ಬಿಜೆಪಿ ನಾಯಕರಿಂದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಣೆ

206

Get real time updates directly on you device, subscribe now.

ತುಮಕೂರು: ನಗರದ ಮಂಡಿಪೇಟೆಯಲ್ಲಿರುವ ಜೈಭರತ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ದೇಶಾದ್ಯಂತ ಸಖತ್ ಸುದ್ದಿಯಾಗಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಶನಿವಾರ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ವೀಕ್ಷಣೆ ಮಾಡಿದರು.

ಇನ್ನೂ ಮೂರ್ನಾಲ್ಕು ದಿನಗಳವರೆಗೆ ಬಿಜೆಪಿ ಕಾರ್ಯಕರ್ತರು, ಹಿರಿಯ ನಾಗರಿಕರು, ಮಹಿಳೆಯರು, ಸಾರ್ವಜನಿಕರಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಉಚಿತವಾಗಿ ಸಿನಿಮಾ ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದು, ದೇಶದ ಪ್ರತಿಯೊಬ್ಬ ನಾಗರಿಕನೂ ನೋಡಲೇಬೇಕಾದಂತಹ ಸಿನಿಮಾ ಇದಾಗಿದೆ.
ಚಿತ್ರ ವೀಕ್ಷಣೆಗೆ ಆಗಮಿಸಿದ್ದಂತಹ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸ್ವಾತಂತ್ರ್ಯ ನಂತರದಲ್ಲಿ ರಾಷ್ಟ್ರೀತೆ ದೇಶಕ್ಕೆ ಯಾಕೆ ಅವಶ್ಯಕತೆ ಇದೆ ಎನ್ನುವುದಕ್ಕೆ ನಮ್ಮ ದೇಶದ ಭಾಗವಾಗಿರುವಂತಹ ಕಾಶ್ಮೀರ್ ನಲ್ಲಿ ೯೦ ರ ದಶಕದಲ್ಲಿ ಹಿಂದುಗಳ ಮೇಲೆ ಆದಂತಹ ನರಮೇದ ನಿಜ ಚರಿತ್ರೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದರು.
ದೇಶಕ್ಕೆ ಏನು ಅನಿವಾರ್ಯತೆ ಇದೆ ಇಂದು ಉಕ್ರೇನ್ ನಲ್ಲಿ ನಡೆಯುತ್ತಿರುವಂತಹ ಯುದ್ಧ, ಪಾಕಿಸ್ತಾನ, ಆ್ಘನಿಸ್ತಾನದಲ್ಲಿ ನಡೆದಂತಹ ಯುದ್ಧ ನಾವು ನೋಡಿದ್ದೇವೆ, ನಮ್ಮ ಭಾರತೀಯ ನಾಗರಿಕರ ರಕ್ಷಣೆ ಮಾಡಿಕೊಳ್ಳಬೇಕೆಂದರೆ ಇಂದು ಯಾರ ಅವಶ್ಯಕತೆ ಇದೆ ಎಂಬುದು ಎಲ್ಲರ ಮನಸ್ಸಿನಲ್ಲಿದೆ ಎಂದು ಹೇಳಿದರು.
ಇಂದು ಸಿಟಿ ರಾಜಕಾರಣ, ಕುಟುಂಬ ರಾಜಕಾರಣ, ಗ್ರಾಮ ಪಂಚಾಯಿತಿ ರಾಜಕಾರಣ ಮಾಡಿಕೊಂಡು ದೇಶ ನಡೆಸುವುದಕ್ಕಾಗಲ್ಲ, ದೇಶವನ್ನು ಎಂತಹವರ ಕೈಗೆ ಕೊಟ್ಟರೆ ಸುಭದ್ರವಾಗಿರುತ್ತದೆ ಎನ್ನುವುದಕ್ಕೆ ಇಡೀ ದೇಶದ ಜನರಿಗೇ ಗೊತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ನವರು