ಬಿ.ಎಸ್.ಎನ್.ಎಲ್ ಖಾಸಗೀಕರಣ ಹುನ್ನಾರ ಖಂಡನೀಯ

185

Get real time updates directly on you device, subscribe now.

ತುಮಕೂರು: ಸರ್ಕಾರ ಬಿ.ಎಸ್.ಎನ್.ಎಲ್ ಕಂಪನಿ ವ್ಯಾಪ್ತಿಯ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದು ಕಳೆದ ೨೦ ವರ್ಷಗಳಿಂದ ಬಿ.ಎಸ್.ಎನ್.ಎಲ್ ಎಂಪ್ಲಾಯಿಸ್ ಯುನಿಯನ್ ಸಂಘಟನೆ ಹೋರಾಟ ಮಾಡುತ್ತಿದೆ ಎಂದು ಬಿ.ಎಸ್.ಎನ್.ಎಲ್ ಎಂಪ್ಲಾಯಿಸ್ ಯೂನಿಯನ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ನರೇಶ್ ರೆಡ್ಡಿ ತಿಳಿಸಿದರು.

ನಗರದ ಬಿಎಸ್ಎನ್ಎಲ್ ಕಚೇರಿಯಲ್ಲಿ ೨೧ನೇ ವರ್ಷದ ವಾರ್ಷಿಕೋತ್ಸವ ಆಚರಣೆ ಮಾಡಿ ಧ್ವವಜಾರೋಹಣ ನೆರವೇರಿಸಿ ನಂತರ ಮಾತನಾಡಿ, ಬಿಎಸ್ಎನ್ಎಲ್ ಸಂಸ್ಥೆ ಉಳಿಸುವ ಸಲುವಾಗಿ ದೇಶಾದ್ಯಂತ ೨೦ ವರ್ಷಗಳಿಂದ ಆಲ್ ಇಂಡಿಯನ್ ಬಿಎಸ್ಎನ್ಎಲ್ ಎಂಪ್ಲಾಯಿಸ್ ಸಂಘಟನೆ ಹೋರಾಟ ನಡೆಸುತ್ತಲೇ ಬಂದಿದೆ, ಸರ್ಕಾರದ ಕಾರ್ಮಿಕ ನೀತಿಗಳಿಂದಾಗಿ ಬಿಎಸ್ಎನ್ಎಲ್ ಸಂಸ್ಥೆ ಇಂದು ಅವನತಿಯತ್ತ ಸಾಗುತ್ತಿದೆ, ಜ್ವಲಂತ ಸಮಸ್ಯೆಗಳ ನಡುವೆಯೂ ಬಿಎಸ್ಎನ್ಎಲ್ ಸಂಸ್ಥೆಯ ಸಿಬ್ಬಂದಿ ಒಗ್ಗಟ್ಟಾಗಿ ಯೂನಿಯನ್ ಕಟ್ಟಿಕೊಂಡು ನಗುಮುಖದಿಂದ ಗ್ರಾಹಕರಿಗೆ ಸೇವೆ ಮಾಡುತ್ತ ಬಂದಿದ್ದೇವೆ ಎಂದರು.
೨೦೧೭ರಲ್ಲಿ ಬಿಎಸ್ಎನ್ಎಲ್ ಸಂಸ್ಥೆಯ ಸಿಬ್ಬಂದಿಗೆ ವೇತನ ಪರಿಷ್ಕರಣೆ ಮಾಡಬೇಕಾಗಿತ್ತು, ಆದರೆ ಕೇಂದ್ರ ಸರ್ಕಾರ ಸಿಬ್ಬಂದಿ ಬಗ್ಗೆ ಕಾಳಜಿ ಇಲ್ಲದೆ ನಿರ್ಲಕ್ಷ್ಯ ದೋರಣೆ ತೋರುತ್ತಿದೆ, ಇದರ ನಡುವೆ ರಾಜ್ಯ ಸರ್ಕಾರ ಬಿಎಸ್ಎನ್ಎಲ್ ಸಂಸ್ಥೆಯ ಸ್ವಾಧೀನದಲ್ಲಿರುವ ಆಸ್ತಿಯನ್ನು ರಾಜ್ಯ ಸರ್ಕಾರ ಹಿಂಬಾಗಿಲಿನಿಂದ ಖಾಸಗೀಕರಣ ಮಾಡಲು ಹೊರಟಿದೆ, ಇದರ ವಿರುದ್ಧ ಈಗಾಗಲೇ ರಾಜ್ಯ ಮಟ್ಟದಲ್ಲಿ ಅನೇಕ ಪ್ರತಿಭಟನೆ ನಡೆದಿವೆ ಎಂದು ಹೇಳಿದರು.
ಈ ತಿಂಗಳ ೨೮, ೨೯ ರಂದು ದೇಶಾದ್ಯಂತ ನಡೆಯುವ ಕಾರ್ಮಿಕರ ಸಾರ್ವತ್ರಿಕ ಮುಷ್ಕರದಲ್ಲಿ ಬಿಎಸ್ಎನ್ಎಲ್ ಯೂನಿಯನ್ ಸಂಘಟನೆ ಕೂಡ `Áಗಿಯಾಗಿ ಹೋರಾಟ ನಡೆಸಲಿದೆ ಬಿಎಸ್ಸೆನ್ನೆಲ್ ಸಂಸ್ಥೆಯ ಹೆಸರಿನಲ್ಲಿರುವ ದೊಡ್ಡ ದೊಡ್ಡ ಆಸ್ತಿಯನ್ನು ಟಿಓಟಿ ಹೆಸರಿನಡಿ ಮಾರಾಟ ಮಾಡಲು ಹೊರಟಿದೆ, ಬಿಎಸ್ಎನ್ಎಲ್ ಸಂಸ್ಥೆಯನ್ನು ದಿವಾಳಿ ಮಾಡಲು ಹೊರಟಿದೆ, ಅದಕ್ಕಾಗಿ ನಾವು ಸರ್ಕಾರದ ಕಾರ್ಪೊರೇಟ್ ನೀತಿಯ ವಿರುದ್ಧವಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಏಪ್ರಿಲ್ ೨ ಮತ್ತು ೩ ರಂದು ಅಖಿಲ ಭಾರತ ಬಿಎಸ್ಎನ್ಎಲ್ ಎಂಪ್ಲಾಯಿಸ್ ಯೂನಿಯನ್ ಸಮ್ಮೇಳನ ನಡೆಯಲಿದ್ದು ಈ ಸಮ್ಮೇಳನಕ್ಕೆ ರಾಜ್ಯದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಎಸ್ಎನ್ಎಲ್ ಎಂಪ್ಲಾಯಿಸ್ ಯೂನಿಯನ್ನ ಎಂ.ಶಿವರಾಮ ರೆಡ್ಡಿ, ಎಸ್ಎನ್ಇಎ ಜಿಲ್ಲಾ ಕಾರ್ಯದರ್ಶಿ ಬಿ.ಕೆ.ಉಮೇಶ್, ಐಬಿಡಿಪಿಎ ಜಿಲ್ಲಾ ಕಾರ್ಯದರ್ಶಿ ವಜೀರ್ ಖಾನ್, ರಾಮಚಂದ್ರಯ್ಯ, ಕೆ.ಸಿ.ಶಿವಕುಮಾರಯ್ಯ, ಶ್ರೀರಾಮಚಂದ್ರ, ಎಸ್ಪಿ ರಾಜಣ್ಣ, ಮಂಜುನಾಥ, ಮಂಜುಳ ಇತರರು ಭಾಗಿಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!