ಬಲಿಜ ಸಮುದಾಯ ಒಗ್ಗಟ್ಟು ತೋರಲಿ: ಗಂಗಣ್ಣ

161

Get real time updates directly on you device, subscribe now.

ಮಧುಗಿರಿ: ಬಲಿಜ ಸಮುದಾಯದ ಸದೃಢವಾಗಿ ಬೆಳೆಯಲು ಒಗ್ಗಟ್ಟಿನ ಅವಶ್ಯಕತೆ ಇದೆ ಎಂದು ರಾಜ್ಯ ಸಹಕಾರ ಮಹಾ ಮಂಡಳದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ತಿಳಿಸಿದರು.

ಪಟ್ಟಣದ ಎಂ.ಎಸ್.ರಾಮಯ್ಯ ಸಮುದಾಯ ಭವನದಲ್ಲಿ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಯೋಗಿ ನಾರೇಯಣ ಸ್ವಾಮಿ ಜಯಂತಿ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಕೈವಾರ ತಾತಯ್ಯನವರ ಜಯಂತಿ ಆಚರಣೆ ಮಾಡಲು ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು. ಸಮುದಾಯಕ್ಕೆ ಶೈಕ್ಷಣಿಕವಾಗಿ ೨ಎ ಮೀಸಲಾತಿ ಇದ್ದು, ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಸದೃಢವಾಗಲು ನಾವೆಲ್ಲರೂ ೨ಎ ಮೀಸಲಾತಿ ಪಡೆಯಲು ಒಗ್ಗಟ್ಟಾಗಬೇಕು, ಬಲಿಜ ಸಮುದಾಯ ಸಮಾಜದಲ್ಲಿ ಉತ್ತಮ ಹೆಸರು ಗಳಿಸಿದ್ದು, ನಾವೆಲ್ಲರೂ ಎಲ್ಲ ಧರ್ಮದವರೊಂದಿಗೆ ಪ್ರೀತಿ ಹಾಗೂ ಸೌಹಾರ್ದತೆಯಿಂದ ಬಾಳೋಣ ಎಂದರು.
ಪುರಸಭೆ ಸದಸ್ಯ ಎಂ.ಆರ್.ಜಗನ್ನಾಥ್ ಮಾತನಾಡಿ, ಬಲಿಜ ಸಮುದಾಯ ತಾಲೂಕಿನಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದರೂ ಕೂಡ ಶಕ್ತಿಯುತ ಸಮುದಾಯವಾಗಿ ಬೆಳೆಯುತ್ತಿದೆ, ನಾವೆಲ್ಲರೂ ಯೋಗಿನಾರೇಯಣ ಅವರ ಮಾರ್ಗದರ್ಶನ ಅನುಸರಿಸಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ನಿವೃತ್ತ ಸಿಪಿಐ ಶೇಷಾದ್ರಿ ಮಾತನಾಡಿ, ಕೈವಾರ ತಾತಯ್ಯನವರ ತತ್ವ ಹಾಗೂ ಆದರ್ಶವನ್ನು ಪ್ರತಿಯೊಬ್ಬರು ತಪ್ಪದೆ ಪಾಲನೆ ಮಾಡಬೇಕು. ಬಲಿಜ ಸಮುದಾಯದ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಬೇಕು, ಪಟ್ಟಣದ ಬಸವಣ್ಣನ ಬೆಟ್ಟದ ತಪ್ಪಲಿನಲ್ಲಿ ಕೈವಾರ ತಾತಯ್ಯ ದೇವಾಲಯ ನಿರ್ಮಾಣವಾಗುತ್ತಿದ್ದು, ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ಪುರಸಭೆ ಸದಸ್ಯೆ ಸುಜಾತ, ಬಲಿಜ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ, ಉಪಾಧ್ಯಕ್ಷ ಕೆ.ಪ್ರಕಾಶ್, ಕಾರ್ಯದರ್ಶಿ ಶ್ರೀರಾಮಯ್ಯ, ಸಮುದಾಯದ ಮುಖಂಡರಾದ ರಮೇಶ್, ಪಾವಗಡ ಮಂಜುನಾಥ್, ಗುರುಲಿಂಗಯ್ಯ, ಉಮೇಶ್, ಆರ್.ಎ.ನಾರಾಯಣ್, ಎಂ.ವೆಂಕಟ ರಾಮು, ಶ್ರೀನಿವಾಸ್, ಪೂಲು ವೆಂಕಟೇಶ್, ಅನಂತನಾರಾಯಣ ಬಾಬು, ಉಮೇಶ್, ಪ್ರಸನ್ನಕುಮಾರ್, ಲಕ್ಷ್ಮೀನಾರಾಯಣ, ಆನಂದ್, ವೇಣುಗೋಪಾಲ್, ತಿಮ್ಮಣ್ಣ, ಭಾನುಪ್ರಕಾಶ್, ಯತೀಶ್ ಬಾಬು, ಎಸ್ಬಿಟಿ ರಾಮು, ಜಿಲ್ಲಾ ಬಲಿಜ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ತಾಲೂಕು ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮುಂತಾದವರು ಇದ್ದರು.

Get real time updates directly on you device, subscribe now.

Comments are closed.

error: Content is protected !!