ಧರ್ಮದ ಆಧಾರದ ಮೇಲೆ ರಾಜಕಾರಣ ಸಲ್ಲದು: ಡಿ.ಕೆ.ಸುರೇಶ್

144

Get real time updates directly on you device, subscribe now.

ಕುಣಿಗಲ್: ರಾಜ್ಯದ ಬಿಜೆಪಿ ಸರ್ಕಾರ ಜನತೆಗೆ ನೀಡಿದ ಆಶ್ವಾಸನೆಯಂತೆ ಅಭಿವೃದ್ಧಿ ಕಾರ್ಯ ಮಾಡಲಾಗದೆ ಈಗ ಜನರ ಗಮನ ಬೇರಡೆ ಸೆಳೆಯಲು ಭಗವದ್ಗೀತೆ ಮೊರೆ ಹೋಗಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಶನಿವಾರ ತಾಲೂಕಿನ ಗವಿಮಠದಲ್ಲಿ ಬಿಜೆಪಿ ಮುಖಂಡರಾದ ಎಸ್ವಿಬಿ ಸುರೇಶ್, ಮಾಸ್ತಿಕರಿಗೌಡ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯ ಮಾಡದೆ, ಯುವಕರಿಗೆ ಉದ್ಯೋಗ ನೀಡಲಾಗದೆ, ಈಗ ಚುನಾವಣೆ ಎದುರಿಸಲು ಶಕ್ತಿ ಇಲ್ಲದೆ, ಜನರ ಧಾರ್ಮಿಕ ಭಾವನೆ ಕೆರಳಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಅಶಾಂತಿ ವಾತವರಣ ಸೃಷ್ಟಿಸುತ್ತಾ ಒಂದು ವರ್ಗದ ಜನರನ್ನು ಮತ್ತೊಂದು ವರ್ಗದ ಜನರ ಮೇಲೆ ಎತ್ತಿಕಟ್ಟುತ್ತಿದ್ದಾರೆ. ಬಿಜೆಪಿಯವರು ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸಲಿ ನಮ್ಮ ವಿರೋಧವಿಲ್ಲ. ಶಾಲಾ ಕಟ್ಟಡ ಕಟ್ಟಲು ಆಗದೆ ಮಕ್ಕಳನ್ನು ಮರದ ಕೆಳಗೆ ಕೂರಿಸಿ, ವಿಜ್ಞಾನ, ಸಮಾಜ, ಗಣಿತ ಎಲ್ಲಾ ವಿಷಯಗಳನ್ನು ತೆಗದು ಮಹಾಭಾರತ, ರಾಮಾಯಣ ನೀಡಿ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುತ್ತಾ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ, ೪೦ ಪರ್ಸೆಂಟ್ ಕಮಿಷನ್ ಹಣ ಪಡೆದು ಸರ್ಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ತಮ್ಮ ಹಗರಣ ಮುಚ್ಚಿಡಲು ಇವೆಲ್ಲಾ ತಂತ್ರಗಾರಿಕೆ ಮಾಡುತ್ತಿದ್ದಾರೆ. ರಾಗಿ ಖರೀದಿ ನಿಟ್ಟಿನಲ್ಲಿ ಕೇಂದ್ರ ಸಚಿವೆ ಶೋಭ ಕರಂದ್ಲಾಜೆಯವರಿಗೆ ಕೇಳಿದರೆ ರಾಜ್ಯದ ಕಡೆ ಬೊಟ್ಟು ಮಾಡುತ್ತಾರೆ, ರಾಜ್ಯದ ಸಚಿವರನ್ನು ಕೇಳಿದರೆ ಕೇಂದ್ರದ ಕಡೆ ಹೇಳುತ್ತಾರೆ. ಬರಿ ಸುಳ್ಳು ಪ್ರಚಾರದಲ್ಲೆ ಕಾಲ ಕಳೆಯುತ್ತಾ ಜನ, ರೈತ ವಿರೋಧಿಯಾಗಿದ್ದಾರೆ.
ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ೨೦೨೩ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಅಷ್ಟೆ ಸತ್ಯ, ಉತ್ತರ ಭಾರತದ ಚುನಾವಣೆಗಳು ಬಡತನ, ಧರಿದ್ರ್ಯ, ಧರ್ಮದ ಆಧಾರದ ಮೇಲೆ ನಡೆದರೆ, ರಾಜ್ಯದಲ್ಲಿ ಅಭಿವೃದ್ಧಿ ಕೆಲಸದ ಆಧಾರದ ಮೇಲೆ ನಡೆಯುತ್ತದೆ, ರಾಜ್ಯ ಮತದಾರರು ಪ್ರಜ್ಞಾವಂತರಾಗಿದ್ದಾರೆ, ಧರ್ಮಾಧಾರಿತ ರಾಜಕಾರಣ ಮಾಡುತ್ತಾ ಸಮಾಜ ಒಡೆಯುವ ಕೆಲಸ ಮಾಡುವ ಬಿಜೆಪಿಗೆ ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ, ಪೋಷಕರು ಹೊಟ್ಟೆಬಟ್ಟೆ ಕಟ್ಟಿ ಮಕ್ಕಳನ್ನು ವಿದ್ಯಾವಂತರನ್ನಾಗಿಸಿದ್ದಾರೆ, ವಿದ್ಯಾವಂತರಿಗೆ ಸೂಕ್ತ ಉದ್ಯೋಗ ನೀಡದ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರ, ವಿದ್ಯಾವಂತ ನಿರುದ್ಯೋಗಿಗಳಿಗೆ ಬೋಂಡ ಮಾರುವಂತೆ ಹೇಳುತ್ತಾ ಪೋಷಕರ ಶ್ರಮವನ್ನು ಮಣ್ಣು ಪಾಲು ಮಾಡಿದ್ದಾರೆ, ಕಾಂಗ್ರೆಸ್ ಸರ್ಕಾರದ ಕೇಂದ್ರ, ರಾಜ್ಯದ ಆಡಳಿತಾವಧಿಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ಶಕ್ತಿತುಂಬಲು ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಪಕ್ಷ ಸೇರುವಂತೆ ಮುಕ್ತ ಆಹ್ವಾನ ನೀಡಿ, ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಮೂಲ ವಲಸಿಗ ಎಂದು ಭೇದ ಭಾವ ಮಾಡದೆ ಕಾಂಗ್ರೆಸ್ಸಿಗರಂತೆ ನೋಡಿಕೊಳ್ಳಲಾಗುವುದು ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ತಾಲೂಕಿನಲ್ಲಿ ಕಳೆದ ಏಳು ವರ್ಷಗಳಲ್ಲಿ ಕಾಂಗ್ರೆಸ್ಸಿಗೆ ಶಕ್ತಿ ತುಂಬಲು ಸಂಸದ ಡಿ.ಕೆ.ಸುರೇಶ್ ಕಾರಣ, ತಾಲೂಕಿನ ನೀರಾವರಿ ಕ್ಷೇತ್ರದಲ್ಲಿ ಅನ್ಯಾಯ ತಡೆಯಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಂಜೂರು ಮಾಡಿದ್ದ ಲಿಂಕ್ ಕೆನಾಲ್ ಕಾಮಗಾರಿಗೆ ಅಗ್ರಹಿಸಿ ಮೇಕೆದಾಟು ಪಾದಯಾತ್ರೆ ಮಾದರಿ ತಾಲೂಕಿನಿಂದ ವಿಧಾನಸೌಧಕ್ಕೆ ಪಾದಯಾತ್ರೆ ನಡೆಸಲಾಗುವುದು, ೨೦೨೩ಕ್ಕೆ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತ ಸಿದ್ಧ ಎಂದರು.
ಕಸಬಾ ಹೋಬಳಿ ಬಿಜೆಪಿ ಮುಖಂಡ ಎಸ್ವಿಬಿ ಸುರೇಶ್, ಅಮೃತೂರು ಹೋಬಳಿಯ ಮಾಸ್ತಿಕರಿಗೌಡ ತಮ್ಮ ನೂರಾರು ಬೆಂಬಲಿಗರೊAದಿಗೆ ಕಾಂಗ್ರೆಸ್ ಸೇರ್ಪಡೆಗೊಂಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಮುಖಂಡರಾದ ಗಂಗಶಾನಯ್ಯ, ಶಿವರಾಮಯ್ಯ, ಬಿ.ಡಿ.ಕುಮಾರ, ಬೇಗೂರು ನಾರಾಯಣ, ಪುರಸಭಾಧ್ಯಕ್ಷ ರಂಗಸ್ವಾಮಿ, ಪುರಸಭೆ ಕಾಂಗ್ರೆಸ್ ಸದಸ್ಯರು, ಗ್ರಾಪಂನ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದರು.

Get real time updates directly on you device, subscribe now.

Comments are closed.

error: Content is protected !!