ಕುಣಿಗಲ್ ನಲ್ಲಿ ರಸ್ತೆ ಕಾಮಗಾರಿ ಕದನ

ರಸ್ತೆ ಅಭಿವೃದ್ಧಿ ವಿಚಾರ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆ- ಜಾಲತಾಣದಲ್ಲಿ ಚರ್ಚೆ ಜೋರು

283

Get real time updates directly on you device, subscribe now.

ಕುಣಿಗಲ್: ಪಟ್ಟಣದಲ್ಲಿ ೧೪ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹುಚ್ಚಮಾಸ್ತಿಗೌಡ ಸರ್ಕಲ್ ನಿಂದ ಗ್ರಾಮದೇವತೆ ದೇವಾಲಯ ಜಂಕ್ಷನ್ ವರೆಗಿನ ರಸ್ತೆ ಅಭಿವೃದ್ಧಿ ವಿಷಯ ಮೂರು ಪಕ್ಷಗಳ ಪಾಲಿಗೆ ಪ್ರತಿಷ್ಠೆ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
೨೦೦೮ರಲ್ಲಿ ಅಂದಿನ ಕಾಂಗ್ರೆಸ್ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಕೈಗೊಂಡ ದೂರದೃಷ್ಟಿ ಕ್ರಮದ ಕಾರ್ಯದಿಂದಾಗಿ ಪಟ್ಟಣದಲ್ಲಿ ಹಾದು ಹೋಗಿದ್ದ ಹಳೆ ರಾಷ್ಟಿçÃಯ ಹೆದ್ದಾರಿ ೪೮, ಸ್ಥಳೀಯರ ಮನ ಒಲಿಸಿ ಯಾವುದೇ ಪರಿಹಾರ ನೀಡದೆ ಹೆದ್ದಾರಿ ಅಗಲೀಕರಣ ಕಾರ್ಯ ನೆರವೇರಿತು, ಆದರೆ ಸಕಾಲದಲ್ಲಿ ಅನುದಾನ ಸಿಗದ ಕಾರಣ ಹೆದ್ದಾರಿ ಅಭಿವೃದ್ಧಿ ಕಾಣದೆ ಹೆದ್ದಾರಿ ಗುಂಡಿಗಳ ಆಗರವಾಯಿತು.
೨೦೧೩ರಲ್ಲಿ ಶಾಸಕರಾಗಿ ಆಯ್ಕೆಯಾದ ಜೆಡಿಎಸ್ನ ಶಾಸಕ ಡಿ.ನಾಗರಾಜಯ್ಯ ಅವರು ಸಿಎಂ ಸಿದ್ದರಾಮಯ್ಯನವರ ಗೆಳೆಯರಾಗಿದ್ದು, ಪಕ್ಷ ಬೇರೆಯಾದರೂ ಹೆದ್ದಾರಿಗೆ ಅನುದಾನ ಮಂಜೂರು ಮಾಡಿಸಲು ಶ್ರಮಿಸಿದ್ದು, ಈ ಮಧ್ಯೆ ತಾಲೂಕು ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸಂಸದರಾಗಿ ಕಾಂಗ್ರೆಸ್ನ ಡಿ.ಕೆ.ಸುರೇಶ್, ಉಪ ಚುನಾವಣೆ ಹಾಗೂ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲೂ ಗೆದ್ದು ಅವರು ಸಹ ಶಾಸಕರೊಂದಿಗೆ ಶ್ರಮಿಸಿದರಿಂದ ಹೆದ್ದಾರಿ ಅಭಿವೃದ್ಧಿಗೆ ಒಟ್ಟಾರೆ ೨೧ ಕೋಟಿ ಮಂಜೂರಾಯಿತು. ಆದರೆ ಗ್ರಾಮದೇವತೆ, ಹುಚ್ಚಮಾಸ್ತಿಗೌಡ ಸರ್ಕಲ್ ಜಂಕ್ಷನ್ಗಳ ಅಭಿವೃದ್ಧಿಗೆ ಕೆಲ ಒಂದು ತಾಂತ್ರಿಕ ತೊಡಕು ಕಾಣಿಸಿಕೊಂಡು ಅಭಿವೃದ್ಧಿ ಆಗದೆ ಹಾಗೆ ಉಳಿಯಿತು, ಇಲ್ಲಿಗೆ ಮಂಜೂರು ಆಗಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಅನುದಾನ ಪುರಸಭಾ ವ್ಯಾಪ್ತಿಯ ೨೧ನೇ ವಾರ್ಡ್ಗೆ ವ್ಯಯ ಮಾಡಲಾಯಿತು.
