ರೈತರಿಗೆ ಅನ್ಯಾಯವಾಗಲು ಬಿಡಲ್ಲ: ಎಂವಿವಿ

275

Get real time updates directly on you device, subscribe now.

ಮಧುಗಿರಿ: ಅರಣ್ಯ ಇಲಾಖೆ ಗೆ ಸಂಬಂಧಪಟ್ಟ ಭೂಮಿಗೆ ಟ್ರಂಚ್ ಹೊಡೆಯುವ ಸಂದರ್ಭದಲ್ಲಿ ರೈತರ ಜಮೀನುಗಳಿಗೂ ಟ್ರಂಚ್ ಹೊಡೆದಿದ್ದು ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ರೈತರ ಜಮೀನುಗಳಲ್ಲಿ ಅರಣ್ಯ ಇಲಾಖೆ ಟ್ರಂಚ್ ಹೊಡೆದು ಕಸಿದುಕೊಳ್ಳಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಕಸಬಾ ವ್ಯಾಪ್ತಿಯ ಗೋಪಗೊಂಡನಹಳ್ಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಅರಣ್ಯ ಇಲಾಖೆಯವರು ತಮ್ಮ ಭೂಮಿಗೆ ಟ್ರಂಚ್ ಹೊಡೆಯುವ ಸಂದರ್ಭದಲ್ಲಿ ರೈತರಿಗೆ ಸಂಬಂಧ ಪಟ್ಟ ಜಮೀನುಗಳಿಗೂ ಟ್ರಂಚ್ ಹೊಡೆದಿದ್ದು, ಇದರಿಂದಾಗಿ ಈ ಭಾಗದ ರೈತರಿಗೂ ಬಹಳಷ್ಟು ತೊಂದರೆಯಾಗಿದೆ, ಈಗಾಗಲೇ ಮೂರು ದಿನಗಳ ಹಿಂದೆಯೇ ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಮಾತನಾಡಿದ್ದು, ಭೂಮಿಗೆ ಟ್ರಂಚ್ ಹೊಡೆಯುವುದನ್ನು ನಿಲ್ಲಿಸಲು ಸೂಚನೆ ನೀಡಲಾಗಿತ್ತು, ೧೯೩೮ ರಲ್ಲಿ ತಮಗೆ ಸಂಬಂಧ ಪಟ್ಟ ಜಮೀನಿಗೆ ಟ್ರಂಚ್ ಹೊಡೆಯಲು ಮಂಜೂರಾಗಿದೆ ಎಂದು ಅರಣ್ಯ ಇಲಾಖೆಯವರು ದಾಖಲೆಗಳನ್ನು ತೋರಿಸುತ್ತಿದ್ದಾರೆ, ಅಂದೇ ಅವರ ಭೂಮಿಯನ್ನು ಅವರು ವಶಪಡಿಸಿಕೊಂಡು ಭೂಮಿಯ ಸುತ್ತಲೂ ಇನ್ಸಿಂಗ್ ಅಳವಡಿಸಿಕೊಂಡಿದ್ದರೆ ರೈತರಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ, ಈಗ ಸಮಸ್ಯೆಯೂ ಉದ್ಬವವಾಗುತ್ತಿರಲಿಲ್ಲ, ಈಗಾಗಲೇ ಬಗರ್ ಹುಕುಂ ಕಮಿಟಿಯಲ್ಲಿ ಅನೇಕ ಜನ ರೈತರು ಅರ್ಜಿಗಳನ್ನು ಹಾಕಿಕೊಂಡಿದ್ದು, ಯಾವುದೇ ತೀರ್ಮಾನಗಳಾಗಿಲ್ಲ, ಅರಣ್ಯ ಇಲಾಖೆಯ ಭೂಮಿಯನ್ನು ಬಗರ್ ಹುಕುಂ ಕಮಿಟಿಯಲ್ಲಿ ನೀಡಲು ಬರುವುದಿಲ್ಲ, ಇತ್ತೀಚೆಗೆ ನಡೆದ ಅಧಿವೇಶನದಲ್ಲೂ ಇದರ ಬಗ್ಗೆ ಸರ್ಕಾರದ ಹಂತದಲ್ಲಿ ವಿವರವಾಗಿ ಚರ್ಚೆಯಾಗಿದ್ದು, ಸರ್ಕಾರ ಸಮರ್ಪಕ ತೀರ್ಮಾನ ತೆಗೆದುಕೊಳ್ಳುವ ಹಂತದಲ್ಲಿದೆ, ತಾಲೂಕಿನ ಬಗರ್ ಹುಕುಂ ಕಮಿಟಿಗೆ ನಾನೇ ಅಧ್ಯನಾಗಿದ್ದು, ಕಮಿಟಿಯಲ್ಲಿ ತೀರ್ಮಾನವಾಗುವ ವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ, ರೈತರಿಗೆ ತೊಂದರೆ ಕೊಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೆನೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕಮಲಮ್ಮ, ಅರಣ್ಯ ಇಲಾಖೆಯ ಎಸಿಎಫ್ ಮಲ್ಲಿಕಾರ್ಜುನಪ್ಪ, ಆರ್ಎಫ್ಓ, ರವಿ, ಕಂದಾಯಾಧಿಕಾರಿ ಜಯರಾಮಯ್ಯ, ಮುಖಂಡರಾದ ತುಂಗೋಟಿ ರಾಮಣ್ಣ, ತಾಲ್ಲೂಕು ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಗುಂಡಗಲ್ ಶಿವಣ್ಣ, ವೆಂಕಟಾಪುರ ಗೋವಿಂದರಾಜು, ಸಿದ್ದೇಶ್, ಬಿ.ಸಿ.ಹನುಮಂತರಾಯಪ್ಪ, ವಿಶ್ವ, ಲೋಕೇಶ್ ಮತ್ತು ಈ ಭಾಗದ ರೈತರು ಇದ್ದರು.

Get real time updates directly on you device, subscribe now.

Comments are closed.

error: Content is protected !!