ಅತಂತ್ರದಲ್ಲಿದ್ದ ವಲಸೆ ಕಾರ್ಮಿಕರಿಗೆ ನೆರವು

137

Get real time updates directly on you device, subscribe now.

ವರದಿ: ಮಾರುತಿ, ಮಧುಗಿರಿ


ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಕಾಮನಹಳ್ಳಿ, ಮಧುಗಿರಿ ತಾ.

ಕರೋನ ಲಾಕ್ ಡೌನ್ ಸಂದರ್ಭದಲ್ಲಿ ಈ ಕಾರ್ಮಿಕರು ರಾಜ್ಯದ ಚಳ್ಳಕೆರೆ ಶಿವಮೊಗ್ಗ ಮತ್ತು ಹಾಸನ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು ಇವರೆಲ್ಲ ಕಾಂಕ್ರಿಟ್ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡಲಾಗಿದೆ.

ಮಧುಗಿರಿ: ಕರೋನಾ ಎಫೆಕ್ಟ್ ನಿಂದಾಗಿ ಒರಿಸ್ಸಾ ಮತ್ತು ಸೀಮಾಂಧ್ರದ ವಲಸೆ ಕಾರ್ಮಿಕರಿಗೆ ತಮ್ಮ ರಾಜ್ಯದವರೇ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಷ್ಟಕಾಲದಲ್ಲಿ ಸ್ಪಂದಿಸಿದ್ದಕ್ಕೆ ತೊಂಬತ್ತೈದು ಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನು ಕಾಮನಹಳ್ಳಿ ಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಂಗಲು ಅನುವು ಮಾಡಿಕೊಟ್ಟಿದ್ದಕ್ಕೆ ಕೃತಜ್ಞರಾಗಿದ್ದಾರೆ.
ಇವರುಗಳಲ್ಲಿ 45 ಪುರುಷರು 43 ಮಹಿಳೆಯರು ಇಬ್ಬರು ಮಕ್ಕಳಿದ್ದಾರೆ. ಮಹಿಳೆಯರು ಮೊದಲನೇ ಅಂತಸ್ತಿನ ನಾಲ್ಕು ರೂಮುಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು ಪುರುಷರಿಗೂ ನಾಲ್ಕು ರೂಮುಗಳನ್ನು ಕೆಳ ಹಂತದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿರುವ ಕುಟುಂಬವನ್ನು ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇವರಾರೂ ಹೊರಬಾರದಂತೆ ಮೀಸಲು ಪಡೆಯ ಪೊಲೀಸರನ್ನು ಕಾವಲಿಗಿಡಲಾಗಿದೆ.

