ಭಾರತ ಸೇವಾದಳ ದೇಶಾಭಿಮಾನ ಮೂಡಿಸುತ್ತೆ

217

Get real time updates directly on you device, subscribe now.

ತುಮಕೂರು: ಇಂದಿನ ಮಕ್ಕಳು ಮತ್ತು ಯುವಕರಲ್ಲಿ ದೇಶಾಭಿಮಾನ ಮೂಡಿಸುವ ಕೆಲಸವನ್ನು ಭಾರತ ಸೇವಾದಳ ಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಸೇವಾದಳದ ಸಮಿತಿಯ ಅಧ್ಯಕ್ಷ ಹೆಚ್.ಸಿ.ಹನುಮಂತಯ್ಯ ಹೇಳಿದರು.

ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉನ್ಯಾಸಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಮತ್ತು ಯುವಕರಿಗೆ ಸರಿಯಾದ ಸತ್ಯದ ಮಾರ್ಗದರ್ಶನ ಮಾಡುವ ಹಿರಿಯರ ಸಂಖ್ಯೆಯು ಕಡಿಮೆಯಾಗಿದೆ, ಆದರೆ ಭಾರತ ಸೇವಾದಳ ಸಂಸ್ಥೆಯು ಚಟುವಟಿಕೆ ರೂಪಿಸುವ ಮೂಲಕ ಅವರಲ್ಲಿ ದೇಶಾಭಿಮಾನ ಮೂಡಿಸುತ್ತಿದೆ ಎಂದರು.
ಮಹತ್ಮಾಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಅವರ ಕುರಿತು ಯುವ ಜನತೆ ಪುಸ್ತಕ ಓದಬೇಕಾಗಿದೆ, ಕೇವಲ ಶಿಕ್ಷಣದ ಪುಸ್ತಕ ಮೌಲ್ಯ ತುಂಬದು, ಹಾಗಾಗಿ ಸೇವಾ ದಳದ ಶಿಕ್ಷಣ ಅಗತ್ಯ, ಈ ನಿಟ್ಟಿನಲ್ಲಿ ಉಪನ್ಯಾಸಕರು ಸೇವಾದಳವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ಸೇವಾ ದಳದ ಜಿಲ್ಲಾ ಕಾರ್ಯದರ್ಶಿ ಮಾಲೂರಪ್ಪ ಮಾತನಾಡಿ, ಉಪಾನ್ಯಸಕರು ಇಲ್ಲಿ ಪಡೆದ ಸೇವಾದಳ ತರಬೇತಿಯ ಚಟುವಟಿಕೆಗಳನ್ನು ತಮ್ಮ ಕಾಲೇಜಿನಲ್ಲಿ ಅನುಷ್ಠಾನಗೊಳಿಸಿ ಯುವಕ- ಯುವತಿಯರಲ್ಲಿ ಭಾವೈಕ್ಯತಾ ಮನೊಭಾವನೆ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಮಕ್ಕಳಲ್ಲಿ ರಾಷ್ಟ್ರೀಯಶಕ್ತಿ ಮೂಡಬೇಕಾದರೆ ಸೇವಾದಳದ ಇಂತಹ ಚಟುವಟಿಕೆಗಳು ಅತ್ಯಂತ ಅವಶ್ಯ ಎಂದು ಹೇಳಿದರು.
ಸಮಾರೋಪ ನುಡಿಗಳನ್ನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಜಿ.ವೆಂಕಟೇಗೌಡ, ಭಾರತ ಸೇವಾದಳ ಕೇಂದ್ರ ಸಮಿತಿ ಮತ್ತು ಜಿಲ್ಲಾ ಸಮಿತಿಯು ಪ್ರತಿ ಕಾಲೇಜಿನಲ್ಲಿ ಸೇವಾದಳದ ಶಾಖೆ ತೆರೆಯುವ ಮತ್ತು ಯುವಕ- ಯುವತಿಯರಲ್ಲಿ ದೇಶಾಭಿಮಾನ ಮೂಡಿಸುವಂತಹ ನಿಟ್ಟಿನಲ್ಲಿ ಹೆಚ್ಚಿನ ಚಟುವಟಿಕೆ ಅಳವಡಿಸುವ ದೃಷ್ಟಿಯಿಂದ ರಾಜ್ಯಮಟ್ಟದ ಯುವ ವಿದ್ಯಾರ್ಥಿ ಸಮಾವೇಶ ಮತ್ತು ಜಿಲ್ಲಾ ಮಟ್ಟದಲ್ಲಿ ಯುವ ಜಾಗೃತಿ ಸಮಾವೇಶ ಹಾಗೂ ತಾಲ್ಲೂಕುವಾರು ಕಾರ್ಯಕ್ರಮ ಆಯೋಜಿಸಲು ಸಮಿತಿ ತೀರ್ಮಾನಿಸಿದೆ ಎಂದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಲಿಂಗದೇವರು ಮಾತನಾಡಿ, ಭಾರತ ಸೇವಾದಳದ ಘಟಕಗಳನ್ನು ಎಲ್ಲಾ ಕಾಲೇಜುಗಳಲ್ಲಿ ಅವಶ್ಯಕವಾಗಿ ತೆರೆಯಲೇಬೇಕು, ಇಂದಿನ ಯುವ ಜನತೆ ಸಾಮಾಜಿಕ ಜಾಲತಾಣಗಳ ತಲ್ಲಣದಿಂದ ಯುವಕರ ಮನಸ್ಸು ಹದಗೆಡುತ್ತಿದ್ದು, ಮಾತೃ ಶಕ್ತಿ, ಪಿತೃ ಶಕ್ತಿ, ದೇಶ ಶಕ್ತಿ ಮರೆಯುತ್ತಿದ್ದಾರೆ, ಇವೆಲ್ಲ ಯುವಕರ ಮನಸ್ಸಿನಲ್ಲಿ ಬಿತ್ತಬೇಕಾದರೆ ಸೇವಾದಳ ಅವಶ್ಯವಾಗಿದೆ ಎಂದರು.
ಶಶಿಧರ್ ಮಾತನಾಡಿ, ಸಂಘಟನಾತ್ಮಕವಾಗಿ ಮಕ್ಕಳು ಸೇವಾದಳದ ಜೊತೆ ಬೆರೆಯಬೆಕು, ಸೇವಾ ಭಾವನೆ ಹೊಂದಬೇಕು ಎಂದು ತಿಳಿಸಿದರು.
ಉಪಾಧ್ಯಕ್ಷ ಜಿ.ವೆಂಕಟೇಶ್ ಮಾತನಾಡಿ, ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಸೇವಾದಳ ಕಾರ್ಯಕ್ರಮಗಳಿಗೆ ಜಿಲ್ಲಾ ಸಮಿತಿ ನಿಮ್ಮ ಜೊತೆ ನಿಂತಿರುತ್ತದೆ, ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲ ಷಣ್ಮುಖ ಅವರನ್ನು ಸೇವಾದಳ ಜಿಲ್ಲಾ ಸಮಿತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸದಸ್ಯರಾದ ಹನುಮಂತ ಪ್ರಸಾದ್ ಮುತ್ತು ನಾಯಕ್, ಜಿಲ್ಲಾ ಖಜಾಂಚಿ ನಟೇಶ್, ಪ್ರಸನ್ನಕುಮಾರ
ಉಪನ್ಯಾಸಕರು ಇದ್ದರು.

Get real time updates directly on you device, subscribe now.

Comments are closed.

error: Content is protected !!