ಕುಣಿಗಲ್: ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆ ಲಿತಾಂಶದಲ್ಲಿ ತಾಲೂಕಿನ ಯಾವುದೇ ವಿದ್ಯಾರ್ಥಿ ಜಿಲ್ಲೆಗೆ ಮೊದಲ ಸ್ಥಾನ ಬಂದಲ್ಲಿ ಒಂದು ಲಕ್ಷ ರೂ. ಹಾಗೂ ತಾಲೂಕಿಗೆ ಮೊದಲು ಬರುವ ವಿದ್ಯಾರ್ಥಿಗೆ ಐವತ್ತು ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಬಿಜೆಪಿ ಮುಖಂಡ, ನವದೆಹಲಿಯ ಕೆಂಪೇಗೌಡ ಫೌಂಡೇಶನ್ ಉಪಾಧ್ಯಕ್ಷ ಹೆಚ್.ಡಿ.ರಾಜೇಶ್ ಗೌಡ ಹೇಳಿದರು.
ತಾಲೂಕಿನ ಜ್ಞಾನಭಾರತಿ ಪ್ರೌಢಶಾಲೆಯಲ್ಲಿ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುತ್ತಿರುವ ತಾಲೂಕಿನ 2803 ವಿದ್ಯಾರ್ಥಿಗಳಿಗೆ ಪರೀಕ್ಷಾ ಕಿಟ್ ವಿತರಣೆಗೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಶುಭಾ ಹಾರೈಸಿ ಮಾತನಾಡಿ, ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ, ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಭಯ ಬೇಡ, ಗುರುಗಳ, ಪೋಷಕರ ಮಾರ್ಗದರ್ಶನದಲ್ಲಿ ವ್ಯಾಸಂಗ ಮಾಡಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ, ಉತ್ತಮ ಅಂಕ ಗಳಿಸುವ ಮೂಲಕ ವಿದ್ಯೆ ನೀಡಿದ ಶಾಲೆಗೂ, ಗುರುಗಳಿಗೂ, ಪೋಷಕರಿಗೂ, ತಾಲೂಕಿಗೂ ಒಳ್ಳೆಯ ಹೆಸರು ತರಬೇಕು, ನವ ದೆಹಲಿಯ ಕೆಂಪೇಗೌಡ ಫೌಂಡೇಶನ್ ವತಿಯಿಂದ ರಾಜ್ಯದ ಯಾವುದೇ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಐಪಿಎಸ್ ಸೇರಿದಂತೆ ಇತರೆ ಪರೀಕ್ಷೆಗಳಿಗೆ ಆಯ್ಕೆಯಾಗಲು ಎಲ್ಲಾ ರೀತಿಯ ನೆರವು ನೀಡಲಾಗುತ್ತಿದೆ, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪರೀಕ್ಷಾ ಕಿಟ್ ವಿತರಣೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಲು ಆಕಾಂಕ್ಷಿಯಾಗಿದ್ದೇನೆ, ಈಗಾಗಲೆ ಕಳೆದ ನಾಲ್ಕು ವರ್ಷದಿಂದ ಕ್ಷೇತ್ರದಲ್ಲಿನ ನಮ್ಮ ಸಮಾಜಸೇವೆ ಪಕ್ಷವೂ ಗಮನಿಸುತ್ತಿದೆ, ತಾಲೂಕಿನಲ್ಲಿ ರಾಜಕಾರಣ ವ್ಯಾಪಾರೀಕರಣವಾಗಿದೆ, ತಾಲೂಕನ್ನು ಪ್ರತಿನಿಧಿಸುವ ಜನಪ್ರತಿನಿಧಿ ಗಣಿಗಾರಿಕೆಯಲ್ಲಿ ತೊಡಗುವ ಮೂಲ ತಾಲೂಕಿನ ಅಭಿವೃದ್ಧಿ ಕಡೆಗಣಿಸಿದ್ದಾರೆ, ತಾಲೂಕಿನಲ್ಲಿ ತಾಲೂಕಿನ ನೀರಾವರಿ ಕ್ಷೇತ್ರದ ಅಭಿವೃದ್ಧಿ, ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಮಹಿಳೆಯರಿಗೆ ಹಾಗೂ ಯುವಕರಿಗೆ ಅನುಕೂಲವಾಗಲು ವಿವಿಧ ರೀತಿಯ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡುವ ಜೊತೆಯಲ್ಲಿ ಸರ್ಕಾರಿ ವಿದ್ಯಾಸಂಸ್ಥೆಗಳ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ ಹಾಕಿಕೊಂಡಿದ್ದೇನೆ ಎಂದರು.
ಜ್ಞಾನಭಾರತಿ ಪ.ಪೂ. ಕಾಲೇಜಿನ ಪ್ರಾಚಾರ್ಯರಾದ ಗೋವಿಂದೆಗೌಡ, ಡಾ.ಕಪಿನಿಪಾಳ್ಯರಮೇಶ್, ಮುಖ್ಯೋಪಾಧ್ಯಯ ಪ್ರಕಾಶಮೂರ್ತಿ, ಬಿಜೆಪಿ ಜಿಲ್ಲಾಉಪಾಧ್ಯಕ್ಷ ಕೆ.ರಮೇಶ್, ಬಿಜೆಪಿ ಮುಖಂಡರಾದ ವಕೀಲ ಸತೀಶ್, ನಟರಾಜು, ಮಾದಪ್ಪ, ರವೀಶ್, ರಂಗನಾಥ, ಕೆ.ಟಿ.ರಾಜು, ಶ್ರೀನಿವಾಸ್, ವೆಂಕಟೇಶ್ ಇತರರು ಇದ್ದರು.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ
Get real time updates directly on you device, subscribe now.
Prev Post
Comments are closed.