ಧ್ಯೇಯ, ಸಿದ್ಧಾಂತದ ಅಡಿ ಕೆಲಸ ಮಾಡಿ

ಬಿಜೆಪಿ ಕಾರ್ಯಕರ್ತರಿಗೆ ಸಚಿವ ಆರಗ ಜ್ಞಾನೇಂದ್ರ ಕರೆ

141

Get real time updates directly on you device, subscribe now.

ತುಮಕೂರು: ಬಿಜೆಪಿ ಕಾರ್ಯಕರ್ತರು ಧ್ಯೇಯ, ಸಿದ್ಧಾಂತದ ಅಡಿಯಲ್ಲಿ ತಮ್ಮ ಕಾರ್ಯ ನಿರ್ವಹಣೆ ಮಾಡುತ್ತಾ ಕ್ರಿಯಾಶೀಲ ಸೂತ್ರ ಬದ್ದರಾಗಿ ಕೆಲಸ ಮಾಡೋಣ ಎಂದು ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಕರೆ ನೀಡಿದರು.

ಸೋಂಪುರ ಹೋಬಳಿ ನರಸೀಪುರದ ಲಕ್ಷ್ಮೀಪುರದಲ್ಲಿ ಬಿಜೆಪಿ ತುಮಕೂರು ಜಿಲ್ಲಾ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಭಾರತ ಮಾತಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ, ಕಾರ್ಯಕರ್ತರಿಗೆ ದೇಶ ಮೊದಲು, ವೈಯಕ್ತಿಕ ಬದುಕು ನಂತರ ಎಂಬ ರೀತಿಯಲ್ಲಿರುತ್ತದೆ, ನಮ್ಮ ಹಿರಿಯರು ಹಣತೆ ಕೊಟ್ಟು ಬೆಳೆಸಿದರು, ಸದಾ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಾ, ಪಕ್ಷದ ಸಂಘಟನೆ ನಿರಂತರವಾಗಿ ಮಾಡುತ್ತಾ, ಪ್ರತಿ ಬೂತ್ ಮಟ್ಟದಲ್ಲಿ ಕ್ರೀಯಶೀಲರಾದರೆ ಒಳಿತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸರಳ ಸಜ್ಜನಿಕೆಯ ಬಿಜೆಪಿ ಹಿರಿಯರಾದ ಲೋಕಸಭಾ ಉಪ ಸಭಾಪತಿಗಳಾಗಿದ್ದ ಎಸ್.ಮಲ್ಲಿಕಾರ್ಜುನಯ್ಯ ನವರ ಕಾರ್ಯ ನಿರ್ವಹಣೆಗಳ ಬಗ್ಗೆ ವಿವರಿಸಿದರು. ದೇಶದಲ್ಲಿ ಬಿಜೆಪಿಗೆ ಸರಿಸಾಟಿ ಇರುವ ಯಾವುದೇ ಪಕ್ಷ ಇಲ್ಲ, ಕಾರ್ಯಕರ್ತರ ಅರ್ಪಣಾ ವಮನೋಭಾವ ಇರುವುದರಿಂದ ಕಾರ್ಯಕರ್ತರ ಪಡೆ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಗೆ ೧೩೦ ವರ್ಷಗಳ ಇತಿಹಾಸ ಇದೆ, ೬೫ ವರ್ಷಗಳ ಸುದೀರ್ಘವಾದ ಆಡಳಿತ ಮಾಡಿದರು, ಇಂದು ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದು, ಕಾಂಗ್ರೆಸ್ ಗೆ ನೇತೃತ್ವ, ನಾಯಕತ್ವವಿಲ್ಲದೆ ಮೂಲೆ ಗುಂಪು ಸ್ಥಿತಿ ತಲುಪಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಹಿರಿಯರ ಕಡೆಗಣನೆ, ಜನತಂತ್ರ ವ್ಯವಸ್ಥೆಯಲ್ಲಿ ಹಿನ್ನಡೆ, ಸಿದ್ಧಾಂತ ಅಡಿಯಲ್ಲಿ ನಡೆಯದೆ ಕೇವಲ ಒಂದು ಮನೆತನದ ನೇತೃತ್ವದಲ್ಲಿ ನಡೆಸುತ್ತಾ ಇರುವುದರಿಂದ ಇಮೇಜ್ ಕುಸಿದಿದೆ ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ, ಪ್ರಶಿಕ್ಷಣ ವರ್ಗದ ಮೂಲಕ ವಿಚಾರ, ಪರಂಪರೆ, ಧ್ಯೇಯಗಳನ್ನು ಮುಂದಿನ ಪೀಳಿಗೆಗೆ ಮುಂದುವರೆಸಬೇಕಿದೆ, ಪ್ರಶಿಕ್ಷಣದಲ್ಲಿ ಕಲಿಸಲು, ಜೀವನದಲ್ಲಿ ಅಳವಡಿಸಿಕೊಂಡು, ಆಚರಣೆಗೆ ತರೋಣ, ಪ್ರೇರಣಾದಾಯಕವಾಗಿ ಕಾರ್ಯ ನಿರ್ವಹಿಸೋಣ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಲಕ್ಷ್ಮೀಶ್ ಮಾತನಾಡಿ, ಪ್ರಶಿಕ್ಷಣ ವರ್ಗದ ೩ ದಿನದಲ್ಲಿ ವಿಷಯಗಳನ್ನು ಮನದಟ್ಟು ಮಾಡಿಕೊಂಡು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಭೆ ಮಾಡೋಣ ಎಂದರು.
ಶಾಸಕ ಜ್ಯೋತಿಗಣೇಶ್, ಜೈವಿಕ ಇಂಧನ ನಿಗಮ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ರಾಜ್ಯ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕ ಸಿದ್ದರಾಮಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!