ಕೊಡಿಗೇನಹಳ್ಳಿ: ವಾಸವಿದ್ದ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಗುಡಿಸಲು ಸುಟ್ಟು ಕರಕಲಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಮಧುಗಿರಿ ತಾಲ್ಲೂಕಿನ ಹೋಬಳಿಯ ಕೊಡಿಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗುಟ್ಟೆ ಗ್ರಾಮ ನಾಗರತ್ನಮ್ಮ ಎಂಬುವವರ ಸರಕಾರಿ ಜಾಗದಲ್ಲಿ ಕಳೆದ 20 ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಜೀವನ ಮಾಡುತಿದ್ದರು. ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಗುಡಿಸಲು ಬೆಂಕಿ ಆಹುತಿಯಾಗಿದ್ದು, ಗುಡಿಸಲಿನಲ್ಲಿದ್ದ ದವಸ ಧಾನ್ಯ, ಬಟ್ಟೆ, ಬೀರು ಗೃಹ ಉಪಯೋಗಿ ವಸ್ತುಗಳು ಕಣ್ಣುಮುಂದೆ ಸಂಪೂರ್ಣ ಸುಟ್ಟು ಕರಕಲಾಗಿವೆ.
ನಾವು ವಾಸವಿದ್ದ ಗುಡಿಸಲಿನ ಮೇಲೆ ಯಾರು ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು, ಬೆಂಕಿಗೆ ಗುಡಿಸಲು ಸಂಪೂರ್ಣ ಸುಟ್ಟು ಹೋಗಿದೆ, ಇವರು ಉಟ್ಟ ಬಟ್ಟೆ ಬಿಟ್ಟು ದಿನ ನಿತ್ಯದ ನಿತ್ಯ ಬಳಕೆಯ ಆಹಾರ ಧಾನ್ಯಗಳು ಸುಟ್ಟು ಹೋಗಿದೆ ಎಂದು ಗಂಗಾಧರಪ್ಪ ವಿಷಾದದಿಂದ ಹೇಳಿದರು.
ಈ ಬಗ್ಗೆ ಕೊಡಿಗೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ, ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಗ್ರಾಪಂ ಸದಸ್ಯ ಶ್ರೀರಂಗ ನಾಯಕ ಸೇರಿದಂತೆ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ವಾಸವಿದ್ದ ಗುಡಿಸಲು ಬೆಂಕಿಗಾಹುತಿ
Get real time updates directly on you device, subscribe now.
Prev Post
Next Post
Comments are closed.