ರಂಗು ಪಡೆದುಕೊಂಡ ಕೊರೊನಾ ರಾಜಕಾರಣ

139

Get real time updates directly on you device, subscribe now.

ಕುಣಿಗಲ್: ಕೊರೊನಾ ಹಾವಳಿ ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಣೆಯಾಗಿ ಹತ್ತು ದಿನ ಕಳೆದಿದ್ದು, ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮ ಹಾಗೂ ಇದೀಗ ರಾಜ್ಯ ಸರ್ಕಾರ ಎರಡು ತಿಂಗಳ ಆಹಾರ ಧಾನ್ಯ ವಿತರಣೆಗೆ ಮುಂದಾಗಿರುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ರಾಜಕೀಯ ಪಕ್ಷಗಳು ಕೊರೊನ ವಿಷಯದಲ್ಲು ತಮ್ಮ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದು ರಾಜಕೀಯ ಪಕ್ಷಗಳು ವಿಷಯ ಯಾವುದೇ ಇದ್ದರೂ ಅದನ್ನು ರಾಜಕಾರಣಕ್ಕೆ ಬಳಸಿಕೊಂಡು ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುವ ಪ್ರಯತ್ನ ನಿರಂತರವಾಗಿರುತ್ತದೆ ಎಂದು ಸಾಬೀತು ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರ ಇರುವ ಸಮಯದಲ್ಲಿ ಕೊರೊನ ಹಾವಳಿ ಹೆಚ್ಚಾದ್ದರಿಂದ ಲಾಕ್‌ಡೌನ್ ಘೋಷಣೆಯಾಗಿ ಅಘೋಷಿತ ಬಂದ್, ಜನ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದೆ. ಆದರೂ ಸ್ಥಳೀಯವಾಗಿ ಶಾಸಕರಾಗಿರುವ ಕಾಂಗ್ರೆಸ್‌ನ ಡಾ.ರಂಗನಾಥ್ ಸ್ವತಃ ವೈದ್ಯರಾಗಿರುವ ಕಾರಣ ಪ್ರತಿ ಹೋಬಳಿ ಕೇಂದ್ರ ಸೇರಿದಂತೆ ಪಟ್ಟಣದ ಪ್ರದೇಶದಲ್ಲಿ ಮೈಕ್‌ನಲ್ಲಿ ಪ್ರಚಾರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿನ ಕೀಟನಾಶಕ ಸಿಂಪಡಣೆ ಕಾರ್ಯದಲ್ಲಿ ತಾವೆ ಮುಂದಾಳತ್ವ ವಹಿಸಿಕೊಂಡು ಕೀಟನಾಶಕ ಸಿಂಪಡಿಸಿ, ಕೊರೊನ ಅರಿವು ಸೇರಿದಂತೆ ಮಾಸ್‌ಕ್‌, ಸ್ಯಾನಿಟೈಸರ್ ವಿತರಣೆ ಇತರೆ ವಿಷಯವಾಗಿ ಒಂದಲ್ಲ ಒಂದು ಕಾರಣದಿಂದ ದಿನಾಲೂ ಜನರ ಬಳಿಗೆ ಹೋಗುತ್ತಾ ಇದ್ದಾರೆ.
