ರೈತನಿಗೆ ಕೀ ಹೋಲ್ ಹೃದಯ ಸರ್ಜರಿ ಯಶಸ್ವಿ

ತುಮಕೂರಿನ ಶ್ರೀಸಿದ್ಧಾರ್ಥ ಆಸ್ಪತ್ರೆ ಅತ್ಯಾಧುನಿಕ ಚಿಕಿತ್ಸೆ

206

Get real time updates directly on you device, subscribe now.

ತುಮಕೂರು: ರೈತರೊಬ್ಬರಿಗೆ ಹೃದಯಕ್ಕೆ ಸಂಬAಧಿಸಿದ ಕೀ ಹೋಲ್ ಹೃದಯ ಶಸ್ತ್ರ ಚಿಕಿತ್ಸೆಯನ್ನು ನಮ್ಮ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದ ಶ್ರೀಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಸಿದ್ದಾರ್ಥ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳ್ಳಾವಿಯ ಅಸಲೀಪುರದ ೫೫ ವರ್ಷದ ರೈತ ಶಿವಕುಮಾರ್ ಹೃದಯ ಸಂಬAಧಿತ ಶಸ್ತç ಚಿಕಿತ್ಸೆಯಲ್ಲಿ ಯಶಸ್ವಿಯಾಗಿರುವ ಕರ್ನಾಟಕದ ಅಪರೂಪದ ವ್ಯಕ್ತಿಗಳಲ್ಲೊಬ್ಬರಾಗಿದ್ದಾದೆ, ಇಂತಹ ಸರ್ಜರಿಗಳನ್ನು ಪೂರೈಸಬೇಕಾದರೆ ವಿದೇಶಗಳಿಂದ ಆಧುನಿಕ ಉಪಕರಣ ಬಳಸಿ ಶಸ್ತç ಚಿಕಿತ್ಸೆ ನಡೆಸಬೇಕು, ಅದು ಕಷ್ಟ ಸಾಧ್ಯವಿದ್ದು, ನಮ್ಮ ವೈದ್ಯರು ಯಶಸ್ವಿಯಾಗಿದ್ದಾರೆ ಎಂದರು.
ಬೆAಗಳೂರಿನ ಬೆರಳಿಕೆಯಷ್ಟು ಆಸ್ಪತ್ರೆಗಳಲ್ಲಿ ಕೀ ಹೋಲ್ ಶಸ್ತç ಚಿಕಿತ್ಸೆ ನಡೆಯುತ್ತದೆ ಬಿಟ್ಟರೆ ಮೊಟ್ಟ ಮೊದಲ ಬಾರಿಗೆ ತುಮಕೂರಿನ ಸಿದ್ದಾರ್ಥ ಆಸ್ಪತ್ರೆಯಲ್ಲಿ ಈ ವ್ಯವಸ್ಥೆಯನ್ನ ಡಾ.ತಮೀಮ್ ಅಹಮ್ಮದ್ರ ತಂಡದ ನೇತೃತ್ವದಲ್ಲಿ ಕಲ್ಪಿಸಿ ಯಶಸ್ವಿಯಾಗಿದ್ದಾರೆ, ಜೊತೆಗೆ ಪ್ರತ್ಯೇಕವಾಗಿ ಹೃದಯ ಸಂಬAಧಿಸಿದ ರೋಗಿಗಳಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿರುವುದು ಗಮನಾರ್ಹವಾದದ್ದು ಎಂದರು.
ಇತ್ತೀಚಿಗೆ ಒಬ್ಬ ಬಡ ರೈತನ ಹೃದಯ ಸಂಬAಧಿತ ಕೀ ಹೋಲ್ ಹಾರ್ಟ್ ಸರ್ಜರಿ ಮಾಡಿ ಯಶಸ್ವಿಯಾಗಿರುವುದು ಇಡಿ ರಾಜ್ಯಕ್ಕೆ ಮಾದರಿಯಾಗಿದೆ, ಅಂತಾರಾಷ್ಟಿçÃಯ ಮಟ್ಟದಲ್ಲಿ ಮೈಲಿಗಲ್ಲು ಎನಿಸಿಕೊಂಡಿದೆ, ಇದೊಂದು ಆಧುನಿಕತೆಯ ವಿನೂತನ ಪ್ರಯೋಗವಾಗಿದೆ ಎಂದು ಶ್ಲಾಸಿದರು.
