ಶಿರಾ: ೨೦೧೫-೧೬ರಲ್ಲಿ ಅಪ್ಪರ್ ಭದ್ರಾ ತುಮಕೂರು ನಾಲೆಗೆ ಯೋಜನೆ ರೂಪಿಸಿದ್ದೇ ನಾನು ಮತ್ತು ಸಿದ್ದರಾಮಯ್ಯ ಯೋಜನೆಗೆ ನಾವೇ ಅಪ್ಪ ಅಮ್ಮ ಎಂದು ಜಯಚಂದ್ರ ಆಕ್ರೋಶಿಸಿದರು.
ಬುಧವಾರ ಗೃಹ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಾ ತಾಲ್ಲೂಕಿಗೆ ೨.೪೫ ಟಿಎಂಸಿ ನೀರು ಮೀಸಲಿಡಲಾಗಿದೆ, ಹಿಂದಿದ್ದ ಕೆರೆಗಳ ಸಂಖ್ಯೆ ಹೆಚ್ಚಳ ಮಾಡುವ ಮೂಲಕ ಬಿಜೆಪಿ ಸರ್ಕಾರ ಎಲ್ಲಾ ಕೆರೆಗಳಿಗೆ ಕೇವಲ ಶೇ.೩೧.೬೪೫ ರಷ್ಟು ನೀರು ಹರಿಸುವ ಯೋಜನೆ ರೂಪಿಸಿದೆ, ಅಂದ್ರೆ ಕೆರೆಗಳಲ್ಲಿನ ಗುಂಡಿ ತುಂಬಿಸುವಷ್ಟು ಮಾತ್ರ ನೀರನ್ನು ಹರಿಸಲಾಗುತ್ತದೆ, ನಾವು ಕೆರೆಗೆ ನೀರು ಕೇಳಿದರೆ ಇವರು ಬಲಯ ಕಡೆ ಹೊಗುವವರಿಗೆ ಉಪಯೋಗವಾಗುವಷ್ಟು ನೀರನ್ನು ಬಿಡುತ್ತಾರಂತೆ.
ಯೋಜನೆಯAತೆ ತುಮಕೂರು ನಾಲೆಗೆ ಸುಮಾರು ೨೩೬೩ ರಷ್ಟು ಎಕರೆ ಭೂ ಸ್ವಾಧೀನವಾಗಬೇಕಿದೆ, ಅದರೊಟ್ಟಿಗೆ ೩೯೬ ಎಕರೆ ಸರ್ಕಾರಿ ಜಮೀನು ಸೇರಿ ಕೆಲಸ ಆಗಬೇಕಿದೆ, ಭೂ ಸ್ವಾಧೀನ ಪ್ರಕ್ರಿಯೆ ಇನ್ನೂ ಚುರುಕುಗೊಂಡಿಲ್ಲ, ಅವಾರ್ಡ್ ಆಗಿರುವುದು ೬೦೦ ಎಕರೆಗಾದರೆ, ೨೬೭ ಎಕರೆ ಜಮೀನಿಗೆ ಮಾತ್ರ ಹಣ ನೀಡಲಾಗಿದೆ, ಸರ್ಕಾರ ಇದೇ ವೇಗದಲ್ಲಿ ಕಾಮಗಾರಿ ನಡೆಸಿದರೆ ನೀರು ಹರಿಯಲು ಇನ್ನೂ ಹತ್ತು ಹನ್ನೆರಡು ವರ್ಷ ಬೇಕಾಗಬಹುದು, ಇಲ್ಲಿನ ಶಾಸಕರು ಮಾತ್ರ ತಾಲ್ಲೂಕಿಗೆ ಇನ್ನೆರಡು ವರ್ಷದಲ್ಲಿ ನೀರು ಹರಿಸಲಾಗುವುದು ಎನ್ನುತ್ತಾರೆ, ಹೇಗೆ ಹರಿಸುತ್ತಾರೆ ಎನ್ನುವ ಬಗ್ಗೆ ಅವರೆ ವಿವರಿಸಬೇಕು ಎಂದರು.
ಬೀದಿಗಿಳಿದು ಹೋರಾಟಕ್ಕೆ ಸಿದ್ಧ
ತುಮಕೂರು ನಾಲೆ ಯೋಜನೆ ಮೂಲ ಅಂದಾಜು ಪಟ್ಟಿ ೯೫೮ ಕೋಟಿಯದ್ದು, ಮಂಜೂರಾತಿ ವೇಳೆ ಅದನ್ನು ೧೧೬೮ ಕೋಟಿಗೆ ವಿಸ್ತರಿಸಲಾಗಿದೆ, ಇದಕ್ಕೆ ಟರ್ನ್ ಕೀ ಬೇಸಿಸ್ ಎನ್ನುತ್ತಾರೆ, ಹಾಗೆಂದರೆ ಭೂ ಸ್ವಾಧೀನಗೊಳ್ಳುವ ರೈತರಿಗೆ ಪರಿಹಾರ ನೀಡಬೇಕು, ಇದಕ್ಕಾಗಿ ೨೧೦ ಕೋಟಿ ಹಣ ವಿಸ್ತರಿಸಲಾಗಿದೆ, ಶಿರಾ ತಾಲ್ಲೂಕಿನಲ್ಲಿ ಹಲವೆಡೆ ಈಗಾಗಲೇ ಪೈಪ್ ಲೈನ್ ಕಾಮಗಾರಿ ನಡೆಸಲಾಗುತ್ತಿದ್ದು, ಎಕರೆಗಟ್ಟಲೆ ಜಮೀನುಗಳಲ್ಲಿ ಕೆಲಸ ನಡೆಸಿದರೂ ಸರಿಯಾಗಿ ಪರಿಹಾರ ನೀಡಲಾಗಿಲ್ಲ, ರೈತರ ಹೆಸರಿನಲ್ಲಿ ಮೀಸಲಿಟ್ಟಿರುವ ಹಣವನ್ನು ರೈತರಿಗೆ ನೀಡದೆ ಮೋಸ ಮಾಡಿದಲ್ಲಿ ಅಥವಾ ಮೂಲ ಯೋಜನೆಗೆ ಧಕ್ಕೆ ತರುವ ರೀತಿ ಸರ್ಕಾರ ನಡೆದುಕೊಂಡಲ್ಲಿ ನಾನು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ, ಇದು ಸರ್ಕಾರಕ್ಕೆ ಎಚ್ಚರಿಕೆ ಎಂದು ಜಯಚಂದ್ರ ಗುಡುಗಿದರು.
Comments are closed.