜಾಥಾಗೆ ಸಿದ್ಧತೆ ನಡೆದಿದೆ, ಮಣ್ಣಿನ ಬಿಕ್ಕಟ್ಟನ್ನು ಪರಿಹರಿಸಲು ಮಣ್ಣು ಉಳಿಸಿ ಜಾಗತಿಕ ಆಂದೋಲನದ ಗುರಿಯಾಗಿದೆ, ಮಣ್ಣಿನ ಆರೋಗ್ಯಕ್ಕಾಗಿ ನಿಲ್ಲಲು ಜಗತ್ತಿನಾದ್ಯಂತ ಜನರನ್ನು ಒಟ್ಟುಗೂಡಿಸಿ ಕೃಷಿ ಯೋಗ್ಯ ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿ ಮತ್ತು ಕ್ರಮಗಳನ್ನು ಅನುಸರಿಸಲು ಎಲ್ಲಾ ರಾಷ್ಟ್ರಗಳ ನಾಯಕರು ನೀತಿ ಬದಲಾವಣೆಗೆ ಶ್ರಮಿಸುವಂತೆ ಮಾಡುವುದು ಈ ಜಾಥಾದ ಮುಖ್ಯ ಉದ್ದೇಶವಾಗಿದೆ ಎಂದು ಸದ್ಗುರು ಹೇಳಿದರು. ಆಂದೋಲನದಲ್ಲಿ ಭಾಗವಹಿಸಲು, ಮಣ್ಣನ್ನು ಉಳಿಸಲು ಪ್ರತಿಯೊಬ್ಬ ನಾಗರಿಕನು ಧ್ವನಿಗೂಡಿಸುವಂತೆ ಮನವಿ ಮಾಡಿದರು.
ಮಾರ್ಚ್ 21 ರಿಂದ ಲಂಡನ್ನಿಂದ ಸದ್ಗುರು ಪ್ರವಾಸ ಜಾಥಾ ಆರಂಭಿಸಲಿದ್ದಾರೆ, ಇಡೀ ಜಗತ್ತು 100 ದಿನಗಳ ಕಾಲ ಮಣ್ಣಿನ ಬಗ್ಗೆಯೇ ಮಾತನಾಡಬೇಕು, ಮಣ್ಣಿನ ಸ್ಥಿತಿಯ ಬಗ್ಗೆ ಜನರು ಕಾಳಜಿ ವಹಿಸುವಂತಾಗಬೇಕು, ಆಯಾ ದೇಶದ ಸರ್ಕಾರ ಕೂಡ ಈ ಬಗ್ಗೆ ಸ್ಪಷ್ಟ ನಿಲುವು ತಾಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು, ಇದು ಪ್ರತಿಭಟನೆಯಲ್ಲ, ಇದು ಕೆಲವು ರೀತಿಯ ಒತ್ತಡದ ತಂತ್ರವಲ್ಲ, ಇದು ನಾಗರಿಕರ ಇಚ್ಛಾಶಕ್ತಿಯ ಅಭಿವ್ಯಕ್ತವಾಗಿದೆ ಎಂದರು.

