ಸಮರ್ಪಕ ವಿದ್ಯುತ್ ಗೆ ಆಗ್ರಹಿಸಿ ರೈತರ ಹೋರಾಟ

307

Get real time updates directly on you device, subscribe now.

ತುರುವೇಕೆರೆ: ವಿದ್ಯುತ್ ಸಂಬಂಧಿತ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ಗೌಡ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಬೆಸ್ಕಾಂ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದ ಬಳಿ ಜಮಾವಣೆಗೊಂಡ ರೈತರು ಪ್ರವಾಸಿ ಮಂದಿರದ ಆವರಣದಿಂದ ಬೆಸ್ಕಾಂ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಬೆಸ್ಕಾಂನ ರೈತ ವಿರೋಧಿ ನೀತಿ ಖಂಡಿಸಿ ಧಿಕ್ಕಾರ ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳೆದರು, ಅಂತಿಮವಾಗಿ ಬೆಸ್ಕಾಂ ಕಚೇರಿ ಪ್ರವೇಶ ದ್ವಾರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಆರಂಭಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅದ್ಯಕ್ಷ ಶ್ರೀನಿವಾಸಗೌಡ ಮಾತನಾಡಿ, ಬೆಸ್ಕಾಂ ಸಮರ್ಪಕ ವಿದ್ಯುತ್ ನೀಡದ ಹಿನ್ನಲೆಯಲ್ಲಿ ರೈತ ತಾನು ಬೆಳೆದ ಬೆಳೆ ಸಂರಕ್ಷಿಸುವುದು ಸವಾಲಾಗಿದೆ, ಸರಕಾರವು ಐಪಿ ಸೆಟ್ಗಳಿಗೆ ನಿತ್ಯ ೭ ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿದೆ, ಆದರೆ ಇಲ್ಲಿನ ಬೆಸ್ಕಾಂ ಕೇವಲ ಕೆಲವೇ ಗಂಟೆಗಳ ಕಾಲ ವಿದ್ಯುತ್ ನೀಡುವ ಮೂಲಕ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ, ಸುಟ್ಟ ವಿದ್ಯುತ್ ಪರಿವರ್ತಕ ಬದಲಾಯಿಸಿಕೊಳ್ಳಲು ಬೆಸ್ಕಾಂ ಸಿಬ್ಬಂದಿಗೆ ೧೦ ರಿಂದ ೨೦ ಸಾವಿರ ದವರೆಗೂ ಲಂಚ ನೀಡಬೇಕಾಗಿದೆ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಸಮೀಪಿಸುತ್ತಿರುವ ವೇಳೆ ನಿರಂತರ ಜ್ಯೋತಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು ಬೆಸ್ಕಾಂ ವಿದ್ಯುತ್ ಸಂ`ÀAದಿತ ರೈತರ ಎಲ್ಲಾ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಕಸಬಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್ಓ ಕಾಂತರಾಜ್ ಅವರ ಲಂಚಗುಳಿತನ ಹೆಚ್ಚಾಗಿದೆ, ರೈತರು ವಿದ್ಯುತ್ ಸಂಬಂಧಿತ ದೂರುಗಳನ್ನು ಹೇಳಲು ಹೋದರೆ ಹಣದ ಬೇಡಿಕೆ ಇಡುತ್ತಾರೆ, ಹಣ ನೀಡದೆ ಯಾವ ಕೆಲಸವನ್ನು ಮಾಡುವುದಿಲ್ಲ, ಸಮಸ್ಯೆ ಹೇಳಿಕೊಳ್ಳಲು ಹೋದರೆ ಉಡಾಫೆ ಉತ್ತರ ನೀಡುತ್ತಾರೆ ಎಂಬ ಶ್ರೀನಿವಾಸಗೌಡರ ಆರೋಪಕ್ಕೆ ಧ್ವನಿಗೂಡಿಸಿದ ಅನೇಕ ರೈತರು ಕಾಂತರಾಜ್ ಅಮಾನತಿಗೆ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಇಇ ಸೋಮಶೇಖರ್ ಗೌಡ ರೈತರ ಬೇಡಿಕೆಗಳನ್ನು ಆಲಿಸಿದರು. ನಂತರ ಮಾತನಾಡಿ ಎಸ್ಓ ಕಾಂತರಾಜ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ರೈತರ ಬೇಡಿಕೆಗೆ ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದರು. ಇಇ ರವರು ನೀಡಿದ ಭರವಸೆಗೆ ರೈತರು ಪ್ರತಿಭಟನೆ ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ಪಪಂ ಮಾಜಿ ಅಧ್ಯಕ್ಷ ಹೆಚ್.ಆರ್.ರಾಮೇಗೌಡ, ರೈತ ಸಂಘದ ಗೌರವಾಧ್ಯಕ್ಷ ಅಸ್ಲಾಂಪಾಷ, ರಹಮತ್, ಸಿಐಟಿಯು ಸತೀಶ್, ಡಿ.ಎಸ್.ಎಸ್ ನ ರಾಮಯ್ಯ, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ, ಜಯ ಕರ್ನಾಟಕ ಜನಪರ ವೇದಿಕೆಯ ವೆಂಕಟೇಶ್, ಸೋಮಶೇಖರ್, ಭೈರಪ್ಪ ಮತ್ತಿತರಿದ್ದರು.

Get real time updates directly on you device, subscribe now.

Comments are closed.

error: Content is protected !!