ದೇವರಾಯನದುರ್ಗದಲ್ಲಿ ಬ್ರಹ್ಮರಥೋತ್ಸವ ಮಾ.17ಕ್ಕೆ

231

Get real time updates directly on you device, subscribe now.

ತುಮಕೂರು: ಕರಿಗಿರಿ ಕ್ಷೇತ್ರ ದೇವರಾಯನದುರ್ಗದ ಶ್ರೀಲಕ್ಷ್ಕೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಪುಬ್ಬಾ ನಕ್ಷತ್ರದಲ್ಲಿ ಮಾ.17ರ ಮಧ್ಯಾಹ್ನ 1 ಗಂಟೆಗೆ ವಿಜೃಂಭಣೆಯಿಂದ ಜರುಗಲಿದೆ.

ಬ್ರಹ್ಮರಥೋತ್ಸವದ ಅಂಗವಾಗಿ ಮಾ.10 ರಂದು ಅಂಕುರಾರ್ಪಣ, 11ರಂದು ಧ್ವಜಾರೋಹಣ, 12ರಂದು ಶೇಷವಾಹನೋತ್ಸವ, 13ರಂದು ಸಿಂಹಾರೋಹಣ, 14ರಂದು ಪುಷ್ಪರಥ, 15ರಂದು ಪ್ರಹ್ಲಾದೋತ್ಸವ ಹಾಗೂ ರಾಮಾನುಜ ಕೂಟ ಸೇವೆ ಕಲ್ಯಾಣೋತ್ಸವ, 16ರಂದು ಗರುಡವಾಹನ, ಗಜೇಂದ್ರ ಮೋಕ್ಷ, ನವಿಲುವಾಹನ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ, 17ರಂದು ಯಾತ್ರಾದಾನ ಹಾಗೂ ಬ್ರಹ್ಮರಥೋತ್ಸವ, 18ರಂದು ಸೂರ್ಯ ಮಂಡಲೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಅಶ್ವವಾಹನೋತ್ಸವ, 19ರಂದು ತೀರ್ಥಸ್ನಾನ, ಉಯ್ಯಾಲೋತ್ಸವ, ಧ್ವಜಾವರೋಹಣ, ಚಿತ್ರಗೋಪುರೋತ್ಸವ ಹಾಗೂ ಜಲಕ್ರೀಡೆ ಉತ್ಸವ, 20ರಂದು ದವನೋತ್ಸವ, 21ರಂದು ಉಯ್ಯಾಲೋತ್ಸವ, ಕುಂಭಿಬೆಟ್ಟದಲ್ಲಿ (ಪ್ರಾಕಾರೋತ್ಸವ) ಹಾಗೂ ಪ್ರಸಾದ ವಿನಿಯೋಗ, ಹನುಮಂತೋತ್ಸವ ಹಾಗೂ ಶಯನೋತ್ಸವ, 22ರಂದು ಮಹಾಭಿಷೇಕ ಹಾಗೂ ಗರುಡೋತ್ಸವ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ವೇ। ವಾಸುದೇವಾಚಾರ್ಯ ಅವರಿಂದ ಮಾ. 16, 17 ಮತ್ತು 18ರಂದು ಬಾಲ ಸಂತರ್ಪಣೆ ನಡೆಯಲಿದೆ. ಸಮಸ್ತ ಕೋಮಿನವರಿಗೂ ಹರಿಸೇವೆ, ದಾಸೋಹ, ಸಂತರ್ಪಣೆ ಏರ್ಪಡಿಸಲಾಗಿದ್ದು, ರಥೋತ್ಸವದ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಉಯ್ಯಾಲೋತ್ಸವ ಸೇವೆ ನಡೆಯಲಿದೆ ಎಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಟಿ. ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!