ಪುರಸಭೆಯಲ್ಲಿ ನಿಯಮಗಳ ಪಾಲನೆ ಆಗ್ತಿಲ್ಲ

ಕಾಮಗಾರಿ ಹೆಸರಲ್ಲಿ ಹಣ ಲೂಟಿಯಾಗ್ತಿದೆ- ಸದಸ್ಯರ ಆಕ್ರೋಶ

140

Get real time updates directly on you device, subscribe now.

ಕುಣಿಗಲ್: ಪುರಸಭೆಯಲ್ಲಿ ನಿಯಮಗಳಪಾಲನೆ ಆಗುತ್ತಿಲ್ಲ, ಇಷ್ಬ ಬಂದ ಹಾಗೆ ಟೆಂಡರ್ ಮಾಡಿದ್ದಾರೆ, ಒಂದು ಕೋಟಿ ಕೆಲಸಕ್ಕೆ ಹಾಕಿಕೊಂಡು ೨೦ ಲಕ್ಷೆ ಕೆಲಸ ಮಾಡಿ ೮೦ ಲಕ್ಷ ಹೊಡೆಯುತ್ತಾ ಜನವಿರೋಧಿ ಕೆಲಸ ಮಾಡುತ್ತಾ ಜನರ ನಿಂದನೆಗೆ ಗುರಿಯಾಗಿದ್ದಾರೆ ಎಂದು ಪುರಸ`É ಸದಸ್ಯ ರಾಮು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಪುರಸಭೆ ಅಧ್ಯಕ್ಷ ರಂಗಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ರಾಮು,೩ನೇ ವಾರ್ಡ್ಗೆ ಯಾವುದೆ ಕಾಮಗಾರಿ ಹಣ ಹಾಕದೆ ಹಿಂದಿನ ಅಧ್ಯಕ್ಷರು ಅನ್ಯಾಯ ಮಾಡಿದ್ದಾರೆ, ಇದೀಗ ಅನುದಾನ ಹಂಚಿಕೆ ಅನ್ಯಾಯವಾಗುತ್ತಿದೆ, ಕಾಮಗಾರಿ ಹೆಸರಲ್ಲಿ ಹಣಲೂಟಿ ಹೊಡೆಯುವಂತಾಗಿದೆ, ಜನಸಾಮಾನ್ಯರು ಅರ್ಜಿ ನೀಡಿದರೆ ಸಕಾಲದಲ್ಲಿ ಪಡೆಯೊದಿಲ್ಲ, ಜನರನ್ನು ಅಲೆದಾಡಿಸುತ್ತಾರೆ, ಪುರಸಭೆ, ಪುರಸಭೆ ಸದಸ್ಯರಿಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ, ಇನ್ನಾದರೂ ಪುರಸಭೆಯಲ್ಲಿ ಸಮರ್ಪಕ ಜನಪರ ಕೆಲಸ ಮಾಡಿ, ಇಲ್ಲವಾದರೆ ಜನರೆ ಪಾಠ ಕಲಿಸುತ್ತಾರೆ ಎಂದರು.
೨೦೨೦- ೨೧ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿಯಲ್ಲಿ ೪೭.೫೦ ಲಕ್ಷ ರೂ. ಮೊತ್ತ ಕಾಮಗಾರಿಗೆ ಹಿಂದಿನ ಅಧ್ಯಕ್ಷ ನಾಗೇಂದ್ರ ಅವಧಿಯಲ್ಲಿ ಮಾಡಿರುವ ಕ್ರಿಯಾ ಯೋಜನೆ ಅವೈಜ್ಞಾನಿಕ ಎಂದು ಬಿಜೆಪಿ ಸದಸ್ಯ ಕೃಷ್ಣ, ನಾಗಣ್ಣ ಆಕ್ಷೇಪಿಸಿದ್ದು ಮಾಜಿ ಅಧ್ಯಕ್ಷ, ಕಾಂಗ್ರೆಸ್ ನ ಹಾಲಿ ಸದಸ್ಯ ನಾಗೇಂದ್ರ, ಅರುಣ್ ಕುಮಾರ್ ವಿರೋಧಿಸಿದ್ದರಿಂದ ಕಾವೇರಿದ ಚರ್ಚೆಗೆ ಕಾರಣವಾಯಿತು, ಬಿಜೆಪಿ ಸದಸ್ಯರು ಪುರಸಭೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಬೇಕೆಂದಿದೆ, ಆದರೆ ಪುನಹ ಇದೇ ಕಾಮಗಾರಿಗೆ ೧೫ನೇ ಹಣಕಾಸು ಯೋಜನೆಯಡಿಯಲ್ಲಿ ೧೨ ಲಕ್ಷ ಹಾಕಿರುವುದು ಸರಿಯಲ್ಲ, ಲೂಟಿ ಹೊಡೆಯುವ ತಂತ್ರಗಾರಿಕೆ ಎಂದರೆ, ಕಾಂಗ್ರೆಸ್ ಸದಸ್ಯ ನಾಗೇಂದ್ರ ನಾವೇನು ನಮ್ಮ ಮನೆಗೆ ತೆಗೆದುಕೊಂಡು ಹೋಗಿಲ್ಲ ಎಂದು ಆಕ್ಷೇಪಿಸಿದರು.
