ಕೊರಟಗೆರೆ: ಗಾರ್ಮೆಂಟ್ಸ್ ಮಿನಿ ಬಸ್ ವಾಹನ ಚಾಲಕ ಕುಡಿದ ಅಮಲಿನಲ್ಲಿ ಅತಿವೇಗ ಮತ್ತು ಅಜಾಗರುಕತೆಯ ಚಾಲನೆಯಿಂದ ರಾಜ್ಯ ಹೆದ್ದಾರಿಯಲ್ಲಿ ಚೆಲ್ಲಾಟ ಆಡಿದ ಪರಿಣಾಮ ಮಿನಿ ಬಸ್ ಮೂರು ಪಲ್ಟಿ ಹೊಡೆದು 15 ಜನ ಮಹಿಳಾ ಕಾರ್ಮಿಕರಿಗೆ ಗಂಭೀರ ಗಾಯ ಆಗಿರುವ ಘಟನೆ ನಡೆದಿದೆ.
ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಐ.ಕೆ.ಕಾಲೋನಿ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಟೆಕ್ಸ್ಪೋರ್ಟ್ ಗಾರ್ಮೆಂಟ್ಸ್ನ ಮಿನಿ ಬಸ್ ಪಲ್ಟಿ ಹೊಡೆದಿದೆ, ಮಿನಿ ಬಸ್ ಪಲ್ಟಿ ಹೊಡೆದ ನಂತರ ಕುಡಿದ ಅಮಲಿನಲ್ಲಿದ್ದ ಗಾರ್ಮೆಂಟ್ಸ್ ಬಸ್ ಚಾಲಕ ನಾಗಣ್ಣ ಎಂಬಾತ ಸ್ಥಳದಿಂದ ಪರಾರಿ ಆಗಿದ್ದಾನೆ.
ಬೆಂಗಳೂರು ನಗರದ ಸಮೀಪದ ಮಾಕಳಿ ದುರ್ಗದ ಟೆಕ್ಸ್ಪೋರ್ಟ್ ಗಾರ್ಮೆಂಟ್ಸ್ಗೆ ಕೊರಟಗೆರೆ ಪಟ್ಟಣ ಮತ್ತು ಗ್ರಾಮೀಣದಿಂದ ಪ್ರತಿನಿತ್ಯ 30 ಕ್ಕೂ ಅಧಿಕ ಮಹಿಳಾ ಕಾರ್ಮಿಕರು ತೆರಳುತ್ತಾರೆ, 12 ರಿಂದ 15 ಜನ ಕಾರ್ಮಿಕರು ಪ್ರಯಾಣಿಸುವ ಮಿನಿ ಬಸ್ ಬಸ್ಸಿನಲ್ಲಿ 30 ಕ್ಕೂ ಅಧಿಕ ಕಾರ್ಮಿಕರ ಸಂಚಾರವೇ ಸಮಸ್ಯೆಯಾಗಿ ಪರಿಣಮಿಸಿದೆ.
ಐ.ಕೆ.ಕಾಲೋನಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಅತಿವೇಗದಿಂದ ಬರುತ್ತಿದ್ದ ವೇಳೆ ಚಾಲಕನಿಗೆ ಕಾರ್ಮಿಕರು ನಿಧಾನವಾಗಿ ವಾಹನ ಚಲಾಯಿಸುವಂತೆ ಮನವಿ ಮಾಡಿದರೂ ಕಾರ್ಮಿಕರ ಮಾತನ್ನು ಕೇಳದೆ ವೇಗವಾಗಿ ಚಲಿಸಿದ ಪರಿಣಾಮ ಕಾರನ್ನು ತಪ್ಪಿಸಲು ಹೋಗಿ ರಸ್ತೆಯಿಂದ ಕೆಳಗೆ ಬಿದ್ದು ಮೂರು ಪಲ್ಟಿ ಹೊಡೆದಿದೆ.
ಸ್ಥಳೀಯರ ಸಹಾಯದಿಂದ 15ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರನ್ನುಕೊರಟಗೆರೆ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ತುರ್ತು ವಾಹನಗಳ ಮೂಲಕ ಕಳುಹಿಸಲಾಗಿದೆ. ಸ್ಥಳಕ್ಕೆ ಕೋಳಾಲ ಪಿಎಸೈ ಮಹಾಲಕ್ಷ್ಮೀ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾರ್ಮೆಂಟ್ಸ್ ನ ಮಿನಿ ಬಸ್ ಪಲ್ಟಿ- 15 ಜನರಿಗೆ ಗಾಯ
Get real time updates directly on you device, subscribe now.
Prev Post
Next Post
Comments are closed.