ಬೇಡಿಕೆ ಈಡೇರಿಕೆಗೆ ಕೆಎಸ್ಆರ್ಟಿಸಿ ನೌಕರರ ಹೋರಾಟ ೨೯ಕ್ಕೆ

151

Get real time updates directly on you device, subscribe now.

ತುಮಕೂರು: ಮುಷ್ಕರದ ವೇಳೆ ಸೇವೆಯಿಂದ ವಜಾಗೊಂಡಿರುವ ನೌಕರರ ಮರು ನೇಮಕ, ಸರಕಾರಿ ನೌಕರರಿಗೆ ಸಮಾನವಾದ ವೇತನ, ಕಾರ್ಮಿಕರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಸೇರಿದಂತೆ ಹಲವು ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಮಾರ್ಚ್ ೨೯ ರಂದು ಒಂದು ದಿನದ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್ಆರ್ಟಿಸಿ ನಿಗಮಗಳ ನೌಕರರಫೆÃಡರೇಷನ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಂಜುನಾಥ್ ತಿಳಿಸಿದ್ದಾರೆ.

ನಗರದ ಜನಚಳವಳಿ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರ ನೀಡುತ್ತಿದ್ದ ಅತ್ಯಂತ ಕಡಿಮೆ ವೇತನ ವಿರೋಧಿಸಿ ಮುಷ್ಕರ ನಡೆಸುತಿದ್ದ ನೌಕರರ ವಿರುದ್ಧ ೧೯೭೪ರ ರಸ್ತೆ ಸಾರಿಗೆ ನಿಗಮದ ನೌಕರರ ಶಿಸ್ತು ಮತ್ತು ನಡತೆ ನಿಯಮಗಳನ್ನು ಗಾಳಿಗೆ ತೂರಿ ೨೫೦೦ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿರುವುದಲ್ಲದೆ, ಟ್ರೆöÊನಿ, ಪ್ರೊಬೇಷನರಿ ನೌಕರರನ್ನು ವಜಾಗೊಳಿಸಲಾಗಿದೆ, ಇದು ಕಾನೂನು ಬಾಹಿರ ಕೃತ್ಯವಾಗಿದೆ ಎಂದರು.
ನೆರೆಯ ಮಹಾರಾಷ್ಟçದಲ್ಲಿ ಸಾರಿಗೆ ನೌಕರರು ನಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಲು ಒತ್ತಾಯಿಸಿ, ಕಳೆದ ೧೪೩ ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಅಲ್ಲಿ ಬಿಜೆಪಿ ಶಾಸಕರೇ ಮುಷ್ಕರಕ್ಕೆ ಬೆಂಬಲ ನೀಡಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಬಿಜೆಪಿಯ ಸರಕಾರವೇ ಇದ್ದರೂ ಮುಷ್ಕರ ನಿರತನ್ನು ಯಾವುದೇ ನಿಯಮಗಳನ್ನು ಪಾಲಿಸದೆ ವಜಾಗೊಳಿಸಲಾಗಿದೆ, ಇದು ಬಿಜೆಪಿ ಪಕ್ಷದ ಇಬ್ಬಗೆಯ ನೀತಿಯಲ್ಲವೇ ಎಂದು ಪ್ರಶ್ನಿಸಿದ ಮಂಜುನಾಥ್, ಸಾರಿಗೆ ಸಚಿವರು ಸದನದಲ್ಲಿ ಹೋದ, ಬಂದ ಕಡೆಯಲ್ಲಿ ವಜಾಗೊಂಡ ನೌಕರರನ್ನು ಮರು ನೇಮಕಗೊಳಿಸುವ ಭರವಸೆ ನೀಡಿದ್ದು ಬಿಟ್ಟರೆ, ನೌಕರರ ಬಗ್ಗೆ ಯಾರು ಕಾಳಜಿ ತೋರಿಸುತ್ತಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರ ಬಜೆಟ್ ನಲ್ಲಿ ಕೆಎಸ್ಆರ್ಟಿಸಿ ಅನುದಾನ ನೀಡಿದ್ದೇವೆ ಎಂದು ಸುಳ್ಳು ಹೇಳುತ್ತಿದೆ, ಕಳೆದ ಸಾಲಿನ ವಿದ್ಯಾರ್ಥಿ ರಿಯಾಯತಿ ಪಾಸ್ ನ ಮೊತ್ತ ೩೫೦೦ ಕೋಟಿ ರೂ.