ತುರುವೇಕೆರೆ: ೨೦೨೩ ರ ವಿಧಾನಸಭಾದ ಚುನಾವಣೆಯಲ್ಲಿ ತುರುವೇಕೆರೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗುವುದು ಖಚಿತ ಎಂದು ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಕುರಿತು ಮಾಹಿತಿ ನೀಡಿದ ಅವರು ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ೨೦ ಸಾವಿರ ಹೊಸ ಸದಸ್ಯರ ನೋಂದಣಿ ಮಾಡಲಾಗಿದೆ, ಕಾಂಗ್ರೆಸ್ ಪಕ್ಷದ ಡಿಜಿಟಲ್ ನೋಂದಣಿ ಅಭಿಯಾನಕ್ಕೆ ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅನೇಕರು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯಲು ಉತ್ಸುಕತೆ ತೋರುತ್ತಿದ್ದಾರೆ, ಮಾರ್ಚ್ ೩೧ ರೊಳಗೆ ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೫೦ ಸಾವಿರ ಸದಸ್ಯರ ನೋಂದಣಿ ನಿರೀಕ್ಷಿಸಲಾಗಿದೆ ಎಂದರು.
ತಾಲೂಕು ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮಕೃಷ್ಣಪ್ಪ ತಾಲೂಕಿನಲ್ಲಿ ಯಾವುದೇ ಬಣಗಳು ಇಲ್ಲ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಸಹಿಸದ ವಿರೋಧ ಪಕ್ಷಗಳ ಬಣ ರಾಜಕೀಯ ಎಂದು ಬಿಂಬಿಸುತ್ತಿವೆ. ೨೦೨೩ ರ ಚುನಾವಣೆಗೆ ನಮ್ಮ ಪಕ್ಷವು ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ, ಪಕ್ಷದಲ್ಲಿದ್ದು ಕೊಂಡು ಪಕ್ಷದ ವರ್ಚಸ್ಸಿಗೆ ಕುಂದು ತರುವ ಪ್ರಕ್ರಿಯೆ ಸಹಿಸಲಾಗದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಗೋಪಿನಾಥ್, ವೀಕ್ಷಕ ಮಂಜುನಾಥ್, ಬ್ಲಾಕ್ ಅಧ್ಯಕ್ಷರಾದ ಪ್ರಸನ್ನಕುಮಾರ್ ಮತ್ತು ನಾಗೇಶ್, ಹಿರಿಯ ಮುಖಂಡ ಟಿ.ಎಸ್.ದಾನಿಗೌಡ, ಕೊಳಾಲ ನಾಗರಾಜ್, ಗುಡ್ಡೇನಹಳ್ಳಿ ನಂಜುಂಡಪ್ಪ, ಎಂ.ಡಿ.ಮೂರ್ತಿ, ಕಿಸಾನ್ ಘಟಕದ ಸ್ವರ್ಣಕುಮಾರ್ ಸೇರಿದಂತೆ ಅನೇಕರು ಇದ್ದರು.
ತುರುವೇಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ
Get real time updates directly on you device, subscribe now.
Next Post
Comments are closed.