ಕುಣಿಗಲ್: ಶಾಲಾ ಕರ್ತವ್ಯದ ವೇಳೆಯಲ್ಲಿ ಮದ್ಯಪಾನ ಮಾಡಿದ್ದ ಶಿಕ್ಷಕನನ್ನು ಬಿಇಒ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅಮಾನತಿಗೆ ಒಳಗಾದ ಶಿಕ್ಷಕನನ್ನು ತಾಲ್ಲೂಕಿನ ಹೊಸಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಕಾಂತರಾಜು ಎಂದು ಗುರುತಿಸಲಾಗಿದೆ. ಮಾರ್ಚ್ ೧೭ರ ಗುರುವಾರ ಸದರಿ ಶಿಕ್ಷಕರು ಕರ್ತವ್ಯದ ವೇಳೆಯಲ್ಲಿ ಮದ್ಯಪಾನ ಮಾಡಿದ್ದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ದೂರಿದ ಮೇರೆಗೆ ಬಿಇಒ ಭೇಟಿ ನೀಡಿ ಪರಿಶೀಲಿಸಿದಾಗ ಶಿಕ್ಷಕರು ಯಾವುದೆ ಶೈಕ್ಷಣಿಕ ಚಟುವಟಿಕೆ ನಡೆಸದಿರುವುದು ಕಂಡು ಬಂದಿತು. ಶಿಕ್ಷಕರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಮದ್ಯಪಾನ ಮಾಡಿರುವುದು ದೃಡಪಟ್ಟ ಹಿನ್ನೆಲೆಯಲ್ಲಿ ಬಿಇಒ ತಿಮ್ಮರಾಜಯ್ಯ ಸದರಿ ಶಿಕ್ಷಕನ ಅಮಾನತು ಮಾಡಿ ಆದೇಶಿಸಿದ್ದಾರೆ.
ಕುಡುಕ ಶಿಕ್ಷಕ ಅಮಾನತು
Get real time updates directly on you device, subscribe now.
Prev Post
Next Post
Comments are closed.