ಪೊಲೀಸ್‌ ಠಾಣೆ ಕಟ್ಟಡ ಶೀಘ್ರ ಪೂರ್ಣಗೊಳಿಸಿ

ಹೊಸ ಬಡಾವಣೆ ಠಾಣೆ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ

205

Get real time updates directly on you device, subscribe now.

ತುಮಕೂರು: ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅವರು ನಗರದ ಬಿ.ಹೆಚ್‌.ರಸ್ತೆಯಲ್ಲಿ ಹೊಸ ಬಡಾವಣೆ ಪೊಲೀಸ್‌ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

ನಂತರ ಸಚಿವರು ಹೊಸ ಕಟ್ಟಡದ ನೀಲಿನಕ್ಷೆ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು, ಅಂದಾಜು ಮೊತ್ತ 1.52 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ನೂತನ ಪೊಲೀಸ್‌ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮಳೆಗಾಲ ಸೇರಿದಂತೆ 8 ತಿಂಗಳ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ಸಚಿವರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ನೂತನ ಕಟ್ಟಡವು 2523.56 ಚದುರ ಅಡಿಯ ನೆಲಮಹಡಿ, 1206.68 ಚದುರ ಅಡಿ ಮೊದಲ ಮಹಡಿ ಸೇರಿದಂತೆ ಒಟ್ಟು 3730.24 ಚದುರ ಅಡಿ ವಿಸ್ತೆರ್ಣವನ್ನೊಳಗೊಂಡಿದ್ದು, ನೆಲಮಹಡಿಯಲ್ಲಿ ಪೊಲೀಸ್‌ ಆರಕ್ಷಕ ಕೊಠಡಿಯೊಂದಿಗೆ ಶೌಚಾಲಯ ಕೊಠಡಿ, ಮಹಿಳಾ ಬಂಧೀಖಾನೆ, ಪುರುಷರ ಬಂಧೀಖಾನೆ, ಉಪ ಆರಕ್ಷಕರ, ಶಸಾ್ತ್ರಗಾರ, ಕಚೇರಿ, ಕಾರ್ಯಸ್ಥಳ, ವೈಟಿಂಗ್‌ ರೂಮ್‌, ವಿಜಿಟರ್‌ ರೂಮ್‌, ಪುರುಷರ ಕಾರಾಗೃಹ, ಮಹಿಳೆಯರ ಕಾರಾಗೃಹ, ಕಂಪ್ಯೂಟರ್‌, ವೈರ್‌ಲೆಸ್‌ ಕೊಠಡಿ ಸೇರಿದಂತೆ ಮಹಿಳೆಯರ ಶೌಚಾಲಯ, ಪುರುಷರ ಶೌಚಾಲಯ, ಅಂಗವಿಕಲರ ಶೌಚಾಲಯ ನಿರ್ಮಿಸಲಾಗುವುದು.
ಮೊದಲ ಮಹಡಿಯಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯ, ಪುರುಷರ ವಿಶ್ರಾಂತಿ ಕೊಠಡಿ, ಪುರುಷರ ಶೌಚಾಲಯ ಹಾಗೂ ದಾಖಲಾತಿಗಳ ಕೊಠಡಿ ನಿರ್ಮಿಸಲಾಗುವುದು.
ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಮೇಯರ್‌ ಬಿ.ಜಿ.ಕೃಷ್ಣಪ್ಪ, 15ನೇ ವಾರ್ಡಿನ ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್‌, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ಶಹಪೂರವಾಡ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ್‌, ನಗರ ಉಪವಿಭಾಗದ ಡಿವೈಎಸ್‌ಪಿ ಶ್ರೀನಿವಾಸ್‌, ನಿವೃತ್ತ ಪೊಲೀಸ್‌ ಅಧಿಕಾರಿಗಳು, ಹೊಸ ಬಡಾವಣೆ ಪೊಲೀಸ್‌ ಠಾಣೆಯ ಸಬ್‌ ಇನ್ಸ್ ಪೆಕ್ಟರ್‌ ಎಂ.ರಾಮಕೃಷ್ಣಪ್ಪ ಹಾಗೂ ಪತ್ನಿ ಲಲಿತಮ್ಮ ದಂಪತಿ, ಮತ್ತಿತರ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!