ಅಂತರ್ ಜಿಲ್ಲಾ ಕಳ್ಳರ ಬಂಧನ

337

Get real time updates directly on you device, subscribe now.

ಕೊರಟಗೆರೆ: ದೇವಸ್ಥಾನಗಳ ಬೀಗ ಒಡೆದು ಚಿನ್ನಾಭರಣ ಹಾಗೂ ಹುಂಡಿ ಕಳವು ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳರನ್ನ ಬಂಧಿಸುವಲ್ಲಿ ಕೊರಟಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊರಟಗೆರೆ ತಾಲೂಕಿನ ಗುಂಡಾಂಜನಯ ಸ್ವಾಮಿ ದೇವಸ್ಥಾನ, ಹುಳಿಯಾರಿನ ಕಾವಲು ರಂಗನಾಥಸ್ವಾಮಿ ದೇವಸ್ಥಾನ, ಶಿರಾ ಪಟ್ಟನಾಯಕನಹಳ್ಳಿಯ ಗುಡ್ಡದ ರಂಗನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ಇನ್ನಿತರೆ ದೇವಾಲಯಗಲ್ಲಿ ಕಳವು ಮಾಡಲಾಗುತ್ತಿದ್ದ ನಾಲ್ಕು ಜನ ಡಕಾಯಿತರನ್ನ ಬಂಧಿಸಿದ್ದಾರೆ ಎನ್ನಲಾಗಿದೆ.
ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ಮಾರ್ಗದರ್ಶನದಂತೆ ನಿಖರ ಮಾಹಿತಿಯ ಮೇರೆಗೆ ಕೊರಟಗೆರೆ ಪಟ್ಟಣದಲ್ಲಿ ಕೆಲವು ಪ್ರಕರಣಕ್ಕಾಗಿ ಹೊಂಚು ಹಾಕುತ್ತಿದ್ದ ಪಾವಗಡ ಮೂಲದ ಜುಟ್ಲ ಹಾಗೂ ಜಯಪ್ಪ, ಚಿಂತಾಮಣಿಯ ಪಾಂಡು, ಆಂಧ್ರದ ಹಿಂದುಪುರ ಮೂಲದ ಪವನ್ ಕುಮಾರ್ ಎಂಬ ನಾಲ್ವರು ಕಳ್ಳರನ್ನ ಸೆರೆ ಹಿಡಿಯುವಲ್ಲಿ ಕೊರಟಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳ್ಳರ ಜಾಡು ಹಿಡಿದು ನಿಖರ ಮಾಹಿತಿಯನ್ನರಿತ ಸಿಪಿಐ ಸಿದ್ದರಾಮೇಶ್ವರ, ಪಿಎಸ್ಐ ನಾಗರಾಜು ಹಾಗೂ ಮಂಜುಳಾ ಸಿಬ್ಬಂದಿ ಸದಾನಂದ, ಮೋಹನ್ ಕುಮಾರ್, ಸಿದ್ದಲಿಂಗ ಪ್ರಸನ್ನ, ವೆಂಕಟೇಶ್ ಸೇರಿದಂತೆ ಇನ್ನಿತರರು ಕಳ್ಳರ ಜಾಡು ಹಿಡಿದು ಕೊರಟಗೆರೆ ಪಟ್ಟಣದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಎಸ್ ಸಿದ್ದರಾಮೇಶ್ವರ, ಪಿಎಸ್ಐ ನಾಗರಾಜು ಹಾಗೂ ಮಂಜುಳಾ ಅವರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Get real time updates directly on you device, subscribe now.

Comments are closed.

error: Content is protected !!