ಧ್ವನಿ ಎತ್ತಿದ್ದಕ್ಕೆ ರೇಪ್‌ ಕೇಸ್‌ ಹಾಕುವೆ ಬೆದರಿಕೆ!

ಅಕ್ರಮ ಗಣಿಗಾರಿಕೆ ವಿರುದ್ಧ ಮಹಿಳೆಯರಿಂದ ಧರಣಿ

905

Get real time updates directly on you device, subscribe now.

ಕುಣಿಗಲ್‌: ನಮ್ಮ ಗ್ರಾಮ ಸ್ಥಳಾಂತರ ಮಾಡಿ ಇಲ್ಲ ಕಲ್ಲುಗಣಿಗಾರಿಕೆ ಪ್ರದೇಶ ಸ್ಥಳಾಂತರ ಮಾಡಿ ಎಂದು ಬೀಸೆಗೌಡನದೊಡ್ಡಿ ಮಹಿಳಾ ಪ್ರತಿಭಟನಾಕಾರರು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದ ಘಟನೆ ಸೋಮವಾರ ನಡೆದಿದೆ.

ಹುಲಿಯೂರುದುರ್ಗ ಹೋಬಳಿ ಬೀಸೆಗೌಡನದೊಡ್ಡಿ ಗ್ರಾಮದಲ್ಲಿ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸುವಂತೆ ಅಗ್ರಹಿಸಿ ಧರಣಿನಿರತ ಮಹಿಳೆಯರ ಪ್ರತಿಭಟನೆ ಬೆಂಬಲಿಸಿ ತಾಲೂಕು ಜೆಡಿಸ್‌ ಅಧ್ಯಕ್ಷ ಜಗದೀಶ್‌ ಭೇಟಿ ನೀಡಿದ ವೇಳೆ ಗ್ರಾಮದ ಮಹಿಳೆ ನಾಗಮ್ಮ ಅಗ್ರಹಿಸಿದರು. ರಾತ್ರಿ ವೇಳೆ ಪೊಲೀಸರು ಮನೆಗೆ ಬರುತ್ತಾರೆ, ಅವಾಚ್ಯಶಬ್ದಗಳಿಂದ ನಿಂಧಿಸಿ ಧರಣಿ ವಾಪಸ್‌ ಪಡೆಯಿರಿ ಎನ್ನುತ್ತಾರೆ. ವೃದ್ದರ ಮೇಲೆ ರೇಪ್‌ಕೇಸ್‌ ಹಾಕುವ ಧಮಕಿಹಾಕುತ್ತಾರೆ. ಇಲ್ಲಿ ವ್ಯವಸ್ಥೆ ಅನ್ನೊದು ಇಲ್ಲವೆ? ಶಾಸಕರಿಗೆ ವಿಷಯ ಗೊತ್ತಿದ್ದರೂ ನಮ್ಮ ಸಮಸ್ಯೆ ಅಲಿಸಿಲ್ಲ. ತಾಲೂಕು ಆಡಳಿತ ಕಣ್ಣುಮುಚ್ಚಿಕುಳಿತಿದೆ ಎಂದರು. ಗ್ರಾಮದ ಮಹಿಳೆ ನಳಿನಿ, ಮನೆಯೆಲ್ಲಾ ಹಾಳಾಗುತ್ತಿದೆ. ಊಟ ಮಾಡಲು ಕೂತರೆ ಧೂಳಿನೊಂದಿಗೆ ಆಹಾರ ಸೇವಿಸಬೇಕು, ಧೂಳಿನಿಂದ ದನದ ಹುಲ್ಲು ಕಲುಷಿತಗೊಂಡು ಒಂದು ತಿಂಗಳಿನಿಂದ ಐದು ಹಸು ಸತ್ತಿದೆ. ಸ್ಪೋಟದ ನಂತರ ಕೆಟ್ಟವಾಸನೆಗೆ ತಲೆಸುತ್ತು ಬರುತ್ತದೆ. ಧರಣಿ ಮಾಡುತ್ತಿರುವ ಮಹಿಳಯೆರ ಮೇಲೆ ಲಾರಿ ಹತ್ತಿಸಿ ಬೆದರಿಸುವುದು ಒಬ್ಬರು ಮಾಡಿದರೆ, ಮನೆಯ ಪುರುಷರ ಮೇಲೆ ಕೇಸ್‌ಹಾಕುವ ಧಮಕಿ ಪೊಲೀಸರು ಹಾಕುತ್ತಿದ್ದಾರೆ. ಗಣಿಗಾರಿಕೆ ಶಾಸಕರು ಮಾಡುತ್ತಿದ್ದಾರೆಂದು