ಗುಬ್ಬಿ: ತಾಲ್ಲೂಕಿನ ಅಮ್ಮನಘಟ್ಟ ಗ್ರಾಮದ ಶಾರದಮ್ಮ ಲೇಟ್ ದೊಡ್ಡತಿಮ್ಮಯ್ಯ ಎಂಬುವವರ ಸರ್ವೇ ನಂ.19 ರಲ್ಲಿ ಹಲವು ವರ್ಷದಿಂದ ಅಡಿಕೆ ತೆಂಗು ಬೆಳೆದು ಕೊಂಡು ಜೀವನ ಮಾಡುತ್ತಿದ್ದ ಕುಟುಂಬಕ್ಕೆ ಯಾವುದೇ ನೋಟೀಸ್ ನೀಡದೆ, ಏಕ ಏಕಿಯಾಗಿ ಮೀಸಲು ಅರಣ್ಯ ಪ್ರದೇಶವಿದು ಎಂದು ಕುಟುಂಬಕ್ಕೆ ಹೇಳಿ ವಲಯ ಅರಣ್ಯ ಇಲಾಖೆ ಅರಣ್ಯಾಧಿಕಾರಿ ದುಗ್ಗಪ್ಪ ಹಾಗೂ ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ಅಡಕೆ ಮರ ಹಾಗೂ ತೆಂಗಿನ ಮರಗಳನ್ನು ತೆರವುಗೊಳಿಸಿದ್ದಾರೆ ಇದನ್ನು ಕಂಡ ಬಡ ರೈತ ಕುಟುಂಬ ನ್ಯಾಯಾಲಯದಲ್ಲಿ ದಾವೆ ಹಾಕಿದ್ದು, ಇನ್ನೆರಡು ದಿನದಲ್ಲಿ ಇದರ ಬಗ್ಗೆ ದಾಖಲೆ ನೀಡುತ್ತೇವೆ ಎಂದು ಅಂಗಲಾಚಿ ಬೇಡಿದರು ಅವರ ಮನವಿಗೆ ಸ್ಪಂದಿಸದೆ ಅಡಿಕೆ ತೆಂಗು ಮರಗಳನ್ನು ಕಡಿಯುವ ಮೂಲಕ ಮಾನವೀಯತೆ ಮರೆತು ಕೆಲಸ ಮಾಡಿರುವುದರ ಪರಿಣಾಮ ಇಡೀ ರೈತ ಕುಟುಂಬ ಬೀದಿಗೆ ಬಿದ್ದಂತಾಗಿದೆ.
ಕೋರ್ಟ್ ಗೆ ಅಪೀಲು ಹೋಗಿದ್ದು, ತಡೆ ಅರ್ಜಿಯನ್ನು ಸೋಮವಾರ ತೋರಿಸುತ್ತೇವೆ ಎಂದು ಅಂಗಲಾಚಿದರು ಅರಣ್ಯಾಧಿಕಾರಿಗಳು ಮರ ಕಡಿಯುವ ಕೆಲಸ ಮಾಡಿದ್ದಾರೆ ಎಂದು ರೈತ ಮಹಿಳೆ ಶಾರದಮ್ಮ ಅಳಲು ತೋಡಿಕೊಂಡಳು.
ಕಳೆದ 10 ವರ್ಷಗಳ ಹಿಂದೆ ಅರಣ್ಯ ಅಧಿಕಾರಿಗಳೇ ಬಂದು ಸರ್ವೇ ಕಲ್ಲನ್ನು ಹಾಕಿದ್ದಾರೆ ಆದರೆ ಇಂದು ಯಾವುದೇ ಮಾಹಿತಿಯನ್ನು ನೀಡದೆ ಏಕಾಏಕಿ ಅಡಕೆ, ತೆಂಗು ಮರಗಳನ್ನು ಉರುಳಿಸುತ್ತಿರುವುದು ಅರಣ್ಯಧಿಕಾರಿಗಳ ಸರ್ವಾಧಿಕಾರಿ ಧೋರಣೆ ಕಂಡು ಅಸಹಾಯಕತೆ ವ್ಯಕ್ತ ಪಡಿಸಿದರು.
ಉದ್ದೇಶಪೂರ್ವಕವಾಗಿ ತೆರವುಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದರು. ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಮಾತ್ರ ತೆರವು ಗೊಳಿಸಿದೆ ನ್ಯಾಯಾಲಯದಿಂದ ಆದೇಶ ಬಂದಲ್ಲಿ ನಾವು ಅದನ್ನು ಪಾಲಿಸುತ್ತೇವೆ ಎಂದು ವಲಯ ಅರಣ್ಯಧಿಕಾರಿ ದುಗ್ಗಪ್ಪ ತಿಳಿಸಿದರು.
Get real time updates directly on you device, subscribe now.
Next Post
Comments are closed.