ಈಗಾಗಲೇ ಗ್ರಾಮೀಣ ಭಾಗದ ಮಂದಿಯನ್ನ ಗಮನದಲ್ಲಿಟ್ಟುಕೊಂಡು ಅನುಕೂಲವಾಗಲೆಂದು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಏಕೈಕ ಆಸ್ಪತ್ರೆ ಶ್ರೀಸಿದ್ಧಾರ್ಥ ಹಾಸ್ಪಿಟಲ್ ಆಗಿದೆ, ಇಲ್ಲಿಯವರೆಗೂ ೭೦ ಕ್ಕೂ ಹೆಚ್ಚು ಮಂದಿಗೆ ಓಪನ್ ಹಾರ್ಟ್ ಸರ್ಜರಿ ಮಾಡಿ ಯಶಸ್ವಿಯಾಗಿ ದಾಖಲೆ ಹೊಂದಲಾಗಿದೆ ಎಂದರು.
ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತಗಲುವ ವೆಚ್ಚ ಸುಮಾರು ೮ ಲಕ್ಷ, ಆದರೆ ನಮ್ಮಲ್ಲಿ ೨.೫ ಲಕ್ಷದೊಳಗೆ ಕೀ ಹೋಲ್ ಹೃದಯ ಚಿಕಿತ್ಸೆ ನಡೆಸಲಾಗುತ್ತಿದೆ, ಇನ್ಸೂರೆನ್ಸ್ ಆಯುಷ್ಮಾನ್, ಬಿಪಿಎಲ್ ಕಾರ್ಡ್ ಇರುವಂತಹವರಿಗೆ ಸರ್ಕಾರದ ವ್ಯಾಪ್ತಿಯಲ್ಲಿನ ಒಂದಷ್ಟು ಹಣ ಭರಿಸುವ ಯೋಜನೆಗಳು ಅನ್ವಯವಾಗುವಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಣ, ವೈದ್ಯಕೀಯ ಸೇವೆ ನನ್ನ ತಂದೆಯ ಕನಸಾಗಿತ್ತು, ಹಾಗಾಗಿ ಎರಡು ಕ್ಷೇತ್ರಗಳನ್ನ ಸರಿ ಸಮನಾಗಿ ತೂಗಿಸಿಕೊಂಡು ಜನಸೇವೆ ಮಾಡಲಾಗುತ್ತಿದೆ, ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿ, ಹೃದಯ ಸಂಬAಧಿಸಿದ ಚಿಕಿತ್ಸೆಯಲ್ಲಿ ಅನುಭವಿ ವೈದ್ಯರನ್ನೊಳಗೊಂಡ ಹಾರ್ಟ್ ಸರ್ಜರಿ ಕೇಂದ್ರ ಇದಾಗಿದೆ ಎಂದು ವೈದ್ಯರ ತಂಡವನ್ನು ಪ್ರಶಂಸಿದರು.
