ಶಿರಾ: ಕೊಳಚೆ ಪ್ರದೇಶಗಳಲ್ಲಿನ ಪ್ರತಿ ಕುಟುಂಬಕ್ಕೆ ರಾಜ್ಯ ಸರ್ಕಾರ ಒಂದು ಲೀಟರ್ ನಂತೆ ಉಚಿತ ಹಾಲು ನೀಡಲು ತೀರ್ಮಾನಿಸಿದ್ದು, ಅದರಡಿ ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಶುಕ್ರವಾರ ನಗರದ ಕೊಳಚೆ ಪ್ರದೇಶಗಳಲ್ಲಿ ಹಾಲು ವಿತರಿಸಿದರು.
ಈ ವೇಳೆ ಮಾತನಾಡಿದ ಅವರು ಲಾಕ್‌ಡೌನ್ ಮುಗಿಯುವ ವರೆಗೆ ಸರ್ಕಾರ ಕೊಳಚೆ ಪ್ರದೇಶದಲ್ಲಿ ವಾಸಿಸುವ ಬಡವರಿಗೆ ಉಚಿತವಾಗಿ ಹಾಲು ಕೊಡಲು ತೀರ್ಮಾನಿಸಿದ್ದು, ಅದರಡಿ ಪ್ರತಿ ಕುಟುಂಬಕ್ಕೆ ಒಂದೊಂದು ಲೀಟರ್ ಹಾಲು ವಿತರಿಸಲಾಗುತ್ತಿದೆ. ಇದಕ್ಕಾಗಿ ಸ್ವಸಹಾಯ ಸಂಘಗಳು, ಸ್ವಯಂ ಸೇವಕರ ಸೇವೆ ಬಳಸಿಕೊಳ್ಳಲಾಗುತ್ತಿದೆ ಎಂದರು. ಪೌರಾಯುಕ್ತ ಪರಮೇಶ್ವರಪ್ಪ, ನಾಗಣ್ಣ ಮತ್ತಿತರು ಜೊತೆಯಲ್ಲಿದ್ದರು.
ಕೊಳಚೆ ಪ್ರದೇಶದ ಕುಟುಂಬಗಳಿಗೆ ಉಚಿತ ಹಾಲು ವಿತರಣೆ
Get real time updates directly on you device, subscribe now.
Next Post
Comments are closed.