ಮೊದಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಆರಂಭ

724

Get real time updates directly on you device, subscribe now.

ತುಮಕೂರು: ನಗರದ ಶಿರಾ ರಸ್ತೆಯಲ್ಲಿರುವ ಎಸ್ ಮಾಲ್ನಲ್ಲಿ ಐನೋಕ್ಸ್ ಲೀಶರ್ಸ್ ಸಂಸ್ಥೆಯಿಂದ ನಗರದಲ್ಲಿ ಮೊದಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಪ್ರಾರಂಭವಾಗಿದೆ.

ಮಲ್ಟಿಪ್ಲೆಕ್ಸ್ ಐದು ಪರದೆಗಳು ಮತ್ತು 1069 ಆಸನಗಳನ್ನು ಹೊಂದಿದೆ, ಸಿನಿ ರಸಿಕರಿಗೆ ಎಸ್ ಮಾಲ್ನಲ್ಲಿರುವ ಹೊಚ್ಚ ಹೊಸ ಇನ್ ಸೈನಿಯಾ ಅಲ್ಟ್ರಾ ಪ್ರೆಮಿಯಂ ಚಲನಚಿತ್ರ ವೀಕ್ಷಣೆಯ ಹೊಸ ಅನುಭವ ನೀಡುತ್ತದೆ. ಮಲ್ಟಿಪ್ಲೆಕ್ಸ್ ನಲ್ಲಿ ಉತ್ತಮ ಧ್ವನಿ ಮತ್ತು ಪ್ರೊಜೆಕ್ಷನ್ ತಂತ್ರಜ್ಞಾನದ ಅಳವಡಿಕೆಯಿಂದ ಸಿನಿಮಾ ವೀಕ್ಷಕರಿಗೆ ಅತ್ಯಂತ ಐಷಾರಾಮಿ ಸಿನಿಮಾ ತಾಣದಲ್ಲಿ ಚಲನಚಿತ್ರ ವೀಕ್ಷಣೆಯ ಅನುಭವವನ್ನು ನೀಡುತ್ತದೆ.
ಕಲ್ಪತರು ನಾಡಿನಲ್ಲಿ ನಮ್ಮ ಮೊದಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರವನ್ನು ತೆರೆಯಲು ಹೆಮ್ಮೆ ಎನಿಸುತ್ತದೆ. ಇದು ನಗರದಲ್ಲಿಯೇ ದೊಡ್ಡದಾದ ಮಲ್ಟಿಪ್ಲೆಕ್ಸ್ ಆಗಿದೆ, ಪ್ರತಿ ಸಭಾಂಗಣದಲ್ಲಿ ಅಸಾಧಾರಣ ಡಾಲ್ಬಿ ಅಟ್ಮಾಸ್ ಸೌಂಟ್ ನಿಂದ ಹಿಡಿದು ಅರಾಮದಾಯಕ ಒರಗುವ ಅಸನದವರೆಗೆ ಸಿನಿ ಪ್ರೇಕ್ಷಕರಿಗೆ ಐನೋಕ್ಸ್ ನಲ್ಲಿ ನಯವಾದ ಅನುಭವಗಳನ್ನು ಪಡೆಯುತ್ತಾರೆ ಎಂದು ಐನೋಕ್ಸ್ ಲಿಮಿಟೆಡ್ನ ಪ್ರಾದೇಶಿಕ ನಿರ್ದೇಶಕ ಮೋಹಿತ್ ಭಾರ್ಗವ ಹೇಳಿದು.

Get real time updates directly on you device, subscribe now.

Comments are closed.

error: Content is protected !!