ಗುಣಮಟ್ಟ ಕಾಪಾಡದಿದ್ರೆ ಕ್ರಮ

ಅವ್ಯವಸ್ಥೆಯ ಆಗರ ಮುರಾರ್ಜಿ ವಸತಿ ಶಾಲೆಗೆ ನ್ಯಾಯಾಧೀಶೆ ಭೇಟಿ

205

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಮಲ್ಲನಾಯಕನಹಳ್ಳಿ ಮುರಾರ್ಜಿ ವಸತಿ ಶಾಲೆಯ ಅವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳ ಪ್ರತಿಭಟನೆ ವಿಷಯ ಪತ್ರಿಕೆಗಳಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ನ್ಯಾಯಾಧೀಶರು, ತಹಶೀಲ್ದಾರ್‌ ಶುಕ್ರವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ಎಡೆಯೂರು ಸಮೀಪದ ಮಲ್ಲನಾಯಕನಹಳ್ಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ 300 ವಿದ್ಯಾರ್ಥಿಗಳಿದ್ದು, ಶಾಲೆಯಲ್ಲಿ ಸ್ವಚ್ಛತೆ ಕಾಪಾಡುವುದು, ಶುದ್ದ ಕುಡಿಯುವ ನೀರು ಹಾಗೂ ಕಳಪೆ ಅಹಾರ ವಿತರಣೆ ಬಗ್ಗೆ ವಿದ್ಯಾರ್ಥಿಗಳು ಪ್ರಾಚಾರ್ಯರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದೆ ಪ್ರತಿಭಟನೆಗೆ ಮುಂದಾದ ವಿಷಯ ಕಳೆದ ಕೆಲದಿನದ ಹಿಂದೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕಾನೂನು ಸೇವಾಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ಅನಿತಾ, ತಹಶೀಲ್ದಾರ್‌ ಮಹಬಲೇಶ್ವರ್‌ ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಶುದ್ದ ಅಹಾರ ಪೂರೈಕೆ ನಿಟ್ಟಿನಲ್ಲಿ ಶಿಕ್ಷಕರ ತಂಡ ರಚಿಸಿ, ಗುಣಮಟ್ಟದ ಅಹಾರ ಪೂರೈಕೆ ಮಾಡುವಂತೆ, ಅಹಾರಧಾನ್ಯ ಗುಣಮಟ್ಟ ಇಲ್ಲದೆ ಇದ್ದಲ್ಲಿ ಬೇರೆ ಪಡೆಯುವಂತೆ, ಎರಡು ದಿನದೊಳಗೆ ಅಗತ್ಯ ಕ್ರಮ ಜರುಗಿಸುವಂತೆ ಸೂಚಿಸಿದರು. ರಾತ್ರಿ ವಿದ್ಯಾಥಿಗಳಿಗೆ ಸಿದ್ದಪಡಿಸಿದ್ದ ಅಹಾರವನ್ನು ಸವಿದು, ಗುಣಮಟ್ಟ ಕಾಪಾಡುವಂತೆ ಹೇಳಿದರು.

Get real time updates directly on you device, subscribe now.

Comments are closed.

error: Content is protected !!