ಲಾಕ್‌ಡೌನ್ ದಿನದಿಂದಲೂ ಮನೆಯಲ್ಲಿ ಆಶ್ರಯ ಪಡೆದಿದ್ದ ಬಿಜೆಪಿಯ ಪದಾಧಿಕಾರಿಗಳು ಕೊರೊನ ಲಾಕ್‌ಡೌನ್ ಹಾವಳಿಯಿಂದ ಆರ್ಥಿಕ ಸಂಕಷ್ಟಕ್ಕೆೆ ಸಿಲುಕಿರುವ ಬಡವರಿಗೆ ನಂದಿನಿ ಹಾಲು ವಿತರಣೆ ಯೋಜನೆ ಮೂಲಕ ಪಟ್ಟಣದಲ್ಲಿ ದಿಡೀರ್ ಪ್ರಚಾರಕ್ಕೆ ಬಂದಿದ್ದಾರೆ.
ಸರ್ಕಾರ ಎರಡು ತಿಂಗಳ ಪಡಿತರ ವಿತರಣೆ ಮೂಲಕ ಪಡಿತರ ಆಹಾರ ಧಾನ್ಯ ವಿತರಣೆಗೆ ಮುಂದಾಗಿರುವ ಕ್ರಮವನ್ನು ತಮ್ಮ ತಮ್ಮ ಪಕ್ಷಗಳ ಮುಖಂಡರ ಭಾವಚಿತ್ರಗಳ ಪೋಸ್‌ಟ್‌‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಸರಿಯಾಗಿ ಪಡತರ ವಿತರಣೆ ಮಾಡದೆ ಇದ್ದಲ್ಲಿ ಕಾಂಗ್ರೆಸ್ ಪಕ್ಷದವರು ಶಾಸಕರ ನಂಬರ್ ಹಾಕಿದ್ದರೆ ಬಿಜೆಪಿಯವರು ತಾಲೂಕು ಬಿಜೆಪಿ ಅಧ್ಯಕ್ಷರು ಹಾಗೂ ಮುಖಂಡ ಡಿ.ಕೃಷ್ಣಕುಮಾರ್ ನಂಬರ್ ಹಾಕಿದ್ದಾಾರೆ. ಎರಡೂ ಪಕ್ಷಗಳವರು ಸಾಮಾಜಿಕ ಜಾಲತಾಣಗಳಲ್ಲಿ ಯೋಜನೆಯ ಮಾಹಿತಿ ಮೊದಲು ನಾವು ಹಾಕಿದ್ದು ಎಂದು ಪರಸ್ಪರ ವಾಗ್ವಾದಕ್ಕೆ ಇಳಿದು ಅತ್ಯಂತ ಕೀಳು ಮಟ್ಟದ ಅಶ್ಲೀಲ ಪದಪ್ರಯೋಗ ಮಾಡಿಕೊಂಡು ಪದ ಕಚ್ಚಾಟಕ್ಕೆ ಇಳಿದಿದ್ದಾರೆ.
ಕೊರೊನ ಮಹಾಮಾರಿ ಹಾವಳಿ ನಿಯಂತ್ರಣಕ್ಕೆ ಯಾವಾಗ ಬರುತ್ತದೆ, ನಮ್ಮ ಜೀವನ ಎಂದಿನಿಂದ ದೈನಂದಿನ ಸ್ಥಿತಿಗೆ ಬರುತ್ತೆ, ಯಾವಾಗ ನಮ್ಮ ಕೆಲಸ ಕಾರ್ಯ ಪ್ರಾರಂಭವಾಗತ್ತೆ ಎಂದು ಸಾಮಾನ್ಯ ಜನತೆ ದಿನಾಲೂ ಕುತೂಹಲದಿಂದ ಕಾಯುತ್ತಿದ್ದಾರೆ, ರಾಜಕೀಯ ಪಕ್ಷಗಳು ಸರ್ಕಾರ ಜನರ ತೆರಿಗೆ ಹಣದಲ್ಲಿ ನೀಡುವ ಯೋಜನೆ ತಲುಪಿಸಲು ತಮ್ಮ ಪಕ್ಷಗಳ ಬ್ಯಾನರ್ ಹಾಕಿಕೊಂಡು ತಾವೆ ಮನೆಯಿಂದ ತಂದು ಕೊಟ್ಟ ರೀತಿಯಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದ್ದು, ರಾಜಕಾರಣಿಗಳಿಗೆ ವಿಷಯ ಯಾವುದೇ ಆದರೂ ಅದರ ರಾಜಕೀಯ ಲಾಭ ಎಷ್ಟರ ಮಟ್ಟಿಗೆ ಪಡೆಯಬೇಕು ಎಂಬ ಒಂದೆ ಗುರಿ ಎಂಬಂತಾಗಿದೆ.

Get real time updates directly on you device, subscribe now.

Comments are closed.

error: Content is protected !!