ತೊಗರಿ ತುಂಬಿದ ಟ್ರಾಕ್ಟರ್ ಪಲ್ಟಿ

118

Get real time updates directly on you device, subscribe now.

ಪಾವಗಡ: ತೊಗರಿ ತುಂಬಿದ ಟ್ರಾಕ್ಟರ್‌ ಪಲ್ಟಿಯಾಗಿ ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ಪಟ್ಟಣದ ವೆಡ್ಸ್ ಬಳಿ ನಡೆದಿದೆ.

ಮಗುಚಿ ಬಿದ್ದಿರುವ ಟ್ರಾಕ್ಟರ್‌ ಮಾಲೀಕ ಕೆಂಚಗಾನಹಳ್ಳಿ ರೈತ ನರೇಂದ್ರ ಎಂದು ತಿಳಿದಿದ್ದು, ಇವರೇ ಖುದ್ದು ಟ್ರಾಕ್ಟರ್‌ ಚಲಾಯಿಸುತ್ತಿದ್ದರು. ತೊಗರಿ ಚೀಲ ತುಂಬಿಕೊಂಡು ಪಟ್ಟಣದ ಮಿಲ್ ಗೆ ಹೋಗುತ್ತಿದ್ದರು, ಮಾರ್ಗ ಮಧ್ಯೆ ಅಚಾನಕ್ಕಾಗಿ ಟ್ರಾಲಿ ಮತ್ತು ಇಂಜಿನ್‌ ನಡುವಿನ ಕೊಂಡಿ ಕಳಚಿದ ಕೂಡಲೆ ವೇಗದಲ್ಲಿದ್ದ ಟ್ರಾಕ್ಟರ್‌ ರಸ್ತೆ ಬದಿಗೆ ಪಲ್ಟಿಯಾಗಿದೆ.
ಅದೃಷ್ಟ ವಶಾತ್‌ ಟ್ರಾಕ್ಟರ್ ನಲ್ಲಿ ಚಾಲಕನೊಬ್ಬನೇ ಪ್ರಯಾಣಿಸುತ್ತಿದ್ದು ಇಂಜಿನ್‌ ಮುಂದಿನ ಚಕ್ರ ಬೇರ್ಪಡಿಸಿಕೊಂಡು ಟ್ರಾಕ್ಟರ್‌ ಪಲ್ಟಿಯಾಗಿದೆ, ಘಟನೆ ಹಿನ್ನೆಲೆ ಚಾಲಕ ನರೇಂದ್ರ ಎಂಬಾತನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ, ಸ್ಥಳಕ್ಕೆ ಪಟ್ಟಣ ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!