ತುಮಕೂರು: ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಪ್ರತಿವರ್ಷವೂ ಮಾ.8 ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಈ ವರ್ಷ ಮಹಿಳೆಯರಿಗಾಗಿ ವೆಲ್ ವುಮೆನ್ ಕ್ಲಿನಿಕ್ ತೆರದಿದೆ ಎಂದು ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿರುವ ಅವರು ವೆಲ್ ವುಮೆನ್ ಪ್ಯಾಕೇಜ್ ಕೇವಲ 499 ರೂ.ಗಳಾಗಿದ್ದು ಇದರಲ್ಲಿ ಸಿಬಿಸಿ, ಆರ್‌ಬಿಎಸ್, ಇಸಿಜಿ, ಟಿಎಸ್‌ಹೆಚ್, ಟೋಟಲ್ ಕೊಲೆಸ್ಟರಾಲ್, ಫಿಸಿಷಿಯನ್ ಹಾಗೂ ಸಿ್ತ್ರೕರೋಗ ತಜ್ಞರ ಕನ್ಸಲ್ಟೇಷನ್ ಕೂಡ ದೊರೆಯಲಿದ್ದು ಮಹಿಳೆಯರು ಈ ಯೋಜನೆ ಸದುಪಯೋಗ ಪಡೆದುಕೊಳ್ಳಲ್ಲಿ, ಈ ಅವಕಾಶ ಮಾ.31 ವರೆಗೆ ಮಾತ್ರ ದೊರೆಯಲಿದೆ ಎಂದರು.
ಇನ್ನು ಮಾ.8 ರಂದು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ಆರೋಗ್ಯ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಮಹಿಳೆಯರ ಆರೋಗ್ಯ ರಕ್ಷಣೆಯ ತಜ್ಞರಿಂದ ಮಾಹಿತಿ ನೀಡಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದರು.
Get real time updates directly on you device, subscribe now.
Prev Post
Comments are closed.