ಅಪಸ್ವರ ಎತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು ಇದು ನಿಜವಾಗಿಯೂ ಕಾಶ್ಮೀರದಲ್ಲಿ ನಡೆದಂತಹ ಘಟನೆ, ಇಂತಹ ಘಟನೆಯನ್ನು ಯಾರಾದರೂ ಬದಲಾಯಿಸಲಿಕ್ಕಾಗುತ್ತದೆಯೇ? ಹೀಗೆ ಬಿಟ್ಟರೆ ಮುಂದೆ ಎಲ್ಲಾ ರಾಜ್ಯಗಳಿಗೂ ಆವರಿಸುತ್ತದೆ ಎಂಬ ಎಚ್ಚರಿಕೆಯ ಗಂಟೆ ಇದಾಗಿದೆ. ದೇಶವನ್ನು ಒಗ್ಗಟ್ಟಾಗಿರುವುದಕ್ಕೆ ಮತ್ತು ಹಿಂದೂ ಸಂಸ್ಕೃತಿ ಇಡೀ ವಿಶ್ವದಲ್ಲೇ ನಮ್ಮ ಭಾರತದಲ್ಲಿ ಮಾತ್ರ ಇರುವುದು, ಇದನ್ನು ಯಾವ ರೀತಿ ಸಾವಿರಾರು ವರ್ಷಗಳ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವುದಕ್ಕೆ ಇಂದು ಪ್ರದಾನಿ ನರೇಂದ್ರ ಮೋದಿಯವರ ಅವಶ್ಯಕತೆ ಅತ್ಯಗತ್ಯವಾಗಿ ಬೇಕಾಗಿದೆ ಎಂದು ನುಡಿದರು.
ಕಾಶ್ಮೀರದಲ್ಲಿ ದಶಕಗಳ ಕಾಲ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಮೇಲೆ ಬೆಳಕು ಚೆಲ್ಲುವ ದಿ ಕಾಶ್ಮೀರಿ ಫೈಲ್ಸ್ ಅತ್ಯುತ್ತಮ ಚಿತ್ರವಾಗಿದ್ದು, ಇನ್ನಷ್ಟು ಇಂಥ ಚಿತ್ರಗಳು ನಿರ್ಮಾಣವಾಗಬೇಕು, ಬಹಳ ಸಮಯದಿಂದ ಮರೆಮಾಚಲಾಗಿದ್ದ ಸತ್ಯ ಕೊನೆಗೂ ಹೊರಬಂದಿದೆ, ಇದನ್ನು ಪ್ರತಿಯೊಬ್ಬರೂ ವೀಕ್ಷಿಸಬೇಕು ಎಂದು ಕರೆ ನೀಡಿದರು.
ಈ ಚಿತ್ರ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದೆ, ೩೫ ವರ್ಷಗಳ ಹಿಂದೆ ನಡೆದ ಭೀಕರ ದಾಳಿ ಚಿತ್ರಿಸಿದೆ, ಅಲ್ಲಿನ ಹಿಂದುಗಳ ಮೇಲೆ ನಡೆದ ದೌರ್ಜನ್ಯ ಬಿಡಿಸಿಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜೆಬಿಟಿ ಹರೀಶ್, ಕೊಪ್ಪಳ್ ನಾಗರಾಜ್, ರುದ್ರಪ್ಪ, ಗುರುಶ್ರೀ ಬಸವರಾಜು, ಟಿ.ಬಿ.ಶೇಖರ್, ಶಿವರುದ್ರಯ್ಯ, ಮಲ್ಲಿಕಾರ್ಜುನಯ್ಯ, ದೊಡ್ಮನೆ ಗೋಪಾಲಗೌಡ, ಆರ್.ಜೆ.ಸುರೇಶ್, ವಿಶ್ವನಾಥ್, ಮಂಡಲ ಅಧ್ಯಕ್ಷರಾದ ಹನುಮಂತರಾಜು.ಟಿ.ಹೆಚ್, ಶಂಕರ್ ಕುರಿಪಾಳ್ಯ, ಮಾಜಿ ಸಿಂಡಿಕೇಟ್ ಸದಸ್ಯರಾದ ಉಮಾ ಮಹೇಶ್, ನಂಜುಂಡಸ್ವಾಮಿ, ಹನುಮಂತರಾಯಪ್ಪ, ಮಾಜಿ ನಗರಸಭಾ ಅಧ್ಯಕ್ಷರಾದ ಕಮಲಮ್ಮ, ಸರೋಜಗೌಡ, ಕೋಮಲ, ಕಾವ್ಯ, ವರಮಹಾಲಕ್ಷ್ಮೀ, ಹೇಮಾ, ರೇಖಾ, ಡಾ.ಫಾರ್ಜಾನಾ ರಹೀಂ ಜೀ, ವಿಜಯಲಕ್ಷ್ಮೀ, ಚಕ್ರಪಾಣಿ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!