ಅಧ್ಯಕ್ಷರು ಪುರಸಭೆ ಕಟ್ಟಡದ ೯೦ ಲಕ್ಷ ರೂ. ಕಾಮಗಾರಿಗಳಾದ ಅಗ್ನಿಶಾಮಕ ವ್ಯವಸ್ಥೆ, ಮಳೆ ನೀರು ಸಂಗ್ರಹಣೆ, ಕಾಂಪೌಂಡ್ ಗೋಡೆ, ಯುಪಿಎಸ್, ಪೀಠೋಪಕರಣ ಕೆಲಸ ಬಾಕಿ ಇದೆ, ಹೀಗಾಗಿ ಇದಕ್ಕೆ ಅನುಮೋದನೆ ನೀಡಲಾಗವುದು ಎಂದರು. ಇದು ಮಾಜಿ ಅಧ್ಯಕ್ಷ ನಾಗೇಂದ್ರರನ್ನು ಕೆರಳಿಸಿದ್ದು ಇಬ್ಬರ ನಡುವೆ ಗೊಂದಲಕ್ಕೆ ಕಾರಣವಾಯಿತು, ಅಧ್ಯಕ್ಷ ರಂಗಸ್ವಾಮಿ ಅನುದಾನ ವೆಚ್ಚಕ್ಕೆ ಸದಸ್ಯರ ಸಮಿತಿ ನಡೆಸಿ ನಂತರ ತೀರ್ಮಾನಿಸುವುದಾಗಿ ಹೇಳಿದ ಮೇರೆಗೆ ಪರಿಸ್ಥಿತಿ ತಿಳಿಗೊಂಡಿತು.
ಹಿಂದಿನ ಸಭೆ ನಡಾವಳಿಕೆಗಳಲ್ಲಿ ಸಭೆಯಲ್ಲಿ ಚರ್ಚೆ ಆದ ವಿಷಯದ ತೀರ್ಮಾನ ಬರೆಯದೆ ಕೆಲ ಅಧಿಕಾರಿಗಳು ತಮಗೆ ಅನುಕೂಲ ವಾದ ವರದಿ ಬರೆದಿರುವ ಬಗ್ಗೆ ೧೨ನೇ ವಾರ್ಡ್ಸದಸ್ಯೆ ಮಂಜುಳಾ ಆಕ್ಷೇಪಿಸಿದಾಗ, ಇದಕ್ಕೆ ಸಹಮತ ವ್ಯಕ್ತಪಡಿಸಿದ ಅಧ್ಯಕ್ಷ ರಂಗಸ್ವಾಮಿ, ಅಧಿಕಾರಿಗಳು ಸದಸ್ಯರಿಗೆ ಗೌರವ ನೀಡಿ, ಸಭೆ ನಡಾವಳಿಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಮನಬಂದಂತೆ ನಡೆದುಕೊಂಡರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ, ಕೆಲಸ ಮಾಡಲು ಇಷ್ಟವಿದ್ದರೆ ಇರಿ, ಇಲ್ಲವಾದರೆ ಬೇರೆಡೆ ಜಾಗನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿನ ಕೈಗಾರಿಕೆ ವಸಾಹತು ಪ್ರದೇಶದಿಂದ, ಮರ ಕತ್ತರಿಸುವ ಸಾಮಿಲ್ ಗಳಿಂದ ಯಾವುದೇ ತೆರಿಗೆ ವಸೂಲು ಮಾಡದ ಕಂದಾಯ ಅಧಿಕಾರಿಗಳನ್ನು ಸದಸ್ಯ ನಾಗಣ್ಣ ತರಾಟೆಗೆ ತೆಗೆದುಕೊಂಡು ಕ್ರಮಕ್ಕೆ ಒತ್ತಾಯಿಸಿದ್ದಾರೆ,
ಸದಸ್ಯ ಶ್ರೀನಿವಾಸ್, ಕುಡಿಯುವ ನೀರು ಪೂರೈಕೆಗೆ ಕೋಟಿ ಕೋಟಿ ಹಣ ವ್ಯಯ ಮಾಡುತ್ತಿದ್ದರೂ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ, ಈ ನಿಟ್ಟಿನಲ್ಲಿ ತ್ವರಿತ ಕ್ರಮವಾಗಬೇಕು ಎಂದರು. ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಯಿತು, ಕೆಲ ವಿಷಯಗಳಲ್ಲಿ ಆಡಳಿತ ಪಕ್ಷದ ಸದಸ್ಯರೆ ತಮ್ಮ ಪಕ್ಷದ ಅಧ್ಯಕ್ಷರ ಮೇಲೆ ಮುಗಿಬಿದ್ದ ಕಾರಣ ವಿರೋಧ ಪಕ್ಷದ ಸದಸ್ಯರು ಮೌನಕ್ಕೆ ಶರಣಾಗಬೇಕಾಯಿತು. ಉಪಾಧ್ಯಕ್ಷೆ ತಬಸ್ಸುಮ್ ಸದಾಖತ್ಉಲ್ಲಾ, ಪ್ರಕಾರ ಮುಖ್ಯಾಧಿಕಾರಿ ದೇವರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!