ನಿರಾಶಾದಾಯಕ ಬಜೆಟ್: ಕೆ. ಷಡಕ್ಷರಿ

325

Get real time updates directly on you device, subscribe now.

ತಿಪಟೂರು: ಕೊರೋನಾ ಸಂಕಷ್ಟದಿಂದ ಬಳಲಿದ ರಾಜ್ಯದ ಜನತೆಗೆ ಬಿಜೆಪಿ ಸರ್ಕಾರ ನಿರಾಶಾದಾಯಕ ಬಜೆಟ್ ಮಂಡಿಸಿದೆ ಎಂದು ಮಾಜಿ ಶಾಸಕ ಕೆ. ಷಡಕ್ಷರಿ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟದ ಮೇಲೆ ನಂಬಿಕೆಯಿಟ್ಟಿದ್ದ ರಾಜ್ಯದ ಜನತೆಗೆ ಆಶಾದಾಯಕ ಬಜೆಟ್ ನೀಡಲು ವಿಫಲವಾಗಿದೆ, ಕಾರ್ಮಿಕರಿಗೆ ಹಾಗೂ ಮಧ್ಯಮವರ್ಗದ ಜನತೆಗೆ ದಿನನಿತ್ಯ ಬಳಕೆಯ ಆಹಾರ ಪದಾರ್ಥಗಳು ಮತ್ತು ವಸ್ತುಗಳಿಗೆ ಯಾವುದೇ ತೆರಿಗೆ ವಿನಾಯತಿ ನೀಡಿಲ್ಲ, ಬಜೆಟ್ ನಲ್ಲಿ ನೀರಾವರಿಗೆ ಯಾವುದೇ ಆದ್ಯತೆ ನೀಡದಿರುವುದು ಅನ್ನದಾತನಿಗೆ ಅನ್ಯಾಯವೆಸಗಿದಂತಾಗಿದೆ, ತಾಲ್ಲೂಕಿನ ಜನತೆ ತಿಪಟೂರು ಜಿಲ್ಲಾ ಕೇಂದ್ರವಾಗುತ್ತದೆ ಎಂಬ ಆಸೆಗೆ ತಣ್ಣೀರೆರಚಿದಂತಾಗಿದೆ, ನಮ್ಮ ಹಿಂದಿನ ಸರ್ಕಾರದಲ್ಲಿ ಜಿಲ್ಲೆಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೆರವೇರಿಸಿದ್ದು, ಸರ್ಕಾರ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ವಿಫಲವಾಗಿದೆ.
ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ತಿಪಟೂರು ಜಿಲ್ಲಾ ಕೇಂದ್ರವಾಗಲು ಎಲ್ಲಾ ಮೂಲಭೂತ ಸೌಕರ್ಯಗಳ ಕೆಲಸವಾಗಿದೆ ಹಾಗೂ ಸುಸಜ್ಜಿತವಾದ ಕಟ್ಟಡಗಳು, ವಿಶಾಲವಾದ ಪ್ರದೇಶವಿದ್ದು, ಜನರ ನಿರೀಕ್ಷೆಗೆ, ವಿರುದ್ಧವಾದ ಬಜೆಟ್ ಆಗಿದೆ, ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರಿಗೆ ನಾನು ಜಿಲ್ಲಾ ಕೇಂದ್ರವಾಗಿ ಘೋಷಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಮ್ಮ ಪಕ್ಷವೇ ಅಧಿಕಾರದಲ್ಲಿದೆ ಸಂಪೂರ್ಣ ನಮ್ಮ ಪಕ್ಷದ ಬೆಂಬಲವಿದೆ ಎಂದು ಮನವಿ ಮಾಡಿದ್ದೆ ಕೆ. ಷಡಕ್ಷರಿ ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!