ತುಮಕೂರು: ಪಂಚ ರಾಜ್ಯ ಚುನಾವಣೆಯ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ, ಐತಿಹಾಸಿಕ ರೀತಿ ಗೆಲುವು ಸಾಧಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಲಕ್ಷ್ಮೀಶ ಹರ್ಷ ವ್ಯಕ್ತಪಡಿಸಿದರು.
ನಗರದ ಬಾಲಗಂಗಾಧರ ಸ್ವಾಮೀಜಿಗಳವರ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಸಹಿ ಹಂಚಿ ನಡೆಸಿದ ಗೆಲುವಿನ ಸಂಭ್ರಮಾಚರಣೆಯಲ್ಲಿ ಮಾತನಾಡಿ, ದೇಶ ವಿರೋಧಿ, ಹಿಂದೂ ವಿರೋಧಿ ನಿಲುವು ಮತ್ತು ಭಯೋತ್ಪಾದನೆಗೆ ಬೆಂಬಲಿಸುವ ಪಕ್ಷಗಳಿಗೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠವನ್ನು ಕಲಿಸಿದ್ದಾರೆ ಎಂಬುದಕ್ಕೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ನಿದೇರ್ಶನ, ದೇಶದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಮತ್ತು ಅಧೋಗತಿಯ ಪ್ರದರ್ಶನದ ಬಗ್ಗೆ ವ್ಯಂಗವಾಡಿ, ಮತದಾರರೇ ತಕ್ಕ ಪಾಠ ಕಲಿಸಿದ್ದಾರೆಂದರು.
ಚುನಾವಣೆ ಗೆಲುವಿಗೆ ಪ್ರಧಾನಿ ನರೇಂದ್ರಮೋದಿ, ರಾಷ್ಟ್ರೀಯ ಅಧಕ್ಷ ಜೆ.ಪಿ.ನಡ್ಡಾ, ಗೃಹಸಚಿವ ಅಮಿತ್ಷಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮತದಾರರಿಗೆ ಅಭಿನಂದಿಸಿದರು.
ದೇಶದ ರಾಜಕೀಯದ ಮುನ್ಸೂಚನೆಯಾಗಿ ಬಿಜೆಪಿ ಪಂಚರಾಜ್ಯ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳ ಫಲಿತಾಂಶ ಬಿಜೆಪಿ ಗೆಲುವು ಮುಂದಿನ ಚುನಾವಣೆಗಳ ಮುನ್ಸೂಚನೆಯಾಗಿದೆ, ಮುಂಬರುವ ಚುನಾವಣೆಗಳು ಲಿತಾಂಶದ ದಿಕ್ಸೂಚಿ ಕೊಡುವ ಚುನಾವಣೆಯಾಗಲಿವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಹೇಳಿ, ಪಂಚ ರಾಜ್ಯಗಳ ಮತದಾರರ ಪ್ರಭುಗಳಿಗೆ ಅಭಿನಂದಿಸಿದರು, ಇತ್ತೀಚಿನ ರಷ್ಯಾ ಉಕ್ರೇನ್ ಯುದ್ಧದ ಸಂದಭರ್ದಲ್ಲಿ ಅಲ್ಲಿದ್ದ ಭಾರತೀಯರು, ವಿದ್ಯಾರ್ಥಿಗಳನ್ನು ಅತ್ಯಂತ ಯಶಸ್ವಿಯಾಗಿ ಆಪರೇಷನ್ ಗಂಗಾ ಹೆಸರಿನಲ್ಲಿ ವಾಪಸ್ ಕರೆಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಮತದಾರರು ಆಶೀರ್ವಾದ ಮಾಡಿದ್ದಾರೆಂದರು.
ಐದು ರಾಜ್ಯ ಚುನಾವಣೆಯ ಫಲಿತಾಂಶವು ದೇಶದ ರಾಜಕಾರಣಕ್ಕೆ ಮುನ್ನುಡಿ ಬರೆದುದಾಗಿದೆ. ಪ್ರಬುದ್ಧ ಮತದಾರರು, ಬಿಜೆಪಿಯ ಆಡಳಿತದ ಬಗ್ಗೆ ಮುಚ್ಚುಗೆಯಿಂದ ಆರ್ಶೀವಾದ ಮಾಡಿ, ಜಯಬೇರಿ ಬಾರಿಸಲು ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ವಿವರಿಸಿ, ಜನಾರ್ಶೀವಾದಕ್ಕೆ ಅಭಿನಂದಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ಐದು ರಾಜ್ಯಗಳ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಮುಕ್ತ ಭಾರತ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ತಿಳಿಸಿದರಲ್ಲದೆ, ಮುಂದಿನ 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಹೀನಾಯ ಸೋಲು ಕಾಂಗ್ರೆಸ್ ಅನುಭವಿಸಲಿದೆ ಎಂದರು.
ಸಂಭ್ರಮಾಚರಣೆಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ನಾಗರತ್ನಮ್ಮ, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಯುವ ಮೋರ್ಚಾ ಅಧಕ್ಷ ಯಶಸ್, ಹಿರಿಯರಾದ ಓಂ ನಮೋ ನಾರಾಯಣ್, ಸಿ.ರಂಗಾನಾಯ್ಕ್, ರೇವಣಸಿದ್ದಪ್ಪ, ಹೆಚ್.ಕೆ.ನಾಗರಾಜು, ಮಹಾನಗರ ಪಾಲಿಕೆ ಮೇಯರ್ ಕೃಷ್ಣಪ್ಪ, ಸದಸ್ಯರಾದ ಹೆಚ್.ಕೆ.ರಮೇಶ್, ಮಲ್ಲಿಕಾರ್ಜುನ, ವಿಷ್ಣುವಧರ್ನ್, ಮಂಜುಳ ಆದರ್ಶ್, ನಗರ ಪ್ರಧಾನಕಾರ್ಯದರ್ಶಿ ಗಣೇಶ್.ಜಿ.ಪ್ರಸಾದ್, ಪ್ರಮುಖರಾದ ವಿಜಯಭಾಸ್ಕರ್, ಆದ್ಯರಾಜು, ಗಿರಿಜಮ್ಮ, ಮಮತಅಶೋಕ್, ಸೌಮ್ಯ, ಎಂ.ಪಿ.ಜ್ಯೋತಿ, ಗಾಯತ್ರಿ, ಡಾ.ಪರ್ಜಾನ ರಹೀಂ ಜೀ, ನಳಿನ, ನಾಗೇಂದ್ರ, ಚನ್ನಬಸಪ್ಪ ಇತರರು ಇದ್ದರು.
ಬಿಜೆಪಿ ಗೆಲುವಿಗೆ ತುಮಕೂರಲ್ಲಿ ಸಂಭ್ರಮಾಚರಣೆ
Get real time updates directly on you device, subscribe now.
Prev Post
Next Post
Comments are closed.