ತುಮಕೂರು: ಚಲನಚಿತ್ರ ನಟ ದಿ.ಪುನಿತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಎಸ್.ಎಸ್.ಪುರಂನ ಮಯೂರ ಯುವ ವೇದಿಕೆ ವತಿಯಿಂದ ಜಿ.ಎಸ್.ಎಸ್.ಐ ಇಎನ್ಟಿ ಆಸ್ಪತ್ರೆ, ಮರಳೂರು ದಿಣ್ಣೆಯ ಮಾರುತಿ ಆಸ್ಪತ್ರೆ, ಸಂಜೀವಿನಿ ಬ್ಲಡ್ ಬ್ಯಾಂಕ್ ಹಾಗೂ ಎನ್.ಎಸ್.ಐ ಪೌಂಢೇಷನ್ ಸಹಯೋಗದಲ್ಲಿ ನೇತ್ರದಾನ ಶಿಬಿರ, ರಕ್ತದಾನ ಶಿಬಿರ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಜಿ.ಎಸ್.ಎಸ್.ಐ ಇಎನ್ಟಿ ಆಸ್ಪತ್ರೆಯ ವೈದ್ಯಡಾ.ಡಿ.ಎಸ್.ಸಿದ್ದಲಿಂಗಸ್ವಾಮಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ನಟ ಪುನಿತ್ ರಾಜ್ ಕುಮಾರ್ ಜೀವತಾವಧಿಯಲ್ಲಿ ಎಲೆಮರೆ ಕಾಯಿಯಂತೆ ಜೀವನ ನಡೆಸಿದರು, ಆದರೆ ಅವರು ಸಾವನ್ನಪ್ಪಿದ ಮೇಲೆ ಅವರು ಮಾಡಿದ ಧಾನ, ಧರ್ಮಗಳು ಬೆಳೆಕಿಗೆ ಬಂದವು, ಇಂದು ರಾಜ್ಯದ ಜನತೆಯೇ ಅವರ ಹುಟ್ಟು ಹಬ್ಬ ಆಚರಿಸುತ್ತಿದೆ, ಅವರು ಸಾವನ್ನಪ್ಪಿದ ನಂತರ ಕಣ್ಣುಗಳನ್ನು ದಾನ ಮಾಡಿದರು, ಅದರಿಂದ ನಾಲ್ಕು ಜನರು ಪ್ರಪಂಚ ನೋಡುವಂತಾಯಿತು, ಇದರಿಂದ ಪ್ರೇರೇಪಣೆಗೊಂಡ ರಾಜ್ಯದ ಜನತೆ ಇಂದು ಹೆಚ್ಚಿನ ರೀತಿಯಲ್ಲಿ ಕಣ್ಣು ದಾನ ಮಾಡಲು ಮುಂದಾಗುತ್ತಿದ್ದಾರೆ, ಜಿಲ್ಲೆಯಲ್ಲಿ ಈ ಮೊದಲು ವರ್ಷಕ್ಕೆ ೭೫ ರಿಂದ ೮೦ರಷ್ಟಿದ್ದ ಕಣ್ಣುಗಳ ದಾನ, ಪುನಿತ್ ಅವರ ಸಾವಿನ ನಂತರ ೧೫೦ ಕ್ಕೆ ಹೆಚ್ಚಿದೆ, ಸಾವಿನಲ್ಲಿಯೂ ಜನರನ್ನು ಎಚ್ಚರಿಸಿ ಸಾರ್ಥಕತೆ ಕಂಡುಕೊಂಡ ವ್ಯಕ್ತಿ ನಮ್ಮ ಬೆಟ್ಟದ ಹೂವು ಪುನೀತ್ ರಾಜಕುಮಾರ್ ಎಂದರೆ ತಪ್ಪಾಗಲಾರದು ಎಂದರು.
