ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆ ತಲುಪಿಸಿ

ರೈತರ ಹಿತ ಕಾಯುವುದು ಅಧಿಕಾರಿಗಳ ಕರ್ತವ್ಯ: ಜಿ.ಎಸ್.ಬಸವರಾಜು

283

Get real time updates directly on you device, subscribe now.

ತುಮಕೂರು: ರೈತರಿಗೆ ಸಂಬಂಧಿಸಿದ ಕಂದಾಯ ದಾಖಲೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವುದು ಕಂದಾಯ ಅಧಿಕಾರಿಗಳ ಕರ್ತವ್ಯ ಎಂದು ಸಂಸದ ಜಿ.ಎಸ್.ಬಸವರಾಜ್ ತಿಳಿಸಿದರು.

ತುಮಕೂರು ನಗರ ವ್ಯಾಪ್ತಿಯ ೧೧ನೇ ವಾರ್ಡ್ ಗಂಗಸಂದ್ರದ ಗಂಗಾಧರೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಂದಾಯ ಗ್ರಾಮ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ಮೋದಿಯವರ ಆಶಯದಂತೆ ರೈತಾಪಿ ಜನರ ಮನೆ ಬಾಗಿಲಿಗೆ ಕಂದಾಯ ದಾಖಲೆಗಳನ್ನು ತಲುಪಿಸುವ ಉದ್ದೇಶದಿಂದ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರೈತರು ತಮ್ಮ ಕಂದಾಯ ದಾಖಲೆಗಳನ್ನು ಪಡೆದು ಜೋಪಾನವಾಗಿಟ್ಟುಕೊಳ್ಳಬೇಕೆಂದು ತಿಳಿಸಿದರು.
ತಮ್ಮ ಹುಟ್ಟೂರಾಗಿರುವ ಮೆಳೆಕೋಟೆ ಗ್ರಾಮ ಪಂಚಾಯತಿ ಹಾಗೂ ಪಾಲಿಕೆಯ ೧೧ನೇ ವಾರ್ಡ್ ವ್ಯಾಪ್ತಿಯ ಗಂಗಸಂದ್ರ ಗ್ರಾಮದಲ್ಲಿ ಎಲ್ಲರೂ ವಿದ್ಯಾವಂತರಾಗಿದ್ದು, ಉದ್ಯೋಗಸ್ಥರಾಗಿದ್ದಾರೆ ಎಂದರಲ್ಲದೆ, ವಿದ್ಯುತ್, ಕುಡಿಯುವ ನೀರು, ರಸ್ತೆ ಸೇರಿದಂತೆ ಎಲ್ಲಾ ಸೌಲಭ್ಯಗಳು ಗ್ರಾಮಸ್ಥರಿಗೆ ತಲುಪುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಗಂಗಸಂದ್ರ ಗ್ರಾಮದಲ್ಲಿ ಹರಿಜನರಿಗಾಗಿ ಮಂಜೂರಾಗಿರುವ ಸ್ಮಶಾನ ಭೂಮಿ ವಿವಾದವನ್ನು ಶೀಘ್ರವೇ ಬಗೆಹರಿಸಬೇಕು ಹಾಗೂ ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮದಡಿ ಸರ್ವೇ ನಂಬರ್ವಾರು ಪಹಣಿ, ಅಟ್ಲಾಸ್, ಹಿಸ್ಸಾ, ಟಿಪ್ಪಣಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸೇರಿದಂತೆ ಮತ್ತಿತರ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಹಮ್ಮಿಕೊಂಡಿರುವ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು ಚಾಲನೆ ನೀಡಿದ್ದು, ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿಯೂ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಡಿ ಒಟ್ಟು ೨,೫೮,೦೦೦ ರೈತ ಕುಟುಂಬಗಳ ಮನೆ ಬಾಗಿಲಿಗೆ ಕಂದಾಯ ದಾಖಲೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರದ ಸೌಲಭ್ಯ ತಲುಪಿಸುವವರು ಹಾಗೂ ಸೌಲಭ್ಯ ಪಡೆಯುವ ಫಲಾನುಫವಿಗಳು ಪ್ರಾಮಾಣಿಕರಾಗಿದ್ದಾಗ ಮಾತ್ರ ಸರ್ಕಾರದ ಕಾರ್ಯಕ್ರಮಗಳು ಯಶಸ್ಸು ಕಾಣಲು ಸಾಧ್ಯ, ನಕಲಿ ದಾಖಲೆಗಳನ್ನು ಸಲ್ಲಿಸಿ ಸೌಲಭ್ಯಗಳನ್ನು ಅನರ್ಹರು ಪಡೆದರೆ ಯೋಜನೆಗಳ ಲಾಭ ಅರ್ಹರಿಗೆ ದೊರೆಯದೆ ಯಶಸ್ಸು ಕಾಣಲು ಸಾಧ್ಯವಿಲ್ಲ, ಸರ್ಕಾರಿ ನೌಕರರೂ ಸಹ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಇಂತಹ ಅನರ್ಹ ಫಲಾನುಭವಿಗಳನ್ನು ತಂತ್ರಜ್ಞಾನದ ನೆರವಿನಿಂದ ಪತ್ತೆಹಚ್ಚಿ ಅರ್ಹರಿಗೆ ತಲುಪಿಸುವ ಕಾರ್ಯ ಜಾರಿಯಲ್ಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು ೧೬ಲಕ್ಷ ಪಹಣಿಗಳಿದ್ದು, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ೩,೩೦,೦೦೦ ಕ್ಕಿಂತ ಹೆಚ್ಚು ರೈತರು ನೋಂದಾಯಿಸಿಕೊಂಡು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಪೈಕಿ ಕೃಷಿ, ತೋಟಗಾರಿಕೆ ಇಲಾಖೆಯ ಫ್ರೂಟ್ ಐಡಿ ಯಡಿ ತಮ್ಮ ಜಮೀನಿನ ದಾಖಲೆಗಳನ್ನು ಲಿಂಕ್ ಮಾಡಿದ ೨,೫೮,೦೦೦ ರೈತರ ಮನೆ ಬಾಗಿಲಿಗೆ ಮಾತ್ರ ಕಂದಾಯ ದಾಖಲೆಗಳನ್ನು ತಲುಪಿಸಲಾಗುತ್ತಿದೆ ಎಂದರಲ್ಲದೆ, ಜಿಲ್ಲೆಯಲ್ಲಿ ಇನ್ನೂ ೬ ಲಕ್ಷ ಪಹಣಿಗಳು ಫ್ರೂಟ್ ಐಡಿಗೆ ಲಿಂಕ್ ಆಗದೆ ಬಾಕಿ ಉಳಿದಿದ್ದು, ಸರ್ಕಾರದಿಂದ ಸೌಲಭ್ಯಗಳು ದೊರೆಯಬೇಕಾದರೆ ರೈತರು ತಮ್ಮ ಜಮೀನಿನ ದಾಖಲೆಗಳನ್ನು ಕಡ್ಡಾಯವಾಗಿ ಫ್ರೂಟ್ ಐಡಿಗೆ ಲಿಂಕ್ ಮಾಡಬೇಕು ಎಂದು ತಿಳಿಸಿದರು.
ಯಾವುದೇ ದೇಶ ಅಭಿವೃದ್ಧಿಯಾಗಬೇಕಾದರೆ ಭೂ ಸಂಬಂಧಿತ ವ್ಯಾಜ್ಯಗಳ ಪ್ರಕರಣ ಕಡಿಮೆ ಪ್ರಮಾಣದಲ್ಲಿರಬೇಕು, ಭೂ ವ್ಯಾಜ್ಯಗಳು ಸಂಪೂರ್ಣವಾಗಿ ಬಗೆಹರಿದಿರುವ ದೇಶದಲ್ಲಿ ಒಟ್ಟು ದೇಶೀಯ ಉತ್ಪನ್ನ ಹೆಚ್ಚುವುದರಿಂದ ಆ ದೇಶವು ಬೆಳವಣಿಗೆಯಾಗಲು ಸಾಧ್ಯ, ಈ ನಿಟ್ಟಿನಲ್ಲಿ ರೈತರು ಭೂ ವ್ಯಾಜ್ಯಗಳನ್ನು ಶೂನ್ಯಕ್ಕೆ ತಂದು ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರಲ್ಲದೆ, ರೈತರು ವರ್ಷಕ್ಕೊಮ್ಮೆಯಾದರೂ ತಮ್ಮ ಕಂದಾಯ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆ ಶಿರಸ್ತೇದಾರ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಮಾತನಾಡಿ, ಎಲ್ಲಾ ಇಲಾಖೆಗಳ ತವರು ಇಲಾಖೆಯಾದ ಕಂದಾಯ ಇಲಾಖೆಯು ಸದಾ ರೈತರ ಸೇವೆ ನಿರ್ವಹಿಸುತ್ತಾ ಬಂದಿದೆ, ೨೦೨೦ರಲ್ಲಿ ಕಂದಾಯ ದಾಖಲೆಗಳು ಗಣಕೀಕರಣವಾದ ನಂತರ ಜಿಲ್ಲೆಯಲ್ಲಿ ಸುಮಾರು ೪೦,೦೦೦ ಪಹಣಿಗಳಲ್ಲಿ ಲೋಪದೋಷ ಕಂಡು ಬಂದಿದ್ದು, ಪ್ರಸ್ತುತ ಕೇವಲ ೩,೦೦೦ ದೋಷಪೂರಿತ ಪಹಣಿಗಳು ಬಾಕಿ ಇವೆ ಎಂದರಲ್ಲದೆ, ಪಹಣಿ ತಿದ್ದುಪಡಿ ಮಾಡುವ ಕೆಲಸ ಇನ್ನೂ ಜಾರಿಯಲ್ಲಿದೆ. ಪ್ರತಿ ಸೋಮವಾರ ಜಿಲ್ಲಾಧಿಕಾರಿಗಳು ಪಹಣಿ ತಿದ್ದುಪಡಿಗೆ ಸಂಬAಧಿಸಿದAತೆ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ. ರೈತರು ಕಂದಾಯ ದಾಖಲೆಗಳಿಗಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ತಿಳಿಸಿದರು.
ನಂತರ ಸಂಸದರು ಗಂಗಸಂದ್ರ ಗ್ರಾಮದ ಲೋಕೇಶ್, ಬಸವರಾಜು, ಜಯಮ್ಮ, ಮತ್ತಿತರ ರೈತರ ಮನೆ ಬಾಗಿಲಿಗೆ ಹೋಗಿ ಸಾಂಕೇತಿಕವಾಗಿ ಕಂದಾಯ ದಾಖಲೆಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಉಪ ವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್ ಕುಮಾರ್, ಡಿಡಿಎಲ್ಆರ್ ಸುಜಯ್, ಎಡಿಎಲ್ಆರ್ ಮಂಜುನಾಥ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!