ತುಮಕೂರು: ವೃತ್ತಿ ಖಾಯಂಗೊಳಿಸಿ ಸೇವಾ ಭದ್ರತೆ ಒದಗಿಸಿ, ಸೇವೆ ಸಲ್ಲಿಸಿದ ಬಾಕಿ ವೇತನ ನೀಡಿ ಎಂದು ಒತ್ತಾಯಿಸಿ ಗುತ್ತಿಗೆ ಆಧಾರದಲ್ಲಿ ಜಿಲ್ಲೆಯಾದ್ಯಂತ ಸೇವೆಗೆ ನೇಮಿಸಿಕೊಂಡಿದ್ದ ಶುಶ್ರೂಷಣಾಧಿಕಾರಿಗಳು, ಪ್ರಯೋಗಾಲಯ ತಂತ್ರಜ್ಞರು, ಡಿಇಒ, ಕಿರಿಯ ಮಹಿಳಾ ಸಹಾಯಕಿಯರು ಹಾಗೂ ಗ್ರೂಪ್ ಡಿ ನೌಕರರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಡಿಹೆಚ್ಒಗೆ ಮನವಿ ಸಲ್ಲಿಸಿದರು.
ತುಮಕೂರು ಜಿಲ್ಲೆಯ ಪ್ರತಿ ತಾಲ್ಲೂಕಿನಿಂದಲೂ ಗುತ್ತಿಗೆ ಆಧಾರದಲ್ಲಿ ಅರ್ಹರನ್ನ ಕೋವಿಡ್ ಸ್ವಾಬ್ ಕಲೆಕ್ಟರ್, ಜಿಎನ್ಎಂಎಎನ್ಎಂ, ಡಿ ಗ್ರೂಪ್ ನೌಕರರೆಂದು ನೇಮಕ ಮಾಡಿಕೊಳ್ಳಲಾಗಿತ್ತು, ಆದರೆ ಇದ್ದಕ್ಕಿದ್ದಂತೆ ನೌಕರಿಯಿಂದ ತೆಗೆಯುವುದನ್ನ ಖಂಡಿಸಿ ಜಿಲ್ಲೆಯ ಎಲ್ಲಾ ಗುತ್ತಿಗೆ ಆಧಾರಿತ ನೌಕರರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಗುತ್ತಿಗೆ ಆಧಾರಿತ ನೌಕರೆ ಶಿಲ್ಪಾ ಮಾತನಾಡಿ ಕೊರೊನಾ ಸಮಯದಲ್ಲಿ ನಮ್ಮನ್ನ ಗುತ್ತಿಗೆಯಾಧಾರದಲ್ಲಿ ನೇಮಕ ಮಾಡಿಕೊಂಡು ಈಗ ಕೆಲಸದಿಂದ ತೆಗೆಯುತ್ತಿದ್ದಾರೆ, ಕೊರೊನಾ ವೇಳೆ ಹಗಲು ರಾತ್ರಿಯೆನ್ನದೆ ಶ್ರಮವಹಿಸಿ ಸೇವೆ ಸಲ್ಲಿಸಿದ್ದೇವೆ, ಕೊರೊನಾ ಅಲೈಯ್ಸ್ ಕೊಟ್ಟಿಲ್ಲ, ಕೆಲಸದಿಂದ ಮಾರ್ಚ್ ಅಂತ್ಯಕ್ಕೆ ತೆಗೆಯುವ ಸೂಚನೆ ನೀಡಿದ್ದಾರೆ, ಬದಲಿಗೆ ಖಾಲಿಯಿರುವ ಹುದ್ದೆಗೆ ಭರ್ತಿ ಮಾಡಿಕೊಳ್ಳಲಿ ಎಂದು ಒತ್ತಾಯಿಸಿದರು.
ನಾನು ಎರಡು ತಿಂಗಳ ಮಗುವನ್ನ ಮನೆಯಲ್ಲಿ ಬಿಟ್ಟು ಬಂದು ಕಾರ್ಯ ನಿರ್ವಹಿಸಿದ್ದೇನೆ, ನಮಗೆ ನ್ಯಾಯ ಸಿಗಬೇಕಿದೆ ಎಂದು ಅಲವತ್ತುಕೊಂಡರು.
ಮತ್ತೊಬ್ಬ ನೌಕರೆ ಸೌಮ್ಯ ಮಾತನಾಡಿ ಹಬ್ಬ ಹರಿದಿನ, ಭಾನುವಾರ ರಜೆ ದಿನಗಳನ್ನೂ ಲೆಕ್ಕಿಸದೆ ಸೇವೆ ಮಾಡಿದ್ದೆವು, ನೂರು ದಿನ ಪೂರೈಸಿದ ಕೊರೊನಾ ವಾರಿಯರ್ಸ್ಗಳಿಗೆ ಸೇವಾ ಭದ್ರತೆ ಒದಗಿಸಲಾಗುವುದು ಎಂದು ಪ್ರಧಾನಿಗಳು ಹೇಳಿದ್ದರು, ಅದೂ ಕೂಡ ಸಿಕ್ಕಿಲ್ಲ, ಆರು ತಿಂಗಳಿಂದ ಸಂಬಳ ಕೂಡ ನೀಡಿಲ್ಲ, ಕೂಡಲೇ ಸರ್ಕಾರ ಎಚ್ಚೆತ್ತು ವೃತ್ತಿ ಖಾಯಂಗೊಳಿಸಬೇಕು, ಸೇವಾ ಭದ್ರತೆ ನೀಡಬೇಕು, ಬಾಕಿ ವೇತನ ಕೊಡಬೇಕು ಎಂದು ಒತ್ತಾಯಪಡಿಸಿದರು.
ಗುತ್ತಿಗೆ ನೌಕರ ಮಹೇಶ್ ಮಾತನಾಡಿ, ಇಡೀ ನಮ್ಮ ಕುಟುಂಬ ನಾವು ಮಾಡುವ ವೃತ್ತಿ ಮೇಲೆ ನಿಂತಿತ್ತು, ಈಗ ಸೇವೆಯಿಂದ ವಜಾಗೊಳಿಸಿದರೆ ನಮ್ಮ ಪಾಡೇನು, ಮುಂದೆ ಎಲ್ಲಿ ಹೋಗಬೇಕು, ಏನು ಮಾಡಬೇಕು, ಮಕ್ಕಳ ಭವಿಷ್ಯ ಹೇಗೆ ನಿರ್ವಹಿಸಬೇಕು, ಸಂಬಂಧಿಸಿದ ಇಲಾಖಾಧಿಕಾರಿಗಳು ನಮಗೆ ನ್ಯಾಯ ಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದಭರ್ದಲ್ಲಿ ಮಹೇಶ್, ರೇಣುಕಾ ಪ್ರಸಾದ್, ರಂಗನಾಥ್, ಶ್ರೀಧರ್, ಪೂಜಾ, ರಾಕೇಶ್, ಶಿಲ್ಪಾ, ರಂಜಿತ್, ರಾಧ, ಮಂಜುಳ, ಮುದ್ದುಕೃಷ್ಣ, ಅಶ್ವಿನಿದೇವಿ, ಸಯ್ಯದ್, ಸೌಮ್ಯಶ್ರೀ ಸೇರಿದಂತೆ ಇನ್ನು ಹಲವರು ಇದ್ದರು.
Get real time updates directly on you device, subscribe now.
Next Post
Comments are closed.