ಕಂದಾಯ ಇಲಾಖೆ ಅಧಿಕಾರಿಗಳ ನಡೆಗೆ ಡಿಕೆ ಕಿಡಿ

412

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಜನತೆ ಕಾನೂನು ಕೈಗೆತ್ತಿಕೊಳ್ಳುವ ಮುನ್ನ ಸುಧಾರಿಸಿಕೊಳ್ಳಿ, ಇಲ್ಲವಾದಲ್ಲಿ ಜನರೆ ಪಾಠ ಕಲಿಸುವ ದಿನ ದೂರವಿಲ್ಲ ಎಂದು ಬಿಜೆಪಿ ಮುಖಂಡ, ಪಿಎಲ್‌ಡಿಬ್ಯಾಂಕ್‌ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್‌ ಕಂದಾಯ ಇಲಾಖೆ ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ನಡೆದ ಬಿಜೆಪಿ ಜನ ಸಂಪರ್ಕ ಸಭೆಯಲ್ಲಿ ಹುಲಿಯೂರುದುರ್ಗ ಹೋಬಳಿ ಬಿಜಿಕೊಪ್ಪಲು ಗ್ರಾಮದಲ್ಲಿ ಮಹಿಳೆ ಬದುಕಿದ್ದರೂ ಸತ್ತಿದ್ದಾರೆ ಎಂದು ಅವರ ಆಸ್ತಿಯನ್ನು ಬೇರೊಬ್ಬ ವ್ಯಕ್ತಿಗೆ ಮಾಡಿದ್ದಾರೆ, ನೀಲಸಂದ್ರ ಗ್ರಾಮದಲ್ಲಿ ತಂದೆಗೆ ಎಂಟು ಮಕ್ಕಳಿದ್ದರೂ ಸ್ವತ್ತನ್ನು ಎಲ್ಲರಿಗೂ ಜಂಟಿ ಖಾತೆ ಮಾಡುವ ಬದಲು ಒಬ್ಬನೇ ವ್ಯಕ್ತಿಗೆ ಆಸ್ತಿ ಮಾಲೀಕತ್ವ ದಾಖಲಿಸಿದ್ದಾರೆ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರನ್ನು ಕೇಳಿದರೆ ಏನು ಮಾಡ್ತಿರೋ ಮಾಡ್ಕೊಳ್ಳಿ ಎನ್ನುತ್ತಾರೆ, ಪೊಲೀಸರಿಗೆ ದೂರು ನೀಡುತ್ತೇವೆ ಎಂದರೆ ಪೊಲೀಸರಿಗೆ ನಾವು ನೋಡಿಕೊಳ್ಳುತ್ತೇವೆ ಏನು ಆಗದು ಎಂದು ದರ್ಪದ ಉತ್ತರ ನೀಡುತ್ತಾರೆಂದು ಭಾದಿತರು ಮುಖಂಡರಲ್ಲಿ ಅಳಲು ತೋಡಿಕೊಂಡರು.
ಗ್ರಾಮಸ್ಥರ ಆಗ್ರಹಕ್ಕೆ ಸ್ಥಳಕ್ಕಾಗಮಿಸಿದ ಹುಲಿಯೂರುದುರ್ಗ ಹೋಬಳಿ ರಾಜಸ್ವ ನಿರೀಕ್ಷಕ ಹರೀಶ್‌ಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡು ಡಿ.ಕೃಷ್ಣಕುಮಾರ್‌, ಜನ ಬದುಕಿದ್ದಾಗಲೆ ಅವರ ಆಸ್ತಿ ಹಕ್ಕನ್ನು ಮೊಟಕು ಮಾಡುವುದು ಒಂದೆ, ಅವರಿಗೆ ವಿಷ ನೀಡುವುದು ಒಂದೆ, ನೀವು ಮಾಡುವ ಕೆಟ್ಟ ಕೆಲಸಕ್ಕೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ, ಹಣ ಮಾಡಲು ಬೇರೆ ದಾರಿ ಇದೆ, ಯಾರದೂ ಆಸ್ತಿ ಯಾರಿಗೋ ನಕಲಿ ದಾಖಲೆಗಳ ಆಧಾರದ ಮೇಲೆ ಮಾಡುತ್ತೀರಾ ಎಂದರೆ ಕಾನೂನಿನ ಭಯ ಇಲ್ಲವೆ, ನೀವು ಮಾಡುವ ಕುಕೃತ್ಯದಿಂದ ಜನರು ಕಚೇರಿ, ಕೋರ್ಟ್‌ಗೆ ಅಲೆಯಬೇಕಾಗುತ್ತದೆ, ಕಂದಾಯ ಇಲಾಖೆಯಲ್ಲಿ ಹುಲಿಯೂರು ದುರ್ಗ ಒಂದರಲ್ಲೆ ಅಲ್ಲ ಎಲ್ಲಾ ಹೋಬಳಿಯಲ್ಲೂ ಇದೆ ಕಥೆ ಆಗಿದೆ, ನೀವು ಮಾಡಿದ ತಪ್ಪಿಗೆ ಜನರು ಕೋರ್ಟ್‌ಗೆ ನೆಮ್ಮದಿ ಕಳೆದುಕೊಂಡು ಅಲೆದಾಡಬೇಕೆ, ಹೀಗೆ ನಡೆದುಕೊಂಡರೆ ಜನರು ಕಾನೂನು ಕೈಗೆ ತೆಗೆದುಕೊಂಡು ತಕ್ಕ ಪಾಠ ಕಲಿಸುತ್ತಾರೆ ಎಚ್ಚರ ಎಂದರಲ್ಲದೆ, ಈಗಾಗಲೆ ಹುಲಿಯೂರು ದುರ್ಗ ಠಾಣೆಗೆ ಕಂದಾಯಾಧಿಕಾರಿಗಳ ಮೇಲೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೆ ಪ್ರಕರಣ ದಾಖಲು ಮಾಡುವಂತೆ ಎಚ್ಚರಿಸಿದರು.
ವಿವಿಧ ಇಲಾಖೆಯ ಸಮಸ್ಯೆಗೆ ಸಂಬಂಧಿಸಿದಂತೆ ನಾಗರಿಕರು ದೂರು ನೀಡಿದ್ದರ ಮೇರೆಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಕೆಲವಕ್ಕೆ ಸ್ಥಳದಲ್ಲೆ ಪರಿಹಾರ ಸೂಚಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ, ಪ್ರಧಾನ ಕಾರ್ಯದರ್ಶಿ ದೇವರಾಜ, ಪ್ರಮುಖರಾದ ಅನೂಪ್‌, ಅಮರ್‌, ಸಲ್ಮಾನ್‌, ಧನುಷ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!