ಹೇಳುತ್ತಿದ್ದಾರೆ. ಶಾಸಕರು ನಮ್ಮೂರು ಉದ್ದಾರ ಮಾಡ್ತಾರೆ ಎಂದು ನಂಬಿದ್ದೆವು ಈಗ ನೋಡಿದರೆ ಅವರೆ ಬಂದು ಸಮಸ್ಯೆ ಅಲಿಸುತ್ತಿಲ್ಲ ನಾವು ನಮ್ಮೂರಲ್ಲೆ ಹುಟ್ಟಿದ್ದೇವೆ, ಕಲ್ಲುಗಣಿಗಾರಿಕೆ ಮಾಡುವ ಮುನ್ನ ನಮ್ಮ ಅಭಿಪ್ರಾಯ ಪಡೆದಿಲ್ಲ. ರೇಷ್ಮೆ ಸೊಪ್ಪಿನ ಬೆಳೆ ಧೂಳುಮಯ ವಾಗಿದೆ ರೇಷ್ಮೆ ಬೆಳೆ ಕೈಕೊಟ್ಟಿದೆ, ಹಸುಗಳಿಲ್ಲ, ರೇಷ್ಮೆಬೆಳೆಯೂ ಇಲ್ಲ ಗಣಿಗಾರಿಕೆ ನಿಲ್ಲಿಸದೆ ಇದ್ದಲ್ಲಿ ಗಣಿಗಾರಿಕೆ ಸ್ಥಳದಲ್ಲೆ ಹೋಗಿ ವಾಸ್ತವ್ಯ ಮಾಡುತ್ತೇವೆ ಎಂದು ಎಚ್ಚರಿಸಿದರು.
ಜೆಡಿಎಸ್‌ಅಧ್ಯಕ್ಷ ಜಗದೀಶ್‌, ಪ್ರಭಾವಿಗಳು ಗ್ರಾಮದ ಸಮೀಪದಲ್ಲೆ ಕಲ್ಲುಗಣಿಗಾರಿಕೆ ಮಾಡಿ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ. ಸುಮಾರು ಎಂಟು ಊರುಗಳನ್ನೆ ಗಣಿಗಾರಿಕೆಗೆ ಅನುಮತಿ ಪಡೆಯುವ ನಕ್ಷೆಯಲ್ಲಿ ನಮೂದು ಮಾಡಿಲ್ಲ. ಕೆಪಿಟಿಸಿಲ್‌ ರಿಸೀವಿಂಗ್‌ ಸ್ಟೇಷನ್‌ ಪಕ್ಕದಲ್ಲೆ ಇದೆ. ಕೆರೆ ಇದೆ, ಮುರಾರ್ಜಿ ವಸತಿಶಾಲೆ ಇದೆ. ಹಿಂದೂ-ಮುಸ್ಲಿಂರು ಭಾವೈಕ್ಯತೆ ಮೆರೆಯುವ ಮದ್ರಾಸ್‌ ಸ್ವಾಮಿಜಿ ಮಠ ಇದೆ. ಗಣಿಗಾರಿಕೆ ಅಬ್ಬರಕ್ಕೆ ಮಠ ಹಾಳಾಗಿದೆ. ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ. ಪ್ರಭಾವಿಗಳು ಪೊಲೀಸರ ಬಳಸಿಕೊಂಡು ಧರಣಿ ನಿರತರ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಶಾಸಕರು, ಸಂಸದರು ಜನರ ಸಮಸ್ಯೆ ಅಲಿಸದೆ ಹೋಗಿದ್ದಾರೆ. ಕಾರಣ ಅವರ ಬೆಂಬಲಿಗರ ಗಣಿಗಾರಿಕೆ ಎಂಬ ಒಂದೆ ಕಾರಣ, ಕೂಡಲೆ ಕ್ರಮ ಕೈಗೊಳ್ಳದ ಇದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮದ ಮಹಿಳೆಯರಾದ ಗೌರಮ್ಮ, ತಾಯಮ್ಮ, ದೊಡ್ಡತಾಯಮ್ಮ, ಜಯಮ್ಮ, ಲಕ್ಷ್ಮಮ್ಮ, ಪ್ರಮುಖರಾದ ತೇಜು, ಯೋಗಿಶ್‌, ರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!