ಮಗು ಹುಟ್ಟಿದಾಗ ಕಣ್ಣುಗಳು ಶೇ.೭೦ ರಷ್ಟು ಮಾತ್ರ ಬೆಳವಣಿಗೆ ಹೊಂದಿರುತ್ತವೆ, ಆ ನಂತರ ಹಂತ ಹಂತವಾಗಿ ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಸಂಪೂರ್ಣ ಬೆಳವಣಿಗೆ ಹೊಂದುತ್ತವೆ, ಈ ಅವಧಿಯಲ್ಲಿ ಪೋಷಕರು ಮಕ್ಕಳಲ್ಲಿರುವ ಕಣ್ಣಿನ ತೊಂದರೆ ಗುರುತಿಸಿ, ಸರಿಯಾದ ಚಿಕಿತ್ಸೆ ಕೊಡಿಸಿದಲ್ಲಿ ದೃಷಿ ದೋಷದಿಂದ ಮುಕ್ತರಾಗಬಹುದು, ಮಾಲಗಣ್ಣು ಸೇರಿದಂತೆ ಯಾವುದೇ ಕಣ್ಣಿನ ತೊಂದರೆ ಇದ್ದರೆ ಅಸಡ್ಡೆ ಮಾಡದೆ ತಜ್ಞ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಿರಿ, ಅವೈಜ್ಞಾನಿಕ ಚಿಕಿತ್ಸೆಗೆ ಒಳಗಾಗಬೇಡಿ, ಇದರಿಂದ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಡಾ.ಸಿದ್ದಲಿಂಗಸ್ವಾಮಿ ಎಚ್ಚರಿಸಿದರು.
ಸಂಜೀವಿನಿ ಬ್ಲಡ್ ಬ್ಯಾಂಕಿನ ಅರುಣ್ ಮಾತನಾಡಿ, ತುಮಕೂರು ನಗರ ಒಂದರಲ್ಲಿಯೇ ದಿನವೊಂದಕ್ಕೆ ಸುಮಾರು ೬೦-೧೦೦ ಯೂನಿಟ್ ರಕ್ತದ ಅವಶ್ಯಕತೆ ಇದೆ, ಆದರೆ ನಮ್ಮ ಜನಸಂಖ್ಯೆಯ ಶೇ.೨ ರಿಂದ ೪ ರಷ್ಟು ಜನ ಮಾತ್ರ ರಕ್ತದಾನ ಮಾಡುತ್ತಿದ್ದು, ಇಂದಿಗೂ ಕೆಲ ಮೂಢನಂಬಿಕೆಗಳಿಗೆ ಒಳಗಾಗಿ ಜನರು ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ರಕ್ತದಾನ ಮಾಡುವುದರಿಂದ ಏಕ ಕಾಲಕ್ಕೆ ನಾಲ್ಕು ಜನರು ಜೀವ ಉಳಿಸಬಹುದು, ಜೊತೆಗೆ ತಮ್ಮಲ್ಲಿರುವ ಕೊಬ್ಬಿನ ಅಂಶ ಕಡಿಮೆಯಾಗುವುದರ ಜೊತೆಗೆ, ೪೮ ಗಂಟೆಗಳಲ್ಲಿ ಹೊಸ ರಕ್ತದ ಉತ್ಪತ್ತಿಯಿಂದ ಚೇತನ್ಯ ಶಾಲಿಗಳಾಗಿ ಇರಬಹುದು, ಹಾಗಾಗಿ ಜನರು, ಅದರಲ್ಲಿಯೂ ಯುವ ಜನರು ರಕ್ತದಾನದತ್ತ ಮನಸ್ಸು ಮಾಡಬೇಕೆಂದರು.
ನಗರಪಾಲಿಕೆಯ ೨೫ನೇ ವಾರ್ಡ್ನ ಸದಸ್ಯೆ ಮಂಜುಳ ಆದರ್ಶ ಮಾತನಾಡಿ, ಮನುಷ್ಯ ಎಷ್ಟು ಜನಾನುರಾಗಿಯಾಗಿದ್ದರು ಎಂಬುದನ್ನು ಅವರ ಸಾವಿನ ವೇಳೆ ನೋಡು ಎಂಬ ನಾಣ್ನುಡಿ ಇದೆ, ಪುನೀತ್ ರಾಜ್ ಕುಮಾರ್ ಅವರ ಸಾವಿನ ನಂತರ ನಡೆದ ಎಲ್ಲಾ ಘಟನೆಗಳು ಒಂದು ರೀತಿಯಲ್ಲಿ ಪವಾಡದ ರೀತಿಯಲ್ಲಿವೆ, ಧಾನ, ಧರ್ಮದಲ್ಲಿ ಅವರ ತಂದೆಗಿಂತಲೂ ಒಂದು ಕೈ ಮೇಲೆ ಎಂಬುದನ್ನು ಸಾಬೀತು ಮಾಡಿದ್ದಾರೆ, ಈ ವಾರ್ಡ್ನ ನಾಗರಿಕರ ಕೋರಿಕೆಯಂತೆ ಶೀಘ್ರವೇ ವಾರ್ಡ್ನ ಎಲ್ಲಾ ಬಡಾವಣೆಗಳಿಗೆ ನಾಮÀಲಕ ಅಳವಡಿಸುವ ಕಾರ್ಯ ಶೀಘ್ರವೇ ಆರಂಭವಾಗಲಿದೆ ಎಂದರು.