೨೦೧೮ರಲ್ಲಿ ನಡೆದ ವಿದಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಡಾ.ರಂಗನಾಥ ಶಾಸಕರಾಗಿ ಆಯ್ಕೆಯಾದರು, ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರು ಇದ್ದ ಕಾರಣ ಮೊದಲಿಗೆ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯ ವೇಗ ಪಡೆದುಕೊಂಡರೂ ಸರ್ಕಲ್ ಜಂಕ್ಷನ್ ಅಭಿವೃದ್ಧಿ ಯಾರು ಮಾಡಬೇಕೆಂಬ ಗೊಂದಲದಿಂದ ನೆನೆಗಿದಿಗೆ ಬಿದ್ದಿತು. ಕೆಲವರು ಪುರಸಭೆ ಎಂತಲೂ, ಇನ್ನು ಕೆಲವರು ಲೋಕೋಪಯೋಗಿ ಇಲಾಖೆ ಎಂತಲೂ, ರಾಜ್ಯಹೆದ್ದಾರಿ ಅಭಿವೃದ್ಧಿ ಇಲಾಖೆ ಎಂತಲೂ, ಕೆಶಿಪ್-೨ರ ಹಂತದಿಂದಲೂ ಮಾಡಬೇಕೆಂಬ ಚರ್ಚೆ ತೀವ್ರವಾಗಿ ನಡೆದು ಕೊನೆಗೆ ಅಂತಿಮ ಪರಿಹಾರ ಕಾಣದಂತಾಯಿತು.
ಕಳೆದ ತಿಂಗಳು ಸದರಿ ಸರ್ಕಲ್ ಜಂಕ್ಷನ್ ಅಭಿವೃದ್ಧಿಗೆ ಹೆದ್ದಾರಿ ಅಭಿವೃದ್ದಿ ಇಲಾಖೆ ವತಿಯಿಂದ ಲೋಕೋಪಯೋಗಿ ಇಲಾಖೆಗೆ ೨.೮೪ ಕೋಟಿ ಅನುದಾನ ಬಿಡುಗಡೆಯಾಗಿದ್ದು ಸದರಿ ಅನುದಾನ ಬಿಡುಗಡೆ ಮಾಡಿಸಿ, ಕಾಮಗಾರಿ ಅನುಷ್ಠಾನ ಮಾಡಿದ್ದ ತಮ್ಮ ಪಕ್ಷಗಳೆಂದು ಚರ್ಚೆಗೆ ಬಿದ್ದಿದ್ದರೆ ಜೆಡಿಎಸ್ ಮಾತ್ರ ಬೇರೆಯದೆ ವಾದ ಮಂಡನೆಗೆ ಮುಂದಾಗಿದೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಸಕ, ಸಂಸದರ ಸತತ ಶ್ರಮದಿಂದ ಅನುದಾನ ಬಿಡುಗಡೆಯಾಗಿದೆ ಎಂಬ ವಾದ ಮಂಡಿಸಿದರೆ, ಬಿಜೆಪಿಯ ಕಾರ್ಯಕರ್ತರು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಸಚಿವ ಅಶ್ವತನಾರಾಯಣ, ಗೋವಿಂದ ಕಾರಜೋಳ ಹಾಗೂ ಸಿ.ಸಿ.ಪಾಟೀಲ್ ಮೇಲೆ ಒತ್ತಡ ಹಾಕಿ ಅನುದಾನ ತಂದಿದ್ದಾರೆಂದು ಇದಕ್ಕೆ ಸಂಬಂಧಿಸಿದ ಪತ್ರಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಆದರೆ ರಸ್ತೆಗೆ ಅನುದಾನವನ್ನು ಯಾರು ಮಂಜೂರು ಮಾಡಿಸಿಲ್ಲ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಇಲಾಖೆಯಲ್ಲಿ ತಾಲೂಕಿನ ಬೇಗೂರು ಗ್ರಾಮದ ರಾಜ್ಯ ಮಟ್ಟದ ಅಧಿಕಾರಿ ಇದ್ದು ಅವರ ಶ್ರಮದಿಂದ ಅನುದಾನ ಮಂಜೂರು ಆಗಿದೆ ಎಂದು ಜೆಡಿಎಸ್ ಮುಖಂಡ ಡಾ.ರವಿ ಹಾಗೂ ಕಾರ್ಯಕರ್ತರು ವಾದ ಮಂಡಿಸುತ್ತಾ ಚರ್ಚೆಯಲ್ಲಿ ಮುಳುಗಿದ್ದಾರೆ. ಈ ಮಧ್ಯೆ ಪಟ್ಟಣದ ನಾಗರಿಕರು ಮಾತ್ರ ಕಾಮಗಾರಿ ಗುಣಮಟ್ಟ ನಿರ್ವಹಣೆಯಾಗಿ, ಸುಸಜ್ಜಿತ ರಸ್ತೆ ನಿರ್ಮಾಣ ಕಾಮಗಾರಿ ಬೇಗ ಮುಗಿದರೆ ಸಾಕು ಎನ್ನುತ್ತಿದ್ದಾರೆ.

Get real time updates directly on you device, subscribe now.

Comments are closed.

error: Content is protected !!