ಗುಬ್ಬಿ: ಪ್ರತಿಯೊಂದು ಭಾಷೆ ಕಲಿಯುವ ಆಸಕ್ತಿ ನಿಮ್ಮದಾಗಿರಲಿ, ಮಾತೃ ಭಾಷೆ ಬಗ್ಗೆ ಪ್ರೀತಿ ಇರಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದರು.
ತಾಲ್ಲೂಕಿನ ಕಡಬಾ ಹೋಬಳಿಯ ಕಾಡಶೆಟ್ಟಿಹಳ್ಳಿ ಗ್ರಾಮದ ಜ್ಞಾನ ಮಲ್ಲಿಕಾ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಹಿಂದಿ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾತೃಭಾಷೆ ಬಗ್ಗೆ ಹೆಚ್ಚಿನ ಹಿಡಿತ ಸಾಧಿಸಿದಲ್ಲಿ ಎಲ್ಲಾ ಭಾಷೆಯ ವಿಚಾರಗಳು ಕೂಡ ಸ್ಪಷ್ಟವಾಗಿ ಅರ್ಥವಾಗುತ್ತದೆ, ಹಿಂದಿ ಭಾಷೆ ರಾಷ್ಟ್ರೀಯ ಭಾಷೆಯಾಗಿ ಇರುವುದರಿಂದ ಭಾರತ ದೇಶದಲ್ಲಿ ಯಾವುದೇ ರಾಜ್ಯಕ್ಕೆ ಹೋದರೂ ಸಹ ಹಿಂದಿ ಭಾಷೆ ಹೆಚ್ಚು ಚಾಲನೆಯಲ್ಲಿರುವುದರಿಂದ ವಿದ್ಯಾರ್ಥಿ ದೆಸೆಯಿಂದಲೇ ಹಿಂದಿ ಭಾಷೆ ಓದುವಂತಹ ಬರೆಯುವಂತಹ ಅರ್ಥ ಮಾಡಿಕೊಳ್ಳುವಂಥ ಜ್ಞಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು .
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಪ್ರಸನ್ನ ದೊಡ್ಡಗುಣಿ ಮಾತನಾಡಿ, ಬಹುತೇಕ ಶಾಲೆಗಳಲ್ಲಿ ಹಿಂದಿ ಶಿಕ್ಷಕರು ದೈಹಿಕ ಶಿಕ್ಷಕರು ಇಲ್ಲವೇ ಇಲ್ಲ ಇದರಿಂದ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಭಾಷೆ ಕಲಿಯುವುದಕ್ಕೆ ಒಂದಷ್ಟು ಸಮಸ್ಯೆಯಾಗುತ್ತಿದೆ, ಕನ್ನಡ ಭಾಷೆಯನ್ನು ಪ್ರೀತಿಸೋಣ, ಬೇರೆ ಭಾಷೆಯನ್ನು ನಮ್ಮ ಜೀವನಕ್ಕೆ ಅನುಕೂಲಕರವಾಗಿ ಬಳಸಿಕೊಳ್ಳೋಣ ಎಂದು ತಿಳಿಸಿದರು.
ಶಾಲೆಯ ಹಿಂದಿ ಶಿಕ್ಷಕಿ ಮಾತನಾಡಿ ರಾಷ್ಟ್ರೀಯ ಭಾಷೆಯಾಗಿರುವುದರಿಂದ ದೇಶದ ಹಲವು ರಾಜ್ಯಗಳು ಹಿಂದಿ ಭಾಷೆಯಲ್ಲೇ ಆಡಳಿತ ವ್ಯವಹಾರ ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ತಾವು ಬೇರೆ ರಾಜ್ಯಕ್ಕೆ ಹೋಗಿ ಕೆಲಸ ಕಳೆದುಕೊಂಡಾಗ ಅವಶ್ಯಕವಾಗಿ ಈ ಭಾಷೆ ಬೇಕಾಗುತ್ತದೆ ಎಂದು ತಿಳಿಸಿದರು.
ಮಾತೃ ಭಾಷೆ ಬಗ್ಗೆ ಪ್ರೀತಿ ಇರಲಿ: ಕಾಡಶೆಟ್ಟಿಹಳ್ಳಿ ಸತೀಶ್
Get real time updates directly on you device, subscribe now.
Prev Post
Next Post
Comments are closed.