ಕಾಶ್ಮೀರಿ ಫೈಲ್ಸ್ ಚಿತ್ರ ವೀಕ್ಷಿಸಿದ ಮಠಾಧೀಶರು

250

Get real time updates directly on you device, subscribe now.

ತುಮಕೂರು: ಕಾಶ್ಮೀರಿ ಫೈಲ್ಸ್ ಸಿನಿಮಾ ನಿಜಕ್ಕೂ ಒಂದು ಸಂಚಲನವನ್ನು ಉಂಟು ಮಾಡಿದ್ದು, ಇದು ನಮ್ಮ ದೇಶದಲ್ಲಿ ನಡಿತಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಬಹಳ ಬರ್ಬರವಾದಂತಹ ಕೃತ್ಯ. ಇಂತಹ ಘಟನೆ ಮರುಕಳುಹಿಸದಂತೆ ನಾವೆಲ್ಲರೂ ಮಾಡಬೇಕಾಗಿದೆ ಎಂದು ಹಿರೇಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಎಸ್ ಮಾಲ್ ನ ಥಿಯೇಟರ್ ನಲ್ಲಿ ಕಾಶ್ಮೀರಿ ಫೈಲ್ ಸಿನಿಮಾ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾವೆಲ್ಲರೂ ಜಾಗೃತರಾಗಬೇಕು. ಧರ್ಮವನ್ನು ಬಹಳ ಕೆಟ್ಟ ರೀತಿಯಲ್ಲಿ ವ್ಯಾಖ್ಯಾನ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದರು.
ಜಗತ್ತಿನ ಯಾವ ಧರ್ಮವೂ ಹಿಂಸೆಯನ್ನು ಪ್ರಚೋಧಿಸುವುದಿಲ್ಲ. ಉಗ್ರವಾದ ಯಾವುದೇ ಧರ್ಮದಲ್ಲಿರಲಿ, ಅದನ್ನು ತಡೆಯಲು ಭಾರತದ ಎಲ್ಲಾ ನಾಗರಿಕರು ಪ್ರಯತ್ನಿಸಬೇಕಿದೆ. ಬರಿ ಹಿಂದೂಗಳು ಅಂತ ಅಲ್ಲ, ದೇಶಭಕ್ತ ಮುಸ್ಲಿಂರೂ ಇದರಲ್ಲಿ ಕೈಜೋಡಿಸಬೇಕು. ಭಯೋತ್ಪಾದಕರಿಗೆ, ಪ್ರತ್ಯೇಕತಾವಾದಿಗಳಿಗೆ ಯಾರು ಅವಕಾಶ ನೀಡಬಾರದು. ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು ಈ ದೇಶವನ್ನು ಕರೆದಿದ್ದಾರೆ. ಅದಕ್ಕೆ ಧಕ್ಕೆಯಾಗದಂತೆ ನಾವೆಲ್ಲರೂ ನಡೆದುಕೊಳ್ಳಬೇಕಿದೆ. ಧರ್ಮಾಂಧರು, ಧರ್ಮದ ಕುರಿತು ನಮ್ಮ ವ್ಯಾಖ್ಯಾನ ಸರಿ ಎಂದು ನಡೆದುಕೊಳ್ಳಬಾರದು. ಇದೊಂದು ಜಲಿಯನ್ ವಾಲಾಭಾಗ್ ಘಟನೆಯಂತೆ ನಡೆದು ಹೋಗಿದೆ. ಬ್ರಿಟಿಷರು ನಮಗೆ ಹೀಗೆ ಮಾಡಿದರು ಎಂಬುದನ್ನು ಮರೆಯುವ ಹೊತ್ತಿನಲ್ಲಿಯೇ ಇಂತಹ ಘಟನೆ, ಸ್ವಾತಂತ್ರ ನಂತರದಲ್ಲಿ ನಡೆದಿದೆ ಎಂಬುದು ತಲೆ ತಗ್ಗಿಸುವಂತಹ ಕೆಲಸ. ಇದನ್ನು ವೀಕ್ಷಿಸಿ, ಭಾರತದ ದೇಶಭಕ್ತ ಮುಸ್ಲಿಂರೂ ಖಂಡಿಸಬೇಕು. ಕಲ್ಲಿನಲ್ಲಿ ನಮ್ಮ ಇತಿಹಾಸ ಇತ್ತು. ಈಗ ಕ್ಯಾಮರಾ ಹೇಳುವಂತಾಗಿದೆ. ಇಂದು ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿಲ್ಲ ಎಂದು ಹಿರೇಮಠದ ಸ್ವಾಮೀಜಿ ನುಡಿದರು.
ಚಿತ್ರವನ್ನು ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ, ಬೆಳ್ಳಾವಿಯ ಶ್ರೀಕಾರದ ವೀರಬಸವ ಸ್ವಾಮೀಜಿ ಸೇರಿದಂತೆ ೩೩ಕ್ಕು ಹೆಚ್ಚು ಮಠಾಧೀಶರು ಚಿತ್ರ ವೀಕ್ಷಿಸಿದರು.

Get real time updates directly on you device, subscribe now.

Comments are closed.

error: Content is protected !!