ತುಮಕೂರು: ಬಸವರಾಜ ಬೊಮ್ಮಾಯಿಯವರು ಮಂಡಿಸಿರುವ ಬಜೆಟ್ ಮೂಗಿಗೆ ತುಪ್ಪ ಸವರಿದಂತಿದೆ, ಯಾವುದೇ ಒಂದು ಪ್ರಮುಖ ಯೋಜನೆ ಘೋಷಣೆ ಮಾಡುವ ಉದ್ದೇಶ ರಾಜ್ಯ ಸರ್ಕಾರಕ್ಕೆ ಇಲ್ಲದಿರುವುದು ನಿರಾಸೆಯುಂಟು ಮಾಡಿದೆ, ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆ ನೀಡಿಲ್ಲ, ಈ ಮೊದಲು ಇರುವ ಯೋಜನೆಗಳಿಗೆ ಕೆಲವು ಬದಲಾವಣೆ ತಂದಿರುವುದು ಮತ್ತು ಚೌ ಚೌ ಬಾತ್ ನಂತಹ ಯೋಜನೆ ಘೋಷಿಸಿರುವುದು ಬೊಮ್ಮಾಯಿ ನೇತೃತ್ವದ ಸರ್ಕಾರದ ಸಾಧನೆಯಾಗಿದೆ ಎಂದು ಮಾಜಿ ಶಾಸಕ ಡಾ.ರಫಿಕ್ ಅಹಮದ್ ಪ್ರತಿಕ್ರಿಯಿಸಿದ್ದಾರೆ.
ಇಂದಿರಾ ಕ್ಯಾಂಟಿನ್, ಅನ್ನಭಾಗ್ಯ ಮತ್ತು ಇನ್ನಿತರ ಯೋಜನೆಗಳಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಉತ್ತೇಜನ ನೀಡಿ ಬಡ ಜನರಿಗೆ ನೆರವಾಗುವ ನಿರೀಕ್ಷೆಯಲ್ಲಿದ್ದ ನಮಗೆ ನಿರಾಸೆಯಾಗಿದೆ, ಅನ್ನಭಾಗ್ಯಕ್ಕೆ ಕೇವಲ ಒಂದು ಕೆಜಿ ಅಕ್ಕಿ ಹೆಚ್ಚುವರಿಯಾಗಿ ನೀಡಿರುವುದೇ ಮುಖ್ಯಮಂತ್ರಿಗಳಿಗೆ ನಿಟ್ಟುಸಿರು ಬಿಟ್ಟಂತಾಗಿದೆ, ಎಲ್ಲಾ ಸಮುದಾಯದ ಜನರಿಗೆ ವಿಶೇಷವಾಗಿ ಹಿಂದುಳಿದ ವರ್ಗಗಳ ಜನತೆಗೆ, ದಲಿತರಿಗೆ ಮತ್ತು ಅಲ್ಪ ಸಂಖ್ಯಾತರಿಗೆ ತಲುಪುವಂತಹ ಯಾವುದೇ ಪ್ರಮುಖ ಯೋಜನೆ ಮಂಡನೆ ಮಾಡದಿರುವ ಈ ಬಜೆಟ್ ತೂಕವಿಲ್ಲದ ತಕ್ಕಡಿಯಂತಾಗಿದೆ ಎಂದು ಆರೋಪಿಸಿದ್ದಾರೆ.
ಶಿವಕುಮಾರ ಸ್ವಾಮಿ ಸ್ಮತಿವನ ನಿರ್ಮಾಣ ಸ್ವಾಗತಾರ್ಹ, ಆದಷ್ಟು ಬೇಗ ಈ ಸ್ಮತಿವನ ನಿರ್ಮಾಣವಾಗಲಿ ಎಂಬುದು ನಮ್ಮೆಲರ ಬಯಕೆಯಾಗಿದೆ, ಪ್ರತಿಯೊಂದು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಒಂದು ಶಾಲೆಗೆ ಅಬ್ದುಲ್ ಕಲಾಂ ಹೆಸರಿನಡಿ ಹೆಚ್ಚಿನ ನೆರವು ನೀಡುವಂತೆ ಈ ಆಯವ್ಯದಲ್ಲಿ ಘೋಷಿಸಿದ್ದು, ಅದರಂತೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸಿರುವ ತುಮಕೂರು ನಗರದ ಯಾವುದಾದರೂ ಒಂದು ಶಾಲೆಯನ್ನುಆಯ್ಕೆ ಮಾಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಡಾ.ರಫೀಕ್ಅಹ್ಮದ್ ತಿಳಿಸಿದ್ದಾರೆ.
ಬಜೆಟ್ ಜನರ ನಿರೀಕ್ಷೆ ಹುಸಿಗೊಳಿಸಿದೆ: ರಫಿಕ್
Get real time updates directly on you device, subscribe now.
Prev Post
Next Post
Comments are closed.