ಶಿರಾ: ಬಡವರಿಗೆ ನಿವೇಶನದ ಹಕ್ಕುಪತ್ರ ನೀಡುವಲ್ಲಿಯೂ ಯಡಿಯೂರಪ್ಪ, ಸೋಮಣ್ಣ ಅವರ ಪೋಟೋ ಹಾಕುವ ಮೂಲಕ ಬಿಜೆಪಿ ಪ್ರಚಾರ ನಡೆಸುತ್ತಿದೆ, ಪ್ರಚಾರಕ್ಕಾಗಿ ಬಿಜೆಪಿ ಎಷ್ಟು ಮಟ್ಟಕ್ಕೆ ಬೇಕಾದರೂ ಹೋಗ್ತಾರೆ ಅನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಆರೋಪಿಸಿದರು.
ಪ್ರಚಾರಕ್ಕೆ ಹಕ್ಕುಪತ್ರ ದುರುಪಯೋಗ: ನಗರದ ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇನು ಬಿಜೆಪಿ ಪಕ್ಷದಿಂದ ಹಂಚುತ್ತಿರುವ ನಿವೇಶನಗಳೇ? ಇವುಗಳನ್ನು ನೀಡಿರುವ ದಿನಾಂಕ ನೋಡಿದರೆ ಕೇವಲ ವಾರದ ಹಿಂದೆ ವಿತರಿಸಲಾಗಿದೆ, ಈಗ ಯಡಿಯೂರಪ್ಪ ಮುಖ್ಯಮಂತ್ರಿ ಅಲ್ಲ, ಸರ್ಕಾರದ ಯೋಜನೆಯಡಿ ವಿತರಿಸುತ್ತಿರುವ ಹಕ್ಕುಪತ್ರದಲ್ಲಿ ಅಧಿಕಾರದಲ್ಲಿ ಇಲ್ಲದ ಮಾಜಿ ಮುಖ್ಯಮಂತ್ರಿಗಳ ಪೋಟೋ ಹಾಕಿದ್ದಾರೆ ಎಂದ್ರೆ ಇವರ ಕ್ರೆಡಿಬಲಿಟಿ ಎಷ್ಟು ಎಂದು ಅಂದಾಜಿಸಿ, ಇದೂ ಒಂದು ತರಹ ಕೇಸರೀಕರಣ, ಇದಕ್ಕೆ ತಹಸೀಲ್ದಾರ್ ಸಹಿ ಮಾಡುತ್ತಾರೆ ಎಂದರೆ ಇದಕ್ಕಿಂತ ವಿಚಿತ್ರ ಬೇಕೆ ಎಂದು ವ್ಯಂಗ್ಯವಾಡಿದರು.
ನಾನು ಅಧಿಕಾರದಲ್ಲಿದ್ದಾಗ ಐದು ವರ್ಷದಲ್ಲಿ ೧೭ಸಾವಿರ ಮನೆ ಮಂಜೂರು ಮಾಡಿಸಿದ್ದೆ, ಇವರು ಇನ್ನೂ ಒಂದು ಮನೆಯನ್ನೂ ನೀಡಲಾಗಿಲ್ಲ, ನನ್ನ ಕಾಲದಲ್ಲಿ ಮಂಜೂರಾದ ಮನೆಗಳಿಗೆ ಕೊನೆಯ ಬಿಲ್ ಕೊಟ್ಟಿಲ್ಲ, ಈಗ ನೋಡಿದ್ರೆ ಹಕ್ಕುಪತ್ರದ ಮೂಲಕ ಪ್ರಚಾರ ನಡೆಸುತ್ತಿದ್ದಾರೆ, ಇವುಗಳನ್ನು ವಾಪಸ್ ಪಡೆದು ತಿಪ್ಪೆಗೆಸೆಯಿರಿ, ಕಾನೂನು ಬದ್ಧವಾಗಿ ಹೊಸ ಹಕ್ಕುಪತ್ರ ನೀಡಿ ಎಂದು ಒತ್ತಾಯಿಸಿದರು.
ವಿವರ ನೀಡಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ರಾಂತಿ ಬೆಂಚ್ ಗಳ ಬಗ್ಗೆ ಚರ್ಚೆ ಜೋರಾಗಿದೆ, ಈ ಬೆಂಚ್ ಗಳಿಗಾಗಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಹಣ ಬಳಸಲಾಗಿದೆ, ತುರ್ತು ಮತ್ತು ಅತ್ಯಂತ ಅಗತ್ಯ ಸಂದಭðಗಳಲ್ಲಿ ಬಳಸಬೇಕಾದ ಹಣವನ್ನು ವಿಶ್ರಾಂತಿ ಬೆಂಚ್ಗಳಿಗೆ ಬಳಸಲಾಗಿದೆ, ಆರ್ಟಿಐ ಮಾಹಿತಿಯಂತೆ ೧೫ ಲಕ್ಷ ಮತ್ತು ೨೫ ಲಕ್ಷಕ್ಕೆ ಆಡಳಿತಾತ್ಮಕ ಮಂಜೂರಾತಿ ದೊರೆತು ಲ್ಯಾಂಡ್ ಆರ್ಮಿ ಮತ್ತು ನಿರ್ಮಿತಿ ಕೇಂದ್ರಗಳ ಮೂಲಕ ಬೆಂಚ್ಗಳನ್ನು ಹಾಕಲಾಗಿದೆ. ಇದರಲ್ಲಿ ಶಾಸಕರ ಕೊಡುಗೆ ಎನ್ನುವ ಬಗ್ಗೆ ಪ್ರಶ್ನಿಸಿದರೆ ಶಾಸಕರು ಮೊಸರಿನಲ್ಲಿ ಕಲ್ಲು ಹುಡುಕುತ್ತಾರೆ ಎನ್ನುವ ನಾಜೂಕಿನ ಮಾತುಗಳಾಡುತ್ತಾರೆ, ಎಣಿಸಲು ಕಾರು ಕೊಡುವ ಬಗ್ಗೆ ಹೇಳುತ್ತಾರೆ, ನನಗೆ ಕಾರು ಕೊಡುವ ಬದಲು ಅವರೇ ಜನರಿಗೆ ವಿವರಗಳನ್ನು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ನಗರಸಭೆ ಸದಸ್ಯೆ ಪೂಜಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರೇಹಳ್ಳಿ ರಮೇಶ್, ಗುಳಿಗೇನಹಳ್ಳಿ ಆರ್. ನಾಗರಾಜು ಮೊದಲಾದವರು ಇದ್ದರು.
Get real time updates directly on you device, subscribe now.
Next Post
Comments are closed.