ಎನ್ಎಸ್ಐ ಪೌಂಢೇಷನ್ನ ಎನ್.ಎಸ್.ಶ್ರೀಧರ್ ಮಾತನಾಡಿ, ೧೯೮೮ ರಿಂದಲೂ ನಮ್ಮ ಸಂಸ್ಥೆ ವತಿಯಿಂದ ಕಣ್ಣಿನ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಮಾಡಿಕೊಡು ಬರಲಾಗುತ್ತಿದೆ, ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರು ಕಣ್ಣುಗಳನ್ನು ದಾನ ಮಾಡಿದ ನಂತರ ಜನರಲ್ಲಿ ಜಾಗೃತಿ ಮೂಡಿದೆ, ಜನ ಸ್ವಯಂ ಪ್ರೇರಿತರಾಗಿ ಕಣ್ಣುಗಳ ದಾನಕ್ಕೆ ಮುಂದಾಗುತ್ತಿದ್ದಾರೆ, ಇದುವರೆಗೂ ನಮ್ಮ ಸಂಸ್ಥೆಯಿAದ ೧೨೦೦ಕ್ಕೂ ಹೆಚ್ಚು ಕಣ್ಣುಗಳನ್ನು ತೆಗೆದು, ಸುಮಾರು ೨೨೦೦ ಕ್ಕು ಹೆಚ್ಚು ಜನರಿಗೆ ದೃಷ್ಟಿ ನೀಡಲಾಗಿದೆ, ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಯೂರ ಯುವ ವೇದಿಕೆ ಅಧ್ಯಕ್ಷ ಹೆಬ್ಬೂರು ಶ್ರೀನಿವಾಸಮೂರ್ತಿ ಮಾತನಾಡಿ, ನಮ್ಮ ಸಂಸ್ಥೆಯಿಂದ ಕನ್ನಡ ನಾಡು, ನುಡಿ, ನೆಲ, ಜಲ ಬಗ್ಗೆ ಹಲವಾರು ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದ್ದು, ಸ್ವಚ್ಛತಾ ಕಾರ್ಯಕ್ರಮದ ಜೊತೆಗೆ, ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ, ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿರುವ ರಕ್ತದಾನ, ನೇತ್ರದಾನ ಕಾರ್ಯಕ್ರಮ ಹೆಚ್ಚು ಖುಷಿ ನೀಡಿವೆ ಎಂದರು.
ವೇದಿಕೆಯಲ್ಲಿ ಮಯೂರು ಯುವ ವೇದಿಕೆಯ ಕಾರ್ಯಾಧ್ಯಕ್ಷ ರಾಜಕುಮಾರ್ ಗುಪ್ತ, ಉಪಾಧ್ಯಕ್ಷ ಎನ್.ಆರ್.ಸ್ವಾಮಿ, ಮಾರುತಿ ಆಸ್ಪತ್ರೆಯ ಡಾ.ವೆಂಕಟೇಶಮೂರ್ತಿ, ಕಸ್ತೂರಬಾ ಆಸ್ಪತ್ರೆಯ ವರುಣ್, ರೋಟರಿ ಗೌವರ್ನರ್ ಬಿಳಿಗೆರೆ ಶಿವಕುಮಾರ್, ಮಂಜೇಶ್, ಆದರ್ಶ, ಷಡಕ್ಷರಿ ಮತ್ತಿತರರು ಇದ್ದರು.
ಪುನೀತ್ ಹುಟ್ಟುಹಬ್ಬ- ರಕ್ತದಾನ ಮಾಡಿದ ಅಭಿಮಾನಿಗಳು
Get real time updates directly on you device, subscribe now.
Prev Post
Next Post
Comments are closed.