ಪ್ರತಿ ಹಳ್ಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹ

263

Get real time updates directly on you device, subscribe now.

ಪಾವಗಡ: ತಾಲೂಕಿನ ಎಲ್ಲ ಗ್ರಾಮಗಳಿಗೆ ಸರ್ಕಾರಿ ಬಸ್ ಕಲ್ಪಿಸುವಂತೆ ಆಗ್ರಹಿಸಿ ಮಂಗಳವಾರ ತಹಶೀಲ್ದಾರ್ ಕಚೇರಿ ಮುಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟಿಸಿದರು. ಸಾರಿಗೆ ಸಚಿವರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ತಾಲ್ಲೂಕಿನ ಪಳವಳ್ಳಿ ಕಟ್ಟೆಯ ಬಳಿ ಶನಿವಾರ ನಡೆದ ಅಪಘಾತ ಇಂದಿಗೂ ಮರೆಯಲು ಸಾಧ್ಯವಿಲ್ಲ, ಈ ದುರ್ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು, ೧೨೦ ಕ್ಕೂ ಅಧಿಕ ಜನ ಗಂಭೀರ ಗಾಯಗೊಂಡಿದ್ದರು. ಇದಕ್ಕೆ ನೇರ ಹೊಣೆ ಸರ್ಕಾರಿ ಬಸ್ ಗಳ ವ್ಯವಸ್ಥೆ ಇಲ್ಲದಿರುವುದೇ ಆಗಿದೆ ಎಂದು ಸಾರಿಗೆ ಇಲಾಖಾ ಅಧಿಕಾರಿಗಳ ನಿರ್ಲಕ್ಷತನ ಕುರಿತು ಆರೋಪಿಸಿದರು. ಇಂದಿಗೂ ಶೇ.೨೫ ರಷ್ಟು ಗ್ರಾಮಗಳಲ್ಲಿ ಸರ್ಕಾರಿ ಸಾರಿಗೆ ಸಂಚರಿಸುತ್ತಿದೆ ಬಿಟ್ಟರೆ ಮತ್ಯಾವ ಹಳ್ಳಿಗಳಿಗೂ ಸಂಪರ್ಕವಿಲ್ಲ. ತಾಲೂಕಿನ ಸಾರಿಗೆ ಡಿಪೋದಲ್ಲಿ ೪೨ ಬಸ್ ಗಳು ೭೨ ಮಾರ್ಗಗಳಲ್ಲಿ ಮಾತ್ರ ಪ್ರಸ್ತುತ ಸಂಚರಿಸುತ್ತಿವೆ, ಇನ್ನೂ ೪೮ ಮಾರ್ಗ ಗಳಲ್ಲಿ ಬಸ್ ವ್ಯವಸ್ಥೆ ಇಲ್ಲ, ಪರಿಣಾಮ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಪ್ರತಿಭಟನ ನಿರತ ವಿದ್ಯಾರ್ಥಿಗಳು ಅಲವತ್ತುಕೊಂಡರು.
ತಾಲೂಕಿನಲ್ಲಿ ಡಿಪೋ ತೆರೆದಿದ್ದರೂ ಸರ್ಕಾರಿ ಬಸ್ ಸೌಲಭ್ಯ ಒದಗಿಸಲು ವಿಫಲರಾಗಿರುವುದು ದುರಂತವೇ ಸರಿ, ಕೂಡಲೇ ಪಾವಗಡ ತಾಲೂಕಿನ ಎಲ್ಲ ಮಾರ್ಗಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ಅನುಕೂಲ ಮಾಡಿಕೊಡಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮನವಿ ಮಾಡಿತು.
ಈ ಬೇಡಿಕೆ ಬಗೆಹರಿಯದಿದ್ದಲ್ಲಿ ಮುಂದಿನ ಹಂತದಲ್ಲಿ ಎಬಿವಿಪಿ ಸಂಘಟನೆ ವತಿಯಿಂದ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ತುಮಕೂರು ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್, ರೈತ ಸಂಘದ ಪೂಜಾರಪ್ಪ, ರಾಮಕೃಷ್ಣ, ಹೇಮಂತ, ಸಿದ್ದಾರ್ಥ್, ಮೋಹನ್ ಕುಮಾರ್, ಮನೋಜ್, ಮನು, ಚರಣ್ ಅನೀಲ, ನವೀನ್, ವಿನೋದ್, ಸುದರ್ಶನ ,ರಾಜೇಶ ಹಾಗೂ ರೈತ ಸಂಘಟನೆ ಮುಖಂಡರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!