ರಸ್ತೆ ಕಾಮಗಾರಿಗೆ ಅಡ್ಡಿ ಖಂಡಿಸಿ ಬಿಜೆಪಿ ಪ್ರತಿಭಟನೆ

207

Get real time updates directly on you device, subscribe now.

ಕುಣಿಗಲ್: ಪಟ್ಟಣದೆ ಹೆದ್ದಾರಿ ಅಭಿವೃದ್ಧಿ ನಿಟ್ಟಿನಲ್ಲಿ ಶೂರಾ ಸಮಿತಿ ಅಧ್ಯಕ್ಷ, ಕೆಲ ಪದಾಧಿಕಾರಿಗಳು ಅಡ್ಡಿ ಪಡಿಸುವುದು ಸರಿಯಲ್ಲ, ಇವರು ಯಾರ ತಾಳಕ್ಕೆ ತಕ್ಕಂತೆ ಕುಣಿದು ಜನಪರ ಕಾಮಗಾರಿ ಅಡ್ಡಿ ಪಡಿಸುತ್ತಿದ್ದಾರೆ ಎಂಬುದು ಜನಕ್ಕೆ ಗೊತ್ತಿದೆ ಎಂದು ಬಿಜೆಪಿ ಮುಖಂಡ, ಪಿಎಲ್ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಹೇಳಿದರು.
ಸೋಮವಾರ ಪಟ್ಟಣದ ಹೃದಯ ಭಾಗದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಒಂದು ವರ್ಗದ ಮುಖಂಡರು ಅಡ್ಡಿಪಡಿಸುತ್ತಿರುವುದು ಖಂಡಿಸಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ತಾಲೂಕಿನ ಎಲ್ಲಾ ಮುಸ್ಲಿಂರು ಕೆಟ್ಟವರಲ್ಲ, ಪಟ್ಟಣದಲ್ಲಿನ ರಸ್ತೆ ಕಾಮಗಾರಿಗೆ ಕೆಲ ಸ್ವಾರ್ಥ ಸಾಧಕ ಮುಖಂಡರಿಂದ ಸಮಾಜದಲ್ಲಿ ಎರಡು ವರ್ಗಗಳ ನಡುವೆ ಕಂದಕ ಉಂಟಾಗುವಂತೆ ಆಗಿರುವುದು ಖಂಡನೀಯ, ತಾಲೂಕಿನಲ್ಲಿ ಎರಡೂ ವರ್ಗದ ಜನರು ಅಣ್ಣ ತಮ್ಮಂದಿರಂತೆ ಇದ್ದೇವೆ, ಪಟ್ಟಣದಲ್ಲಿ ರಸ್ತೆ ಕಾಮಗಾರಿಗೆ ಶುರಾ ಸಮಿತಿ ಮುಖಂಡನೊಬ್ಬನ ಸ್ವಾರ್ಥಕ್ಕೆ ಅಡ್ಡಿ ಉಂಟು ಮಾಡುವುದು ಸರಿಯಲ್ಲ, ಸದರಿ ಜಾಗ ಸರ್ಕಾರಕ್ಕೆ ಸೇರಿದ ೩.೦೭ ಎಕರೆ ಖರಾಬು ಜಾಗವಾಗಿದೆ, ೧೪ ವರ್ಷದಿಂದ ರಸ್ತೆ ಕಾಮಗಾರಿ ಆಗದೆ ವಿಳಂಬವಾಗಿದೆ, ಇದೀಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಮ್ಮ ಸತತ ಒತ್ತಡದ ಮೇರೆಗೆ ಅನುದಾನ ಮಂಜೂರಾಗಿದ್ದು, ರಸ್ತೆ ಕಾಮಗಾರಿಗೆ ಅರ್ಥವಿಲ್ಲದೆ ಅಡ್ಡಿಪಡಿಸುವುದು ಶೋಭೆ ತರುವುದಿಲ್ಲ, ಉತ್ತರ ಪ್ರದೇಶದಲ್ಲಿ ಬಹುಸಂಖ್ಯಾತ ಮುಸ್ಲಿಂರು ಇರುವ ಜಾಗದಲ್ಲಿ ಬಿಜೆಪಿ ಜಯಗಳಿಸಿದೆ. ಬಿಜೆಪಿ ಎಂದಿಗೂ ಜಾತಿಬೇಧ ಮಾಡುವುದಿಲ್ಲ. ಆದರೆ ಜನಾಂಗದ ಕೆಲ ಸ್ವಾರ್ಥ ಪರ ಮುಖಂಡರು ಬೇಕೆಂದೆ ಚೇಷ್ಟೆ ಮಾಡುವುದು ಸರಿಯಲ್ಲ, ಸುಸಜ್ಜಿತ ರಸ್ತೆ ಅಭಿವೃದ್ಧಿಯಾದರೆ ಎಲ್ಲರೂ ನೆಮ್ಮದಿಯಾಗಿ, ಸುರಕ್ಷಿತವಾಗಿ ಒಡಾಡುತ್ತಾರೆ, ಒಂದು ಜಾತಿಯವರು ಅಲ್ಲ ಎಂದು ನೆನಪಿರಲಿ, ಶೂರಾ ಸಮಿತಿಯಲ್ಲಿ ಎಲ್ಲರೂ ಒಳ್ಳೆಯವರಾಗಿದ್ದಾರೆ, ಆದರೆ ಕೆಲವರು ರಾಜಕಾರಣದ ಕುತಂತ್ರದ ಹಿನ್ನೆಲೆಯಲ್ಲಿ ಕಾಮಗಾರಿ ಅಡ್ಡಿ ಪಡಿಸುತ್ತಿದ್ದಾರೆ ಇದು ಸರಿಯಲ್ಲ, ಶಾಸಕರು ಸಹ ಕಾಮಗಾರಿ ಅನುಷ್ಠಾನ ನಿಟ್ಟಿನಲ್ಲಿ ವಿಫಲರಾಗಿದ್ದಾರೆ, ಅಲ್ಲದೆ ಅನುದಾನ ತರಲು ಯೋಗ್ಯತೆ ಇಲ್ಲದೆ ಇದ್ದರೂ ಕಳ್ಳರಂತೆ ರಾತ್ರೋರಾತ್ರಿ ಕಾಂಗ್ರೆಸ್ ಸಂಸದರ ಕರೆಯಿಸಿ ಕಾಮಗಾರಿ ಪೂಜೆ ಮಾಡಿದ್ದಾರೆ, ನಾಚಿಕೆಯಾಗಬೇಕು. ಕೆಲವೆ ಸ್ವಾರ್ಥ ಸಾಧಕ ವ್ಯಕ್ತಿಗಳು ನಿಲ್ಲಿಸಿರುವ ಕಾಮಗಾರಿ ಈಗಲೆ ಪ್ರಾರಂಭಿಸಬೇಕು, ಇಲ್ಲವಾದಲ್ಲಿ ಬಿಜೆಪಿ ಕಾರ್ಯಕರ್ತರೆ ಗುದ್ದಲಿ, ಹಾರೆ, ಪಿಕಾಸಿ ಹಿಡಿದು ರಸ್ತೆ ಕಾಮಗಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್ ಮಾತನಾಡಿ, ಕಾಂಗ್ರೆಸ್ನ ಶಾಸಕರು, ತಮ್ಮ ಬ್ರದರ್ಸ್ ಗಳಿಗೆ ಅನುಕೂಲವಾಗಲೆಂದೆ ಬ್ರದರ್ಸ್ ಗಳನ್ನು ಎತ್ತಿಕಟ್ಟಿ ಕಾಮಗಾರಿ ನಿಲ್ಲಿಸುವಂತೆ ಮಾಡಿದ್ದಾರೆ, ಕಾಮಗಾರಿ ನಿಂತಲ್ಲಿ ಪ್ರಾರಂಭಿಸಲು ಬ್ರದರ್ ಗಳಿಗೆ ಪರಿಹಾರ ಕೊಡಿಸಲು ಹುನ್ನಾರ ನಡೆಸುತ್ತಿದ್ದಾರೆ, ಕಾಂಗ್ರೆಸ್ ನ ಶಾಸಕರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಇಂದು ಸಾಮಾನ್ಯ ಜನತೆ ಪರದಾಡುವಂತಾಗಿದೆ, ಶಾಸಕರ ಹಿಂಬಾಗಿಲ ರಾಜಕಾರಣಕ್ಕೆ ಧಿಕ್ಕಾರ, ಇಂದು ಒಂದು ವರ್ಗದ ಜನರಿಗೆ ಅನುಕೂಲ ಮಾಡಿಕೊಡಲು ಶಾಸಕರು ಬಹುಸಂಖ್ಯಾತ ವರ್ಗದವರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿಲ್ಲ, ಇದು ಶಾಸಕರ ಇಬ್ಬಗೆ ನೀತಿ, ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ, ಮುಂದೆ ಸರಿಯಾದ ಪಾಠ ಕಲಿಸುತ್ತಾರೆ, ಸಮಾಜದಲ್ಲಿ ಸೌಹಾರ್ಧವಾಗಿ ಬದುಕಬೇಕಿದೆ, ಯಾರನ್ನು ದೇಶ ಬಿಟ್ಟು ಹೋಗಿ ಎಂದು ಹೇಳುತ್ತಿಲ್ಲ, ಹಾಗಂತ ಅವರು ಮಾಡಿದ್ದನ್ನೆಲ್ಲಾ ಸಹಿಸಲಾಗದು, ಇಂದು ಪಾಕಿಸ್ತಾನವಾಗಲಿ, ಅಪ್ಘಾನಿಸ್ತಾನವಾಗಲಿ ಮುಸ್ಲಿಂರಿಗೆ ಸುರಕ್ಷತೆ ಇಲ್ಲ ಎಂಬುದು ಜಗಜಾಹಿರಾತಾಗಿದೆ, ಪಾಕಿಸ್ತಾನದಲ್ಲಿ ಮಸೀದಿಗೆ ಬಾಂಬು ಹಾಕಿ ಕೊಲ್ಲುತ್ತಿದ್ದರೆ, ಅ್ಘನಿಸ್ತಾನದಲ್ಲಿ ತಿನ್ನಲು ಅನ್ನವಿಲ್ಲದೆ ಜನ ಸಾಯುವಂತಾಗಿದೆ, ಆದರೆ ಭಾರತದಲ್ಲಿ ಮುಸ್ಲಿಂರನ್ನು ಅತ್ಯಂತ ಸುರಕ್ಷಿತವಾಗಿ, ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದೆ, ಕೆಲ ಒಂದು ವಿಷಯದಲ್ಲಿ ಹೈಕೋರ್ಟ್ ಆದೇಶವನ್ನು ಧಿಕ್ಕರಿಸುವ ಮನೋಭಾವ ನಿಜಕ್ಕೂ ಅಘಾತಕಾರಿಯಾಗಿದೆ ಇದು ಸರಿಯಲ್ಲ, ಸಂವಿಧಾನವನ್ನು ಒಪ್ಪುವ ಮುಸ್ಲಿಂರು ಸಂವಿಧಾನದ ಅಂಗವಾದ ನ್ಯಾಯಾಂಗದ ತೀರ್ಪನ್ನು ಒಪುವುದಿಲ್ಲ, ತೀರ್ಪು ನೀಡಿದ ನ್ಯಾಯಾಮೂರ್ತಿಗಳನ್ನೆ ಹೆದರಿಸಿ ಬೆದರಿಸುವ ಕೆಲಸ ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಸೋಮವಾರ ಬೆಳಗ್ಗೆ ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಕಾಂಗ್ರೆಸ್ ಮುಖಂಡರು ಕಾಮಗಾರಿ ಪ್ರಾರಂಭಿಸಿದ್ದನ್ನು, ಶೂರಾ ಸಮಿತಿಯ ಕೆಲ ಸದಸ್ಯರು ಕಾಮಗಾರಿ ಅವೈಜ್ಞಾನಿಕ ಎಂದು ನಿಲ್ಲಿಸಿದ್ದರು. ಬಿಜೆಪಿಯ ಪ್ರತಿಭಟನೆ ನಂತರ ಮುಖಂಡರು ಎಚ್ಚರಿಕೆ ನೀಡಿದ ಮೇರೆಗೆ ಲೋಕೋಪಯೋಗಿ ಇಲಾಖೆ ಎಇಇ ಗುರುಸಿದ್ದಪ್ಪ, ಸಿಪಿಐ ರಾಜು ಮತ್ತು ಸಿಬ್ಬಂದಿ ನೇತೃತ್ವದಲ್ಲಿ ತಹಶೀಲ್ದಾರ್ ಮಹಾಬಲೇಶ್ವರ್ ಸೂಚನೆ ಮೇರೆಗೆ ಕಾಮಗಾರಿ ಆರಂಭಿಸಿದರು. ಕಾಮಗಾರಿ ಪುನರ್ ಆರಂಭದ ವೇಳೆಯಲ್ಲಿ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಹಾಗೂ ಕಾಂಗ್ರೆಸ್ನ ಕಾರ್ಯಕರ್ತರು, ಮುಖಂಡರು ಸ್ಥಳದಲ್ಲಿ ಹಾಜರಿದ್ದು ಕಾಮಗಾರಿಗೆ ಪೊಲೀಸರೊಂದಿಗೆ ರಕ್ಷಣೆಗೆ ನಿಂತರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ಕೃಷ್ಣ, ನಾಗಣ್ಣ, ಆನಂದಕುಮಾರ್, ಕುಮಾರ, ವೆಂಕಟೇಶ್, ಮುಖಂಡರಾದ ಜಯರಾಮ, ಸಂತೋಷ್, ರಂಗಸ್ವಾಮಿ, ದೇವರಾಜ, ದಿಲೀಪ್, ಧನುಷ್, ಅಂಜನ್, ಅನೂಪ್, ಅಮರ್, ಸುನಿಲ್, ಸಂದೀಪ್, ಪ್ರೇಮಕುಮಾರ, ರೂಪ, ಗೌರಮ್ಮ, ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!