ಸಿದ್ದಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಮೇಲ್ವಿಚಾರಕ, ಕಾರ್ಡಿಯಾಕ್ ಫ್ರಾಂಟಿಡಾ ಸಂಸ್ಥೆ ನಿರ್ದೇಶಕ ಡಾ.ತಮೀಮ್ ಅಹಮದ್ ಮಾತನಾಡಿ ಹೃದಯದ ಮೂಳೆಯನ್ನ ಕತ್ತರಿಸಿ ಮಾಡುವ ಶಸ್ತç ಚಿಕಿತ್ಸೆಯ ಬದಲಾಗಿ ಒಂದು ಕಡೆ ಹಾರ್ಟ್ ಬೀಟ್ ಮಾಡುತ್ತಿರುವಾಗಲೇ ಇನ್ನೊಂದು ಕಡೆ ಶ್ವಾಸಕೋಶದಲ್ಲಿ ಉಸಿರಾಡುವ ಪರಿಸ್ಥಿತಿಯಲ್ಲಿ ಸರ್ಜರಿ ಮಾಡಿ ಯಶಸ್ವಿಯಾಗಿದ್ದೇವೆ, ಜರ್ಮನ್, ಅಮೆರಿಕಾ, ಇಂಗ್ಲೆAಡ್ ರಾಷ್ಟçಗಳಲ್ಲಿ ಸಾಮಾನ್ಯವಾಗಿ ಮಾಡುವ ಚಿಕಿತ್ಸೆ ಇದಾಗಿದ್ದು, ತುಮಕೂರಿನಲ್ಲಿ ಮೊದಲ ಬಾರಿಗೆ ಈ ಮಾದರಿ ಚಿಕಿತ್ಸೆ ನೀಡುವ ಪೈಕಿ ನಮ್ಮ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾರ್ಡಿಯಾಕ್ ಫ್ರಾಂಟಿಡಾ ಸಂಸ್ಥೆಯ ವಿಶಿಷ್ಟ ಸಾಧನೆ ಎಂದು ಬಣ್ಣಿಸಿದರು.
ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚ ಹೆಚ್ಚಾಗುವ ಕಾರಣ ಸಾಕಷ್ಟು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಅಂತಹವರ ಹಿತ ದೃಷ್ಟಿಯಿಂದ ಕೀ ಹೋಲ್ ಹಾರ್ಟ್ ಸರ್ಜರಿ ಮಾಡುವ ವಿನೂತನ ಪ್ರಯತ್ನ ನಮ್ಮದಾಗಿದೆ, ಅದಕ್ಕೆ ಡಾ.ಜಿ.ಪರಮೇಶ್ವರ್ ಅವರ ಸಹಕಾರ ತುಂಬಾನೇ ಇದೆ ಎಂದರು.
ಕೀ ಹೋಲ್ ಹೃದಯ ಸರ್ಜರಿಯಿಂದ ಯಶಸ್ವಿಯಾಗಿರುವ ರೈತ ಶಿವಕುಮಾರ್ ಮಾತನಾಡಿ, ಹದಿನೈದು ದಿನಗಳ ಹಿಂದೆ ಎದೆ ನೋವು ಕಾಣಿಸಿಕೊಂಡಿತು, ನಾನು ಗ್ಯಾಸ್ಟಿçಕ್ ಅಂತ ಉದಾಸೀನ ಮಾಡಿದೆ, ಮಾರನೇ ದಿನ ಖಾಸಗಿ ಆಸ್ಪತ್ರೆಗೆ ಧಾವಿಸಿ ಪರೀಕ್ಷಿಸಿದಾಗ ಹಾರ್ಟ್ ಅಟ್ಯಾಕ್ ಆಗಿದೆ ಎಂಬ ವಿಚಾರ ತಿಳಿದ ಕೂಡಲೇ ಸಿದ್ಧಾರ್ಥ ಆಸ್ಪತ್ರೆಗೆ ಬಂದೆ, ನರ ಬ್ಲಾಕ್ ಆಗಿದೆ, ಆಪರೇಷನ್ ಮಾಡಿಸಿದರೆ ಸರಿ ಹೋಗ್ತೀರಿ ಎಂದು ಹೇಳಿ ವಿದೇಶದಿಂದ ಸಾಧನ, ಸಲಕರಣೆಗಳನ್ನು ತರಿಸಿ ಆಪರೇಷನ್ ಮಾಡಿ ಗುಣಮುಖರನ್ನಾಗಿ ಮಾಡಿದರು, ಅದೂ ಕೂಡ ಕಡಿಮೆ ವೆಚ್ಚದಲ್ಲಿ ಎಂದು ಖುಷಿ ವ್ಯಕ್ತಪಡಿಸಿದರು.
ಈ ಸಂದಭðದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಸಿಇಒ ಪಿ.ಕೆ.ಡಾ.ದೇವದಾಸ್, ಪ್ರಾಂಶುಪಾಲ ಡಾ.ಮಹಾಪಾತ್ರ, ಹಾರ್ಟ್ ಸೆಂಟರ್ ಸಿಇಒ ಡಾ.ಪ್ರಭಾಕರ್ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!