ಗುಬ್ಬಿ: ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಕುಟುಂಬಗಳಲ್ಲಿ ಸಾವು ನೋವು ಸಂಭವಿಸಿ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿ ಸಮಸ್ಯೆ ಅನುಭವಿಸಿದವು, ಇಂತಹ ಸಂದರ್ಭದಲ್ಲಿ ಎಲ್.ಐ.ಸಿ ಇದ್ದಿದ್ದರೆ ಅವರ ಕುಟುಂಬಗಳು ಆರ್ಥಿಕವಾಗಿ ಚೇತರಿಕೆ ಕಾಣಬಹುದಿತ್ತು ಎಂದು ಎಲ್.ಐ.ಸಿ ವಿಭಾಗೀಯ ಹಿರಿಯ ಅಧಿಕಾರಿ ಜಿ.ಎ.ರಾಮಕೃಷ್ಣ ತಿಳಿಸಿದರು.
ಪಟ್ಟಣದ ಎನ್.ಎಚ್.೨೦೬ ರಸ್ತೆಯ ಎಸ್.ಬಿ.ಐ ಬ್ಯಾಂಕ್ ಮೇಲ್ಭಾಗದಲ್ಲಿ ನೂತನವಾಗಿ ಎಲ್.ಐ.ಸಿ ಕಚೇರಿ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಎಲ್.ಐ.ಸಿ ಪಾಲಿಸಿ ಬಹುಮುಖ್ಯವಾಗಿದ್ದು, ಅವರ ಕುಟುಂಬಕ್ಕೆ ಆರ್ಥಿಕ ಚೈತನ್ಯ ತರಬಹುದಾಗಿದೆ, ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಕುಟುಂಬಕ್ಕಾಗಿ ದುಡಿಯುತ್ತಾರೆ, ಅದರಲ್ಲಿ ಒಂದಷ್ಟು ಹಣವನ್ನು ಮುಂಜಾಗ್ರತಾ ಕ್ರಮವಾಗಿ ಕೂಡಿಟ್ಟು ಮುಂದಿನ ಭವಿಷ್ಯದ ಯೋಚನೆ ಮಾಡಿ ಎಲ್ಐಸಿಯಲ್ಲಿ ತೊಡಗಿಸಿಕೊಂಡರೆ ಸಾಕಷ್ಟು ಅನುಕೂಲವಾಗುತ್ತದೆ, ಸಾಕಷ್ಟು ಖಾಸಗಿ ಏಜೆನ್ಸಿಗಳು ಹಣ ಸಂಗ್ರಹ ಮಾಡುತ್ತಿರಬಹುದು, ಆದರೆ ಸರ್ಕಾರದ ಮಾನ್ಯತೆ ಪಡೆದಿರುವ ಎಲ್ಐಸಿಯಲ್ಲಿ ಸಾಕಷ್ಟು ಯೋಜನೆಗಳಿದ್ದು, ಹೆಚ್ಚಿನ ಖಾತ್ರಿ ಹೊಂದಿದೆ, ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ರೀತಿಯ ವಯಸ್ಕರಿಗೂ ವಿಶೇಷವಾದ ಯೋಜನೆಗಳಿದ್ದು ಅದನ್ನು ತೆಗೆದುಕೊಳ್ಳಬೇಕು,ಇನ್ನು ಇಡೀ ದಕ್ಷಿಣ ಭಾರತದಲ್ಲಿ ಬೆಂಗಳೂರು ವಲಯ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿ ಹಾಗೂ ಆರ್ಥಿಕವಾಗಿ ಸದೃಢವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ತುಮಕೂರು ಶಾಖಾ ಎಲ್ಐಸಿ ಹಿರಿಯ ಅಧಿಕಾರಿ ಗಂಗಾಧರ್ ಮಾತನಾಡಿ, ನೂತನವಾಗಿ ಕಟ್ಟಡ ನಿರ್ಮಾಣವಾಗಿದ್ದು ಎಲ್ಲಾ ರೀತಿಯ ಸೌಲಭ್ಯಯ ಸಹ ಇಲ್ಲಿ ಗ್ರಾಹಕರಿಗೆ ಸಿಗುತ್ತವೆ, ಪ್ರತಿಯೊಬ್ಬ ಏಜೆಂಟರು ಸಹ ಹೆಚ್ಚಿನ ಪಾಲಿಸಿ ಮಾಡಿಸಿ ಅವರ ಕುಟುಂಬಗಳಿಗೆ ನೆರವಾಗಬೇಕಿದೆ, ಗ್ರಾಮಾಂತರ ಭಾಗದಲ್ಲಿ ಹೆಚ್ಚು ಪಾಲಿಸಿ ಮಾಡಿಸಿ ಎಂದು ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಮಾತನಾಡಿ ಪ್ರತಿಯೊಬ್ಬರು ೧ ತಿಂಗಳಿಂದ ಹಿಡಿದು ೧ ವರ್ಷದವರೆಗೂ ವಿವಿಧ ರೀತಿಯ ಪಾಲಿಸಿಗಳಿದ್ದು ಇದನ್ನು ಮಾಡಿಸಿದಾಗ ಕಷ್ಟದ ಕಾಲದಲ್ಲಿ ಕುಟುಂಬಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಜಿ.ಆರ್.ಶಿವಕುಮಾರ್, ಗುಬ್ಬಿ ಶಾಖಾಧಿಕಾರಿ ನರಸಿಂಹಪ್ಪ, ಹಿರಿಯ ಅಭಿವೃದ್ಧಿ ಅಧಿಕಾರಿ ಸಾವಂತ್, ಅಭಿವೃದ್ಧಿ ಅಧಿಕಾರಿ ಮುರಳಿ, ಅನಿಲ್ಕುಮಾರ್, ಮುನಿರಾಜು, ಅಧಿಕಾರಿ ವರ್ಗ ಶಿವಕುಮಾರ್, ರೋಹಿಣಿ, ಪ್ರತಿನಿಧಿ ರಾಜಶೇಖರ್ ಇನ್ನಿತರರು ಹಾಜರಿದ್ದರು.
ಎಲ್.ಐ.ಸಿ ಆರ್ಥಿಕ ಚೇತರಿಕೆಗೆ ಸಹಕಾರಿ: ರಾಮಕೃಷ್ಣ
Get real time updates directly on you device, subscribe now.
Prev Post
Next Post
Comments are closed.