ಗಳನ್ನು ಸರಕಾರ ಕೆಎಸ್ಆರ್ಟಿಸಿಗೆ ನೀಡಬೇಕಾಗಿದ್ದು, ಇದರಲ್ಲಿ ೩೧೬೩ ಕೋಟಿಗಳನ್ನು ಈ ಸಾಲಿನ ಬಜೆಟ್ನಲ್ಲಿ ಘೋಷಿಸಿದೆ, ಇದನ್ನು ಬಿಟ್ಟರೆ ಒಂದು ನೈಯಾಪೈಸೆ ನೀಡಿಲ್ಲ, ನೆರೆಯ ಕೇರಳ ಸರಕಾರ ೪೦೦೦ ಬಸ್ಗಳಿಗೆ ವಾರ್ಷಿಕ ೧೦೦೦ ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ, ಅದೇ ರೀತಿ ೨೮ ಸಾವಿರ ಬಸ್ಗಳನ್ನು ಒಳಗೊಂಡಿರುವ ಕೆಎಸ್ಆರ್ಟಿಸಿಗೆ ಕನಿಷ್ಠ ವಾರ್ಷಿಕ ೫೦೦೦ ಕೋಟಿ ರೂ. ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಮಂಜುನಾಥ್ ತಿಳಿಸಿದರು.
ಕೆಎಸ್ಆರ್ಟಿಸಿಯ ನಾಲ್ಕು ನಿಗಮಗಳಿಂದ ಒಂದು ದಿನಕ್ಕೆ ೧೩ ಲಕ್ಷ ಲೀಟರ್ ಡೀಸೆಲ್ ಬಳಕೆ ಮಾಡುತ್ತಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಒಂದು ಲೀಟರ್ ಡಿಸೇಲ್ ೮೬ ರೂ. ಗಳಿಗೆ ಸಿಕ್ಕರೆ, ಸಗಟು ಖರೀದಿ ಎಂದು ಕೆಎಸ್ಆರ್ಟಿಸಿಗೆ ಒಂದು ಲೀಟರ್ಗೆ ೧೦೬ಗೆ ನೀಡಲಾಗುತ್ತಿದೆ, ದಿನವೊಂದಕ್ಕೆ ೨.೬೦ ಕೋಟಿ ರೂ. ಹೆಚ್ಚುವರಿಯಾಗಿ ಕೆಎಸ್ಆರ್ಟಿಸಿ ವ್ಯಯಿಸುತ್ತಿದೆ, ಹಾಗಾಗಿ ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಸಾರಿಗೆ ಖಾಸಗೀಕರಣ ಕೈಬಿಡಬೇಕು, ಕಾರ್ಮಿಕ ವಿರೋಧಿಯಾಗಿರುವ ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಬೇಕು ಹಾಗೂ ಅಧð ವೇತನ ಪದ್ಧತಿ ನಿಲ್ಲಿಸಿ, ನಿಗದಿತ ದಿನಾಂಕದAದು ವೇತನ ನೀಡಬೇಕು ಎಂಬ ಬೇಡಿಕೆಗಳನ್ನು ಒಳಗೊಂಡAತೆ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ, ಮಾರ್ಚ್ ೨೯ ರಂದು ನಡೆಯುವ ಈ ಪ್ರತಿ`Àಟನೆಯಲ್ಲಿ ಎಲ್ಲಾ ಸಾರಿಗೆ ನೌಕರರು ಪಾಲ್ಗೊಳ್ಳುವಂತೆ ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ನೌಕರರ ಫೆÃಡರೇಷನ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಫೆಡರೇಷನ್ನ ಗೌರವಾಧ್ಯಕ್ಷ ಸೈಯದ್ ಮುಜೀವ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಎ.ಆರ್.ದೇವರಾಜು, ತುಮಕೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಶಮೀವುಲ್ಲಾ.ಸಿ.ಎ., ಉಪಾಧ್ಯಕ್ಷ ರಮೇಶ್, ಜಿ. ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!