ಕಾಣೆಯಾದ ವ್ಯಕ್ತಿ ಶವವಾಗಿ ಪತ್ತೆ- ಇಬ್ಬರ ಬಂಧನ

279

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ತೊರೆಮಾವಿನಹಳ್ಳಿಯಿಂದ ಕಾಣೆಯಾಗಿದ್ದ ವ್ಯಕ್ತಿ ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ಸಂಬಂಧ ಆಸ್ಪತ್ರೆಯಲ್ಲಿ ಓರ್ವನನ್ನು ಕಸ್ಟಡಿಗೆ ಪಡೆದು ಮತ್ತೋರ್ವನನ್ನು ಬಂಧಿಸಿರುವ ತುರುವೇಕೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಳ್ಳಂಬೆಳ್ಳ ಠಾಣಾ ವ್ಯಾಪ್ತಿಯಲ್ಲಿ ಶವವಾಗಿ ಪತ್ತೆಯಾದ ವ್ಯಕ್ತಿ ತೊರೆಮಾವಿನಹಳ್ಳಿ ನಿವಾಸಿ ಯೋಗೀಶ್ ಅಲಿಯಾಸ್ ಯೋಗಾನಂದ್ (30) ಎಂದು ಗುರುತಿಸಲಾಗಿದೆ. ಫೆಬ್ರವರಿ 26 ರಂದು ಸಂಜೆ ಇದೇ ಗ್ರಾಮದ ರೋಹಿತ್ ಎಂಬುವರೊಂದಿಗೆ ಹೋಗಿದ್ದ ಯೋಗಾನಂದ್ ಮನೆಗೆ ವಾಪಸ್ಸಾಗಿರಲಿಲ್ಲ, ಈ ಹಿನ್ನಲೆಯಲ್ಲಿ ಯೋಗಾನಂದ್ ಅವರ ಅಣ್ಣ ಜಗದೀಶ್ ಯೋಗಾನಂದ್ ಕಾಣೆಯಾಗಿರುವ ಬಗ್ಗೆ ಫೆ.26 ರಂದು ತುರುವೇಕೆರೆ ಪೊಲೀಸರಿಗೆ ದೂರು ನೀಡಿದ್ದರು, ತಮ್ಮನ ಹುಡುಕಾಟದಲ್ಲಿದ್ದ ವೇಳೆ ಯೋಗಾನಂದ್ ಕರೆದುಕೋಂಡು ಹೋಗಿದ್ದ ರೋಹಿತ್ ಯಾವುದೋ ವಿಷ ಸೇವಿಸಿ ಆಸ್ಪತ್ರೆ ಸೇರಿರುವ ವಿಚಾರ ಜಗದೀಶ್ಗೆ ತಿಳಿಯಿತು, ಯೋಗೀಶ್, ನಾನು ಹಾಗೂ ವಿನಯ್ ಮೂವರು ಕೊಳವೆ ಬಾವಿ ವಿದ್ಯುತ್ ಲೈನ್ ಸರಿಪಡಿಸಲು ಹೋದಾಗ ಯೋಗೀಶ್ ಮೃತಪಟ್ಟಿದ್ದಾಗಿ ರೋಹಿತ್ ಜಗದೀಶ್ಗೆ ತಿಳಿಸಿದ್ದಾನೆ. ಇದೀಗ ಶವ ಕಳ್ಳಂಬೆಳ್ಳ ಬಳಿ ಪತ್ತೆಯಾಗಿದ್ದು ತಮ್ಮನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಜಗದೀಶ್ ಪೋಲೀಸರಿಗೆ ದೂರು ನೀಡಿದ್ದಾರೆ.
ಜಗದೀಶ್ ನೀಡಿದ ದೂರಿನ ಮೇರೆಗೆ ತುರುವೇಕೆರೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಜಿಲ್ಲಾ ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಹಾಗೂ ಡಿವೈಎಸ್ಪಿ ರಮೇಶ್ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ಸಿಪಿಐ ಗೋಪಾಲ್ ನಾಯ್ಕ್, ಪಿಎಸ್ಐ ಕೇಶವಮೂರ್ತಿ, ಮುಖ್ಯಪೇದೆ ಮೋಹನ್, ಪೇದೆಗಳಾದ ಸುಪ್ರೀತ್, ಜಯರಾಮ್, ನಾಗರಾಜ ಕಮ್ಮತ್ತಲ್ ತಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಹಿತ್ ನ್ನು ಕಸ್ಟಡಿಗೆ ಪಡೆದಿದ್ದು, ಮತ್ತೊಬ್ಬ ಆರೋಪಿ ವಿನಯ್ನನ್ನು ಬಂಧಿಸಿ ಕ್ರಮಕ್ಕೆ ಮುಂದಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!