ಸಾಂಸ್ಕೃತಿಕ ಸಂಭ್ರಮ
ತಮಿಳುನಾಡಿನ ಕೊಯಮತ್ತೂರಿನಲ್ಲಿ ಆದಿಯೋಗಿ ಶಿವನ ಮುಂದೆ ಮಹಾ ಶಿವರಾತ್ರಿಯಂದು ಧ್ಯಾನ ಮತ್ತು ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಈಶಾ ಫೌಂಡೇಷನ್ ಸದ್ಗುರು ಜಗ್ಗಿ ವಾಸುದೇವ್ ಸದ್ಗುರು ಅಗ್ನಿ ಸ್ಪರ್ಷದ ಮೂಲಕ ಶಿವರಾತ್ರಿ ಆಚರಣೆಗೆ ಚಾಲನೆ ನೀಡಿದರು, ಮುಂಜಾನೆ ವರೆಗೂ ಹೈ ವೋಲ್ಟೇಜ್ ಸಂಗೀತ, ನೃತ್ಯ ಪ್ರದರ್ಶನಕ್ಕೆ ಸಾಕ್ಷಿ ಆಯಿತು. ಲಿಂಗ ಭೈರವಿ ಮತ್ತು ಆದಿಯೋಗಿ ಮಹಾ ಆರತಿ, ಮಹಾಯೋಗ ಯಜ್ಞದ ದೀಪಾಲಂಕಾರ ಕಂಡು ಭಕ್ತ ಸಮೂಹ ಪುಳಕಿತರಾದರು.
ಸೀನ್ ರೋಲ್ಯಾಂಡ್, ಕಾರ್ತಿಕ್, ಸಂದೀಪ್ ನಾರಾಯಣನ್, ಪಾಪೋನ್, ಮಂಗಲಿ, ಮಾಚೆಲ್ ಮೊಂಟಾನೊ ಮತ್ತು ಹಂಸರಾಜ್ ರಘುವಂಶಿ ಇತರರು ಸಂಗೀರ ಸುಧೆ ಹರಿಸಿ ಸಭಿಕರ ಮನ ಗೆದ್ದರು. ಕೇರಳದ ನರ್ತಕಿಯರೊಂದಿಗೆ ಈಶಾ ಸಂಸ್ಕೃತಿಯ ವಿದ್ಯಾರ್ಥಿಗಳು ನಡೆಸಿದ ಕಲರಿ (ಸಮರ ಕಲೆ) ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು, ಆಚರಣೆ ನಡುವೆ ಸದ್ಗುರು ಮಾರ್ಗದರ್ಶನ, ಧ್ಯಾನ, ಪ್ರಶ್ನೋತ್ತರಗಳು ನಡೆದವು, ಸಾವಿರಾರು ಭಕ್ತರು ಧ್ಯಾನದಲ್ಲಿ ಮಗ್ನರಾದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾರತದಲ್ಲಿನ ಕೊಲಂಬಿಯಾದ ರಾಯಭಾರಿ ಎಚ್.ಇ.ಮರಿಯಾನಾ ಪಚೆಕೊ ಮಾಂಟೆಸ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಮಿಸ್ ಇಂಡಿಯಾ ಮಾನಸಾ ವಾರಣಾಸಿ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಇದ್ದರು. 150 ಕ್ಕೂ ಹೆಚ್ಚು ದೃಶ್ಯ ಮಾಧ್ಯಮ, ವೆಬ್ ಚಾನೆಲ್ ಗಳು ಕಾರ್ಯಕ್ರಮವನ್ನು ನೇರಪ್ರಸಾರ ಮಾಡಿತು, ವಿಶ್ವದಾದ್ಯಂತ ಮಿಲಿಯನ್ ಲೆಕ್ಕದಲ್ಲಿ ಜನರು ಕಾರ್ಯಕ್ರಮ ವೀಕ್ಷಣೆ ಮಾಡಿದರು.

ಈಶಾ ಫೌಂಡೇಷನ್ ಆಯೋಜಿಸಿದ್ದ ಮಹಾಶಿವರಾತ್ರಿ ಜಾಗರಣೆ ಆಚರಣೆಗೆ ಲಕ್ಷಾಂತರ ಭಕ್ತ ಸಮೂಹ ಭಾಗವಹಿಸಿ ಧ್ಯಾನದಲ್ಲಿ ಮಗ್ನರಾದರು. ಅತ್ಯಂತ ವ್ಯವಸ್ಥಿತವಾಗಿ ಮಹಾ ಅನ್ನದಾನ ಏರ್ಪಡಿಸಲಾಗಿತ್ತು. ಮಂಗಳವಾರ ಸಂಜೆ 6 ಗಂಟೆಯಿಂದ ಮರುದಿನ ಮುಂಜಾನೆ 6 ರವರೆಗೆ ಲಕ್ಷಾಂತರ ಭಕ್ತರು ಶಿವನಾಮ ಸ್ಮರಣೆಯಲ್ಲಿ ಆಧ್ಯಾತ್ಮಿಕ ಮಜಲುಗಳ ಅನುಭೂತಿ ಪಡೆದರು.

Get real time updates directly on you device, subscribe now.

Comments are closed.

error: Content is protected !!