ವಿಜ್ಞಾನ, ವಾಣಿಜ್ಯ, ತಂತ್ರಜ್ಞಾನ ಎಕ್ಸ್ ಪೋ

156

Get real time updates directly on you device, subscribe now.

ತುಮಕೂರು: ಆಧುನಿಕ ತಂತ್ರಜ್ಞಾನದ ಸದ್ಬಳಕೆಯಿಂದ ರೈತರ ಬೆಳೆಗಳ ರಕ್ಷಣೆ, ಸುರಕ್ಷಿತ ಬ್ಯಾಂಕಿಂಗ್‌ ವ್ಯವಸ್ಥೆ, ನೀರಿನ ಮೂಲಗಳ ನಿರ್ವಹಣೆ, ದೇಹದಲ್ಲಿರುವ ಸಕ್ಕರೆ ಅಂಶವನ್ನು ಸುಲಭವಾಗಿ ಪತ್ತೆ ಹಚ್ಚುವ ವಿಧಾನ ಹೀಗೆ ಹತ್ತು ಹಲವಾರು ವಿನೂತನ ಆವಿಷ್ಕಾರಗಳನ್ನು ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.

ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಅಡಗಿರುವ ಕ್ರಿಯಾಶೀಲತೆ, ಯೋಚನಾ ಲಹರಿ, ಬುದ್ಧಿಮತ್ತೆಯನ್ನು ಒರಗೆ ಹಚ್ಚಿ ಪ್ರದರ್ಶಿಸಲು ಕಾಲೇಜಿನಲ್ಲಿ ಬೃಹತ್‌ ವೇದಿಕೆ ಕಲ್ಪಿಸಿಕೊಡಲಾಗಿತ್ತು.
ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್‌.ಬಿ.ಪ್ರದೀಪ್‌ ಕುಮಾರ್‌ ಮಾತನಾಡಿ, ಸಂಸ್ಥೆಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಪೂರಕವಾಗಿ ಆಗಿಂದ್ದಾಗ್ಗೆ ಆಯೋಜಿಸಲಾಗುತ್ತಿದೆ, ಇದರಿಂದಾಗಿ ಕಾಲೇಜಿನ ಯುವ ವಿದ್ಯಾರ್ಥಿಗಳಿಗೆ ಜ್ಞಾನದೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಬಹಳ ಸಹಕಾರಿಯಾಗುತ್ತದೆ, ಮನಸ್ಸಿಗೆ ಉಲ್ಲಾಸ ಹಾಗೂ ಬೌದ್ಧಿಕ ಬೆಳವಣಿಗೆಗೆ ಸೂಕ್ತವಾಗಿರುವ ಇಂತಹ ಚಟುವಟಿಕೆಗಳು ಪ್ರಸ್ತುತ ಸಂದರ್ಭದಲ್ಲಿ ಯುವ ಸಮೂಹಕ್ಕೆ ಅತ್ಯಗತ್ಯವಾಗಿದೆ ಎಂದರು.
ಸಂಸ್ಥಾಪಕ ಅಧ್ಯಕ್ಷ, ಶಿಕ್ಷಣ ಭೀಷ್ಮ ಕೆ.ಬಿ.ಜಯಣ್ಣನವರು ಎಕ್‌್ಸಪೋದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಉತ್ಸುಕತೆಗೆ ಸಂತಸ ವ್ಯಕ್ತಪಡಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಎಕ್ಸ್ ಪೋ ದಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಸುಮಾರು 50ಕ್ಕೂ ಮಿಗಿಲಾಗಿ ವಿನೂತನ ಆವಿಷ್ಕಾರ ಪ್ರದರ್ಶನಗೊಂಡಿದ್ದವು, ಅಂತಿಮವಾಗಿ ಆಯ್ಕೆಯಾದ ತಾಂತ್ರಿಕ ಮಾಡಲ್‌ಗಳಿಗೆ ಆಕರ್ಷಕ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ಭಾಗವಹಿಸಿದ ಎಲಾ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು.
ತುಮಕೂರಿನ ಕೆವಿಆರ್‌ ಮಾರುತಿ ಪಿಯು ಕಾಲೇಜಿನ ಪ್ರಾಂಶುಪಾಲ ರವಿ ಕುಮಾರ್‌, ವಿಜಯ ಪಿಯು ಕಾಲೇಜಿನ ಪ್ರಾಂಶುಪಾಲ ಧನಂಜಯ್‌ ತೀರ್ಪುಗಾರರಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಕೆ.ಪಿ.ನವೀನ್‌ ಕುಮಾರ್‌, ಉಪ ಪ್ರಾಂಶುಪಾಲ ಎ.ಪಿ.ಪ್ರಶಾಂತ್‌ ಕುಮಾರ್‌, ಬೋಧಕ- ಬೋಧಕೇತರ ಸಿಬ್ಬಂದಿ ವರ್ಗ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!