ಕರೋನ ಲಾಕ್ ಡೌನ್ ಸಂದರ್ಭದಲ್ಲಿ ಈ ಕಾರ್ಮಿಕರು ರಾಜ್ಯದ ಚಳ್ಳಕೆರೆ ಶಿವಮೊಗ್ಗ ಮತ್ತು ಹಾಸನ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು ಇವರೆಲ್ಲ ಕಾಂಕ್ರಿಟ್ ಕೆಲಸ ಮಾಡುವವರಾಗಿದ್ದಾರೆ. ಇವರುಗಳ ನಾಲ್ಕು ಮಿನಿ ಲಾರಿಗಳಲ್ಲಿ ಪ್ರಯಾಣ ಬೆಳೆಸುವಾಗ ಶಿರಾದಲ್ಲಿ ನೀರಿನ ಬಾಟಲ್ ಮತ್ತು ಬಿಸ್ಕೆಟ್ ಖರೀದಿಸುತ್ತಿದ್ದ ಪೊಲೀಸರು ಬೆನ್ನತ್ತಿದ್ದಾರೆ ಅಲ್ಲಿಂದ ಅವರು ಪ್ರಕಾಶಂ ಜಿಲ್ಲೆಯ ಕನಗಿರಿ ಮಂಡಲದ ಸಿಎಸ್ ಪುರ – ಅಮರಾಪುರದ ಮೂಲಕ ಪ್ರಯಾಣಿಸಬೇಕಾಗಿತ್ತು ಆದರೆ ಸೀಮಾಂಧ್ರದ ಚೆಕ್ ಪೋಸ್ಟ್ ನಲ್ಲಿ ಮಡಕಸಿರಾ ಸಿಪಿಐ ಮತ್ತು ಎಂ.ಆರ್.ಒ ರವರು ಇವರನ್ನು ಹಿಂದಕ್ಕೆ ಕಳುಹಿಸಿದ್ದಾರೆ ಇವರು ಬರಗೂರು ಪಟ್ಟನಾಯಕನಹಳ್ಳಿ ಮಾರ್ಗಮಧ್ಯದಲ್ಲಿ ಬರುವ ಹುಣಸೆ ತೋಪಿನಲ್ಲಿ ವಾಸ್ತವ್ಯ ಹೂಡಿದ್ದರು. ಶಿರಾದಲ್ಲಿ ಕರೋನಾ ಪಾಸಿಟಿವ್ ಕಂಡು ಬಂದಿದ್ದರಿಂದ ಇವರನ್ನು ತುಮಕೂರು ಜಿಲ್ಲಾಧಿಕಾರಿಗಳು ಮಧುಗಿರಿ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು. ಅದರಂತೆ ಮಧುಗಿರಿ ತಾಲ್ಲೂಕು ಆಡಳಿತದ ತಹಸೀಲ್ದಾರ್ ಇವರನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಕರೆ ತಂದಿದ್ದಾರೆ.
ಇವರಿಗೆ ಪ್ರತಿನಿತ್ಯ ಬೆಳಗಿನ ಉಪಹಾರ ಟೀ ಎರಡು ಹೊತ್ತು ಊಟ ನೀಡಲಾಗುತ್ತಿದೆ. ಮಾಸ್ಕ್ ಸ್ಯಾನಿಟೈಸರ್ ಸೋಪ್ ಗಳನ್ನು ಗುಡ್ ನೈಟ್ ಲೈವ್ ಇಂಡಿಯಾ ಸ್ವಯಂ ಸಂಸ್ಥೆಯವರು ನೀಡಿದ್ದಾರೆ ಶಾಲೆಯ ಪ್ರಾಂಶುಪಾಲರು ಟೂತ್ ಪೇಸ್ಟ್ ಮತ್ತು ಟೂತ್ ಬ್ರಷ್ ಗಳನ್ನು ನೀಡಿದ್ದಾರೆ. ಇವರುಗಳಿಗೆ ಮನೋ ತಜ್ಞರಿಂದ ಚರ್ಚೆಗಳು ಕರೋನಾ ಬಗ್ಗೆ ತಿಳಿವಳಿಕೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳು ನೀಡುತ್ತಿದ್ದು ಲಾಕ್ ಡೌನ್ ಮುಗಿಯುವವರೆಗೂ ಇವರಿಗೆ ಸೇವೆಗಳು ಮುಂದುವರಿಯಲಿದೆ.
ಉಪ ವಿಭಾಗಾಧಿಕಾರಿ ಡಾಕ್ಟರ್ ಕೆ.ನಂದಿನಿ ದೇವಿ ಡಿವೈಎಸ್ಪಿ ಎಂ.ಪ್ರವೀಣ್, ತಹಶೀಲ್ದಾರ್ ಡಾ.ವಿಶ್ವನಾಥ್, ಸಮಾಜ ಕಲ್ಯಾಣಾಧಿಕಾರಿ ಟಿಎಚ್ಒ ರಮೇಶ್ ಬಾಬು, ತಾಪಂ ಇಒ ದೊಡ್ಡಸಿದ್ದಯ್ಯ ಹಾಗೂ ಮಧುಗಿರಿ ತಾಲ್ಲೂಕು ಆಡಳಿತ ಇತರೆ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Get real time updates directly on you device, subscribe now.

Comments are closed.

error: Content is protected !!